ದಾವಣಗೆರೆ: ನಗರದ ನಿಟುವಳ್ಳಿಯ ದುರ್ಗಾಂಬಿಕಾ ದೇವಸ್ಥಾನದ ಬಳಿ ಇರುವ ‘ಪವರ್ ಫಿಟ್ನೆಸ್ ಜಿಮ್‘ ಮಾಲೀಕ ಇಸ್ಮಾಯಿಲ್ ಮತ್ತು ಆತನ ತಾಯಿ ತನ್ನ ಮೇಲೆ ಮಾಡಿರುವ ಆರೋಪಗಳೆಲ್ಲವೂ ಸಂಪೂರ್ಣ ಸುಳ್ಳು ಎಂದು ಸಂತ್ರಸ್ತ ಮಹಿಳೆ ಪತ್ರಿಕಾಗೋಷ್ಠಿಯಲ್ಲಿ ಗಂಭೀರ ಸ್ಪಷ್ಟನೆ ನೀಡಿದ್ದಾರೆ. ತನಗೆ ಜಿಮ್‌ನಲ್ಲಿ ಮೋಸ ಮತ್ತು ಬ್ಲ್ಯಾಕ್‌ಮೇಲ್ ಮಾಡಲಾಗಿದ್ದು, ಮಾನ ಹರಾಜು ಹಾಕುವ ಯತ್ನ ನಡೆದಿದೆ ಎಂದು ಅವರು ಕಣ್ಣೀರು ಹಾಕಿದ್ದಾರೆ.
ಆಕಾಶ್ ಹೆಸರಿನಲ್ಲಿ ವಂಚನೆ:
ಸುದ್ದಿಗೋಷ್ಠಿಯಲ್ಲಿ ಜಿಮ್‌ನಲ್ಲಿ ನಡೆದ ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಸಂತ್ರಸ್ತೆ, “ನಾನು ಕಳೆದ ಒಂದೂವರೆ ವರ್ಷದಿಂದ ಪವರ್ ಫಿಟ್ನೆಸ್ ಜಿಮ್‌ಗೆ ಹೋಗುತ್ತಿದ್ದೆ. ಅಲ್ಲಿ ಆಂಜನೇಯ ಹಾಗೂ ಗಣೇಶನ ಫೋಟೋಗಳನ್ನು ಇಟ್ಟುಕೊಂಡು ಜಿಮ್ ಮಾಲೀಕ ತನ್ನ ಹೆಸರನ್ನು ‘ಆಕಾಶ್’ ಎಂದು ಹೇಳಿಕೊಂಡಿದ್ದ. ಆದರೆ ಕೇವಲ ಐದಾರು ತಿಂಗಳ ಹಿಂದಷ್ಟೇ ಆತನ ನಿಜವಾದ ಹೆಸರು ‘ಇಸ್ಮಾಯಿಲ್’ ಎಂಬುದು ನನಗೆ ಗೊತ್ತಾಯಿತು” ಎಂದು ಆತ ನಡೆಸಿದ ನಂಬಿಕೆ ದ್ರೋಹವನ್ನು ಬಹಿರಂಗಪಡಿಸಿದರು.
ಬಟ್ಟೆ ಬದಲಿಸುವ ವಿಡಿಯೋ ಇಟ್ಟುಕೊಂಡು ಅತ್ಯಾಚಾರ:
“ಜಿಮ್‌ನಲ್ಲಿ ನಾನು ಬಟ್ಟೆ ಬದಲಾಯಿಸುವ (ಡ್ರೆಸ್ ಚೇಂಜ್) ವೇಳೆಯ ವಿಡಿಯೋವನ್ನು ರಹಸ್ಯವಾಗಿ ಚಿತ್ರೀಕರಿಸಲಾಗಿತ್ತು. ಆ ವಿಡಿಯೋ ಇಟ್ಟುಕೊಂಡು ಆತ ನನಗೆ ನಿರಂತರ ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ. ನಾನು ಕರೆದಾಗಲೆಲ್ಲಾ ಬರಬೇಕು ಹಾಗೂ ಚಿನ್ನಾಭರಣ ಕೊಡಬೇಕೆಂದು ಬೆದರಿಕೆ ಒಡ್ಡಿದ. ಇದೇ ವಿಡಿಯೋ ತೋರಿಸಿ ಹೆದರಿಸಿ ಕಳೆದ ಮಾರ್ಚ್ 27ರಂದು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ” ಎಂದು ಸಂತ್ರಸ್ತೆ ಗಂಭೀರ ಆರೋಪ ಮಾಡಿದ್ದಾರೆ.
