SUDDIKSHANA KANNADA NEWS/ DAVANAGERE/ DATE:19-12-2024
ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಸಿ. ಟಿ. ರವಿ ಅವರನ್ನು ಬಂಧಿಸಲಾಗಿದೆ.
ಬೆಳಗಾವಿಯ ಹಿರೇಬಾಗೇವಾಡಿಯ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದು, ಎಂಎಲ್ ಸಿ ಸಿ. ಟಿ. ರವಿ ಬಂಧಿಸಿ ಪೊಲೀಸರು ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಕರೆದೊಯ್ಯುತ್ತಿದ್ದಾರೆ. ಸ್ವಲ್ಪ ದೂರ ಹೋಗಿ ಗ್ರಾಮೀಣ ಭಾಗದ ಕಡೆಗೆ ವಾಹನ ಹೋಗುತ್ತಿದೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹಿರೇಬಾಗೇವಾಡಿಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಮಾತ್ರವಲ್ಲ, ಸಭಾಪತಿ ಅವರಿಗೂ ದೂರು ಕೊಟ್ಟಿದ್ದರು. ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಉಗ್ರಾವತಾರ ತಾಳಿದ್ದರು. ಸುವರ್ಣ ಸೌಧಕ್ಕೆ ತೆರಳಿ ದಾಂಧಲೆ ನಡೆಸಿದ್ದಾರೆ. ಸಿ. ಟಿ. ರವಿ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಮಾರ್ಷಲ್ ಗಳ ಸಹಕಾರದಿಂದ ಅನಾಹುತ ತಪ್ಪಿದೆ.
ವಿಧಾನಪರಿಷತ್ ಮೊಗಸಾಲೆಗೆ ಹೋಗುತ್ತಿರುವಾಗ ನನ್ನ ಮೇಲೆ ದಾಳಿ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ. ಇಲ್ಲಿಗೆ ಬಂದು ಬೆದರಿಕೆ ಹಾಕಿದ್ದಾರೆಂದರೆ ಕಾನೂನು ರಕ್ಷಣೆ ಇಲ್ಲ. ಶಾಸಕರಿಗೆ ಇಲ್ಲವಾದರೆ ಕಾನೂನು ಮತ್ತು ಸುವ್ಯವಸ್ಥೆ ಇದೆಯಾ ಎಂದು ಪ್ರಶ್ನಿಸಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ನಿಂದಾನರ್ಹ ಮತ್ತು ಆಕ್ಷೇಪಾರ್ಹ ಪದ ಬಳಕೆ ಮಾಡಿದ ಆರೋಪ ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಸಿ. ಟಿ. ರವಿ ಮೇಲೆ ಕೇಳಿ ಬಂದಿತ್ತು. ಬೆಳಗಾವಿ ಅಧಿವೇಶನದಲ್ಲಿ ಮಾತನಾಡುವಾಗ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸಿ. ಟಿ. ರವಿ ನಡುವೆ ವಾಕ್ಸಮರ ನಡೆಯಿತು. ಈ ವೇಳೆ ಸಿ. ಟಿ. ರವಿ ಅವರು ಮಾತನಾಡುತ್ತಾ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಉದ್ದೇಶಿಸಿ ಪ್ರಾಸ್ಟಿಟ್ಯೂಟ್ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎಂಬುದು ಕಾಂಗ್ರೆಸ್ ಸದಸ್ಯರ ಆರೋಪ. ಈ ಗಂಭೀರ ಆರೋಪ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಕ್ಸಮರಕ್ಕೆ ಕಾರಣವಾಯಿತು.
ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಳಸಿದ ಆಕ್ಷೇಪಾರ್ಹ ಪದ ಬಳಕೆ ವಿರುದ್ದ ಲಕ್ಷ್ಮೀ ಹೆಬ್ಬಾಳ್ಕರ್ ಕಿಡಿಕಾರಿದರು. ಈ ವೇಳೆ ಇದಕ್ಕೆ ಉತ್ತರಿಸಿದ ಸಿ. ಟಿ. ರವಿ ಅವರು ರಾಹುಲ್ ಗಾಂಧಿ ಡ್ರಗ್ ಅಡಿಟ್ ಎಂದರು. ಇದರಿಂದ ಕೆರಳಿದ ಲಕ್ಷ್ಮೀ ಹೆಬ್ಬಾಳ್ಕರ್ ನೀವು ಅಪಘಾತ ಎಸಗಿದ್ದೀರಾ. ಹಾಗಿದ್ದರೆ ಕೊಲೆಗಾರರ ಎಂದು ಪ್ರಶ್ನಿಸಿದರು.
ಇದರಿಂದ ಸಿಟ್ಟಿಗೆದ್ದ ಸಿ. ಟಿ. ರವಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಉದ್ದೇಶಿಸಿ ನೀವು ಪ್ರಾಸ್ಟಿಟ್ಯೂಟ್ ಎಂಬ ಪದ ಬಳಸಿದ್ದಾರೆ. ಒಮ್ಮೆ ಅಲ್ಲ, ಹತ್ತು ಬಾರಿ ಬಳಸಿದ್ದಾರೆ ಎಂಬುದು ಯತೀಂದ್ರ ಸಿದ್ದರಾಮಯ್ಯರ ಆರೋಪ.
ಇನ್ನು ಉಮಾಶ್ರೀ ಅವರು ಮಾತನಾಡಿದ್ದು, ಸಿ. ಟಿ. ರವಿ ಮಾತನಾಡಿದ್ದು ನಿಜ. ಆ ಪದ ಬಳಕೆ ಮಾಡಿದ್ದಾರೆ. ಯಾರಿಗೆ ಆದರೂ ನೋವು ಆಗಿಯೇ ಆಗುತ್ತದೆ. ಮಹಿಳೆಯನ್ನು ಉದ್ದೇಶಿಸಿ ಮಾತನಾಡುವ ಮಾತೇ ಎಂದು ಪ್ರಶ್ನಿಸಿದರು.