Home ದಾವಣಗೆರೆ ‘ನಾನು ಮಾಡಿದ ಅತ್ಯಂತ ದಡ್ಡತನದ ಕೆಲಸ ಇದು!’: ಮೈಕ್ರೋಸಾಫ್ಟ್‌ನ ₹1.9 ಕೋಟಿ ಸಂಬಳದ ಕೆಲಸ ಬಿಟ್ಟು ಪಶ್ಚಾತ್ತಾಪ ಪಟ್ಟ ಯುವಕ
ದಾವಣಗೆರೆಉದ್ಯೋಗ ವಾರ್ತೆನವದೆಹಲಿಬೆಂಗಳೂರು

‘ನಾನು ಮಾಡಿದ ಅತ್ಯಂತ ದಡ್ಡತನದ ಕೆಲಸ ಇದು!’: ಮೈಕ್ರೋಸಾಫ್ಟ್‌ನ ₹1.9 ಕೋಟಿ ಸಂಬಳದ ಕೆಲಸ ಬಿಟ್ಟು ಪಶ್ಚಾತ್ತಾಪ ಪಟ್ಟ ಯುವಕ

Share
ಮೈಕ್ರೋಸಾಫ್ಟ್‌
Share

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಯುವ ಉದ್ಯೋಗಿಗಳು ಕೈತುಂಬಾ ಸಂಬಳ ತಂದುಕೊಡುವ ಕಾರ್ಪೊರೇಟ್ ಕೆಲಸಗಳನ್ನು ಬಿಟ್ಟು ಸ್ವಂತವಾಗಿ ಏನಾದರೂ ಸಾಧಿಸಲು (Startup or Content Creation) ಮುಂದಾಗುವುದು ಸಾಮಾನ್ಯವಾಗಿದೆ.

ಕೆಲವರು ಇದರಲ್ಲಿ ಯಶಸ್ವಿಯಾಗಿ ದುಪ್ಪಟ್ಟು ಸಂಪಾದಿಸಿದರೆ, ಇನ್ನು ಕೆಲವರ ಹಾದಿ ಅಂದುಕೊಂಡಷ್ಟು ಸುಲಭವಾಗಿರುವುದಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ, ಮೈಕ್ರೋಸಾಫ್ಟ್‌ನಲ್ಲಿ (Microsoft) ವಾರ್ಷಿಕ ಬರೋಬ್ಬರಿ 1.9 ಕೋಟಿ ರೂಪಾಯಿ ಪ್ಯಾಕೇಜ್ ಹೊಂದಿದ್ದ ಕೆಲಸವನ್ನು 26ನೇ ವಯಸ್ಸಿಗೆ ರಿಸೈನ್ ಮಾಡಿ, ಈಗ ತೀವ್ರ ಪಶ್ಚಾತ್ತಾಪ ಪಡುತ್ತಿರುವ ಕ್ರಿಶ್ಚಿಯನ್ ಹಾರ್ಮ್ಸ್ (Christian Harms) ಎಂಬ 27 ವರ್ಷದ ಯುವಕನ ಕಥೆ ಈಗ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಸ್ವಿಟ್ಜರ್ಲೆಂಡ್‌ನಿಂದ ಆಸ್ಟ್ರೇಲಿಯಾಕ್ಕೆ ಯಾವುದೇ ಪ್ಲಾನ್ ಇಲ್ಲದೆ ವಲಸೆ ಹೋದ ಕ್ರಿಶ್ಚಿಯನ್, ಕಾರ್ಪೊರೇಟ್ ಪ್ರಪಂಚವನ್ನು ತೊರೆದ ನಂತರ ತಾನು ಕಷ್ಟಪಟ್ಟು ಕಲಿತ 5 ಪ್ರಮುಖ ಪಾಠಗಳನ್ನು ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾನೆ.

