SUDDIKSHANA KANNADA NEWS/ DAVANAGERE/ DATE:21-12-2024
ದಾವಣಗೆರೆ: ವಿಧಾನ ಪರಿಷತ್ತಿನ ಅಧಿವೇಶನದ ಸಂದರ್ಭದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರವರಿಗೆ ಶಾಸಕ ಸಿ ಟಿ ರವಿಯವರು ಬಳಸಿದ ಪದ ಅತ್ಯಂತ ಖಂಡನೀಯ. ಕೂಡಲೇ ಅವರನ್ನು ಸಭಾಪತಿಗಳು ವಿಧಾನ ಪರಿಷತ್ತಿನಿಂದ ವಜಾ ಮಾಡಬೇಕು ಹಾಗೂ ಅವರಿಗೆ ಅತ್ಯಂತ ಕಠಿಣ ಶಿಕ್ಷೆ ನೀಡಬೇಕು ಎಂದು ದಾವಣಗೆರೆ ಮಹಾನಗರ ಪಾಲಿಕೆಯ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ ಅಧ್ಯಕ್ಷೆ ಸವಿತಾ ಹುಲ್ಲುಮನೆ ಗಣೇಶ್ ಆಗ್ರಹಿಸಿದಾರೆ.
ಭಾರತಮಾತೆಗೆ ಜೈಕಾರ ಹಾಕುವುದಕ್ಕೆ ಗುತ್ತಿಗೆ ಇವರೇ ಪಡೆದಿರೋ ರೀತಿಯಲ್ಲಿ ಆಡುವ ಬಿಜೆಪಿಗರು ಹೆಣ್ಮಕ್ಕಳಿಗೆ ನೀಡುವ ಗೌರವ ಇದೇನಾ ಎಂದು ಪ್ರಶ್ನಿಸಿದ್ದಾರೆ.
ಹೆಣ್ಮಕ್ಕಳಿಗೆ ಯಾವುದೇ ಪಕ್ಷದ ನಾಯಕರು ಮಾತಾಡಿದರೆ ಅಂತವರನ್ನು ಉಗ್ರ ಶಿಕ್ಷೆಗೆ ಗುರಿಪಡಿಸುವ ಕಾನೂನು ತರಬೇಕಿದೆ. ಅದು ರಾಜಕಾರಣಿಗಳೇ ಇರಲಿ ಸಾಮಾನ್ಯರೇ ಇರಲಿ ಎಲ್ಲರಿಗೂ ಕಠಿಣ ಶಿಕ್ಷೆಯಾಗಬೇಕು ಎಂದು ಸವಿತಾ ಹುಲ್ಲುಮನೆ ಗಣೇಶ್ ಒತ್ತಾಯಿಸಿದ್ದಾರೆ.