ರಕ್ಷಣಾ ಇಲಾಖೆ, ಆಯ್ಕೆಯಾದ ರಾಜ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 2025ರ ಗಣರಾಜ್ಯೋತ್ಸಕ್ಕೆ ರಾಜ್ಯದಿಂದ ಈ ಬಾರಿ ಲಕ್ಕುಂಡಿಯ ಪ್ರಾಚೀನ ದೇವಾಲಯದ ಸ್ತಬ್ದಚಿತ್ರದ ಪ್ರದರ್ಶಿಸುವ ಸಾಧ್ಯತೆ ಹೆಚ್ಚಿದೆ.ವಿಶ್ವ ಪಾರಂಪರಿಕ ತಾಣವಾಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರಯತ್ನ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ರಕ್ಷಣಾ ಇಲಾಖೆ ಪ್ರತಿ 3ವರ್ಷಕ್ಕೆ ಒಂದು ಬಾರಿ ವಿವಿಧ ರಾಜ್ಯಗಳ ಸ್ತಬ್ದ ಚಿತ್ರ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಿದೆ.ಪರೇಡ್ ಅಲ್ಲಿ 15ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಾತ್ರ ಅವಕಾಶ ಸಿಮೀತಗೊಳಿಸಲಾಗಿದೆ, ಅಂತರ್ ರಾಜ್ಯ ಮಂಡಳಿಯ ಮೇಲೆ ದೇಶವನ್ನು 6 ವಲಯಗಳನ್ನಾಗಿ ವಿಭಜಿಸಲಾಗಿದೆ.ಪ್ರತಿ ವಲಯಕ್ಕೂ ಕೋಟಾ ನಿಗದಿ ಮಾಡಿದ್ದು , 2024,25,26 ರಲ್ಲಿ ಯಾವ ಯಾವ ರಾಜ್ಯಗಳು ಸ್ತಬ್ದಚಿತ್ರ ಪ್ರದರ್ಶಿಸಬೇಕು ಎಂಬುದರ ಪಟ್ಟಿ ಹೀಗಾಗಲೇ ಬಿಡುಗಡೆಯಾಗಿದ್ದು, ಆ ಪ್ರಕಾರ ದಕ್ಷಿಣ ರಾಜ್ಯಗಳ ಪೈಕಿ ಕರ್ನಾಟಕ ಮತ್ತು ಅಂಧ್ರಕ್ಕೆ ಅವಕಾಶ ಸಿಕ್ಕಿದೆ.