 ಹಂಚಿಕೊಂಡ ಆ 5 ಕಹಿ ಸತ್ಯಗಳು ಇಲ್ಲಿವೆ:

ಕೆಲಸ ಬಿಟ್ಟಿದ್ದು ಅತ್ಯಂತ ದಡ್ಡತನ: ಮೈಕ್ರೋಸಾಫ್ಟ್ ಬಿಟ್ಟಿದ್ದು ನನ್ನ ಜೀವನದ ಅತ್ಯಂತ ಮೂರ್ಖತನದ ನಿರ್ಧಾರ ಎನಿಸುತ್ತಿದೆ. ಅಲ್ಲಿ ಸಿಗುತ್ತಿದ್ದ ಸಂಬಳ, ಸ್ಥಿರತೆ ಮತ್ತು ಗೌರವವೇ ಬೇರೆ. ಕಾರ್ಪೊರೇಟ್ ಕಂಪನಿಗಳು ನಾವು ಕೆಲಸ ಬಿಟ್ಟು ಹೋಗದಂತೆ ಒಂದು ಭದ್ರಕೋಟೆ ನಿರ್ಮಿಸಿರುತ್ತವೆ. ನಾನು ಸರಿಯಾದ ಹಾದಿಯಲ್ಲೇ ಇದ್ದೇನೆ ಎಂದು ಮನಸ್ಸಿಗೆ ಅನ್ನಿಸಿದರೂ, ಕೆಲವು ದಿನಗಳ ತೀವ್ರ ಆತ್ಮಗೌರವದ ಕೊರತೆ ಮತ್ತು ಗೊಂದಲ ನನ್ನನ್ನು ಉಸಿರುಗಟ್ಟಿಸುವಂತೆ ಮಾಡುತ್ತದೆ.

ಕೊನೆಯ ಕ್ಷಣದ ಒತ್ತಡ: ಯಾವುದೇ ಕೆಲಸವಿಲ್ಲದೆ, ಯಾವುದೇ ನಿರ್ದಿಷ್ಟ ಯೋಜನೆ ಇಲ್ಲದೆ ಕೇವಲ 5 ತಿಂಗಳ ಬ್ಯಾಕಪ್ ಇಟ್ಟುಕೊಂಡು ಆಸ್ಟ್ರೇಲಿಯಾಕ್ಕೆ ಬಂದೆ. ನನ್ನ ರಿಟರ್ನ್ ಫ್ಲೈಟ್ ಟಿಕೆಟ್ ಬುಕ್ ಆಗುವ ಕೊನೆಯ ವಾರದಲ್ಲಷ್ಟೇ ನಾನು ಆನ್‌ಲೈನ್‌ನಲ್ಲಿ ಮೊದಲ ಡಾಲರ್ ಗಳಿಸಿದೆ. ತಿಂಗಳುಗಟ್ಟಲೆ ಪ್ಲಾನ್ ಮಾಡದ ಬದಲಾವಣೆಯನ್ನು ಕೊನೆಯ ಕ್ಷಣದ ಡೆಡ್‌ಲೈನ್ ಮಾಡಿಸಿತು. ಬೆನ್ನಿಗೆ ಚೂರಿ ಮುಟ್ಟಿದಾಗ ಮಾತ್ರ ನಾನು ಕೆಲಸ ಮಾಡುತ್ತೇನೆ ಎಂಬ ಸತ್ಯ ನನಗೆ ಬೇಸರ ತರಿಸಿದೆ.

ಅರ್ಧಕ್ಕೆ ನಿಂತ ‘ಹಾಫ್ ಐರನ್‌ಮ್ಯಾನ್’ ರೇಸ್: ನಾನು ಗಾಯಗೊಂಡಿದ್ದರೂ ಹಠಕ್ಕೆ ಬಿದ್ದು ಹಾಫ್ ಐರನ್‌ಮ್ಯಾನ್ ಸ್ಪರ್ಧೆಯಲ್ಲಿ ಭಾಗವಹಿಸಿದೆ. ಈಜು, ಸೈಕ್ಲಿಂಗ್ ಮುಗಿಸಿ ನಂತರ ರೇಸ್ ನಿಲ್ಲಿಸಬೇಕಾಗಿ ಬಂತು. ನನ್ನ ಅಹಂಗೆ ಪೆಟ್ಟು ಬಿದ್ದರೂ, ಇಡೀ ಸೀಸನ್ ಹಾಳಾಗಬಾರದು ಎಂದು ಅರ್ಧಕ್ಕೆ ಮನೆಗೆ ಮರಳಿದೆ.