ಚಿನ್ನ ಮತ್ತು ಹಣಕ್ಕಾಗಿ ನಿರಂತರ ಬೆದರಿಕೆ:
“ಕರಾಟೆ ಹಾಗೂ ಡ್ಯಾನ್ಸ್ ಕ್ಲಾಸ್ ಆರಂಭಿಸಲು ಹಣ ಬೇಕು, ತಕ್ಷಣ ನಿನ್ನ ಮಾಂಗಲ್ಯ ಸರ (ತಾಳಿ) ಮತ್ತು ಚಿನ್ನಾಭರಣಗಳನ್ನು ತಂದುಕೊಡು. ಇಲ್ಲದಿದ್ದರೆ ನಿನ್ನ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿದ್ದಾನೆ. ಅಷ್ಟೇ ಅಲ್ಲದೆ, ನನ್ನ ಪತಿ ಕೆಲಸ ಮಾಡುವ ಸ್ಥಳಕ್ಕೆ ಹೋಗಿ ಫೋಟೋ ಮತ್ತು ವಿಡಿಯೋಗಳನ್ನು ತೋರಿಸಿ ಬೆದರಿಕೆ ಹಾಕಿದ್ದಾರೆ. ಸಮಾಜದಲ್ಲಿ ನಮ್ಮ ಮಾನ ಮರ್ಯಾದೆ ಕಳೆಯಲು ಸಂಚು ಹೂಡಿದ್ದಾರೆ” ಎಂದು ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾರೆ.
ಎಡಿಟೆಡ್ ಫೋಟೋ, ಆಡಿಯೋ ಆರೋಪ:
“ಜಿಮ್‌ನಲ್ಲಿ ಯಾರದ್ದೋ ಮೊಬೈಲ್ ಕಳೆದುಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಬಳಿ ಬಲವಂತವಾಗಿ ಖಾಲಿ ಪೇಪರ್ ಮೇಲೆ ಸಹಿ ಪಡೆದಿದ್ದಾರೆ. ಯಾವುದೇ ದಾಖಲೆ ಇಲ್ಲದೇ ನಾಲ್ಕೂವರೆ ಲಕ್ಷ ರೂಪಾಯಿ ಹಣ ಕೊಟ್ಟಿದ್ದೇವೆ ಎಂದು ಹೇಳುವುದು ಸುಳ್ಳು. ನಾನು ಆರ್ಥಿಕವಾಗಿ ಸದೃಢವಾಗಿದ್ದು (ವೆಲ್ ಸೆಟಲ್ಡ್), ನನಗೆ ಯಾರ ಹಣದ ಅಗತ್ಯವೂ ಇಲ್ಲ. ಇನ್ನು ಹರಿದಾಡುತ್ತಿರುವ ಆಡಿಯೋ ನನ್ನದಲ್ಲ. ಅವರ ಕುಟುಂಬದ ತಾಯಿ ಜೊತೆ ನಾನು ಯಾವುದೇ ಸಂಪರ್ಕ ಹೊಂದಿಲ್ಲ. ನಾನು ಭಾಗವಹಿಸಿದ್ದ ಬರ್ತ್‌ಡೇ ಪಾರ್ಟಿ ಫೋಟೋಗಳನ್ನು ಕ್ರಾಪ್ ಮಾಡಿ, ಕೆಟ್ಟದಾಗಿ ಎಡಿಟ್ ಮಾಡಿ ನನಗೆ ಅವಹೇಳನ ಮಾಡುತ್ತಿದ್ದಾರೆ” ಎಂದು ಪತ್ರಿಕಾಗೋಷ್ಠಿಯಲ್ಲಿ ಸಂತ್ರಸ್ತೆ ಸ್ಪಷ್ಟನೆ ನೀಡಿದ್ದಾರೆ.
- Davanagere crime news today.
- Davanagere gym trainer blackmail controversy
- Davanagere gym victim press meet clarification
- Davanagere power fitness gym case
- Gym owner Ismail rape case Davanagere
- Gym trainer fake identity Akash case
- Nituvalli gym scandal
- ಇಸ್ಮಾಯಿಲ್ ಆಕಾಶ್ ಜಿಮ್ ಕೇಸ್
- ದಾವಣಗೆರೆ ಕ್ರೈಂ ಸುದ್ದಿ
- ದಾವಣಗೆರೆ ಜಿಮ್ ಅತ್ಯಾಚಾರ ಪ್ರಕರಣ
- ದಾವಣಗೆರೆ ಜಿಮ್ ಜಿಹಾದ್ ಕೇಸ್
- ದಾವಣಗೆರೆ ಜಿಮ್ ಬ್ಲ್ಯಾಕ್‌ಮೇಲ್ ಕೇಸ್
- ದಾವಣಗೆರೆ ಸಂತ್ರಸ್ತೆ ಸುದ್ದಿಗೋಷ್ಠಿ
- ನಿಟುವಳ್ಳಿ ದುರ್ಗಾಂಬಿಕಾ ದೇವಸ್ಥಾನ ಜಿಮ್
- ಪವರ್ ಫಿಟ್ನೆಸ್ ಜಿಮ್ ಇಸ್ಮಾಯಿಲ್





Leave a comment