ಭಯ ಮತ್ತು ದಿಕ್ಕಿಲ್ಲದ ಶ್ರಮ: ಯಾವುದೇ ಮಾರುಕಟ್ಟೆ ಸಂಶೋಧನೆ ಮಾಡದೆ ತಿಂಗಳುಗಟ್ಟಲೆ ಒಂದು ಬಿಸಿನೆಸ್ ಕಟ್ಟಲು ಶ್ರಮಿಸಿದೆ. ಅದನ್ನು ನಾನು ‘ಡು ಡಿಲಿಜೆನ್ಸ್’ (Due Diligence) ಎಂದು ಕರೆದುಕೊಂಡೆ. ಆದರೆ ವಾಸ್ತವದಲ್ಲಿ ಅದು ನನ್ನೊಳಗಿನ ಭಯವಾಗಿತ್ತು. ದಿಕ್ಕಿಲ್ಲದ ಕೆಲಸದಿಂದಾಗಿ ಕೈಯಲ್ಲಿ ಏನೂ ಉಳಿಯಲಿಲ್ಲ.

ಬ್ರ್ಯಾಂಡ್‌ಗಳಿಗಾಗಿ ವಿಡಿಯೋ ಮೇಕಿಂಗ್: 26ನೇ ವಯಸ್ಸಿನಲ್ಲಿ ಬರೋಬ್ಬರಿ $200k (ಸುಮಾರು 1.9 ಕೋಟಿ ರೂ.) ಸಂಬಳ ಬಿಟ್ಟು ಬ್ರ್ಯಾಂಡ್‌ಗಳಿಗೆ ವಿಡಿಯೋ ಮಾಡಲು ಬಂದೆ. ಆದರೆ ಯಾವುದೂ ಅಂದುಕೊಂಡಂತೆ ನಡೆಯಲಿಲ್ಲ. ನಾನು ಈ ಹೊತ್ತಿಗೆ ಒಬ್ಬ ದೊಡ್ಡ ಸಂಸ್ಥಾಪಕನಾಗಬೇಕಿತ್ತು. ಕೆಲವೊಮ್ಮೆ ನನ್ನ ಹಳೆಯ ವರ್ಷನ್‌ನ ನಂಬಿಕೆಗೆ ದ್ರೋಹ ಮಾಡುತ್ತಿದ್ದೇನೆ ಅನಿಸುತ್ತದೆ.

“ಸ್ಥಿರವಾದ ಕೆಲಸವನ್ನು ಬಿಟ್ಟು ಹೊರಬಂದಾಗ ಜೀವನ ಹೇಗೆ ತಳಮಳಿಸುತ್ತದೆ ಎಂಬುದನ್ನು ನಾನು ಈಗ ದಾಖಲಿಸುತ್ತಿದ್ದೇನೆ. ನನ್ನದೇ ಹಣ ಗಳಿಸುವುದು, ಸ್ವಂತ ಬಿಸಿನೆಸ್ ಕಟ್ಟುವುದು ಅಂದುಕೊಂಡಷ್ಟು ಸುಲಭವಲ್ಲ” ಎಂದು ಕ್ರಿಶ್ಚಿಯನ್ ಹಾರ್ಮ್ಸ್ ಬರೆದುಕೊಂಡಿದ್ದಾನೆ. ಈತನ ಪೋಸ್ಟ್‌ಗೆ ನೆಟ್ಟಿಗರಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಹಲವರು ಈತನ ಪರಿಸ್ಥಿತಿಗೆ ಸಹಾನುಭೂತಿ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಮತ್ತಷ್ಟು ಕಷ್ಟಪಟ್ಟು ಕೆಲಸ ಮಾಡಲು ಸಲಹೆ ನೀಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles