ರಾಯ್ಪುರ: ಚಾರ್ಲ್ಸ್ ಶೋಭರಾಜ್ ಎಂಬ ಕುಖ್ಯಾತ ಅಪರಾಧಿಯ ವಂಚನೆಯ ಜಾಲದಿಂದ ಪ್ರೇರಿತನಾಗಿ, ಕಳೆದ 36 ವರ್ಷಗಳಿಂದ ಭಾರತದಾದ್ಯಂತ 300 ಕ್ಕೂ ಹೆಚ್ಚು ಐಷಾರಾಮಿ ಪಂಚತಾರಾ ಹೋಟೆಲ್ಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ 69 ವರ್ಷದ ವೃದ್ಧನನ್ನು ರಾಯ್ಪುರ ಪೊಲೀಸರು ಒಡಿಶಾದ ಭುವನೇಶ್ವರದಲ್ಲಿ ಬಂಧಿಸಿದ್ದಾರೆ.
ತಮಿಳುನಾಡು ಮೂಲದ ಬಿಂಗ್ಸನ್ ಜಾನ್ ಬಂಧಿತ ಆರೋಪಿಯಾಗಿದ್ದಾನೆ. ಈತ ವಿದೇಶಿ ಪ್ರವಾಸಿ ಗೈಡ್, ಇಂಗ್ಲಿಷ್ ಶಿಕ್ಷಕ ಅಥವಾ ಯೋಗ ತರಬೇತುದಾರನಂತೆ ನಟಿಸಿ ಹೋಟೆಲ್ ಸಿಬ್ಬಂದಿಯ ನಂಬಿಕೆ ಗಳಿಸುತ್ತಿದ್ದ. ಬಳಿಕ ಹೋಟೆಲ್ನಲ್ಲಿ ಐಷಾರಾಮಿ ವಾಸ್ತವ್ಯ ಹೂಡಿ, ಬಿಲ್ ಪಾವತಿಸದೆ ಪರಾರಿಯಾಗುತ್ತಿದ್ದ. ಅಷ್ಟೇ ಅಲ್ಲದೆ ಹೋಟೆಲ್ನ ಬೆಲೆಬಾಳುವ ವಸ್ತುಗಳನ್ನು ಕದ್ದು ಸದ್ದಿಲ್ಲದೆ ಜಾಗ ಖಾಲಿ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಕ್ಕಿಬಿದ್ದಿದ್ದು ಹೇಗೆ?:
ಜೂನ್ 25 ರಂದು ರಾಯ್ಪುರದ ಪ್ರತಿಷ್ಠಿತ ಹ್ಯಾಟ್ (Hyatt) ಹೋಟೆಲ್ಗೆ ದಾಖಲಾಗಿದ್ದ ಜಾನ್, ಜೂನ್ 27 ರಂದು ಯಾರಿಗೂ ತಿಳಿಸದೆ ಚೆಕ್ಔಟ್ ಮಾಡದೆ ಪರಾರಿಯಾಗಿದ್ದ. ಈ ವೇಳೆ ಆತ 63,755 ರೂಪಾಯಿ ಹೋಟೆಲ್ ಬಿಲ್ ಬಾಕಿ ಉಳಿಸಿಕೊಂಡಿದ್ದಲ್ಲದೆ, ಹೋಟೆಲ್ ಸಿಬ್ಬಂದಿ ಬಳಿ ಕೇಳಿ ಪಡೆದಿದ್ದ 1.48 ಲಕ್ಷ ರೂ. ಮೌಲ್ಯದ ಲ್ಯಾಪ್ಟಾಪ್ ಅನ್ನೂ ಕದ್ದೊಯ್ದಿದ್ದ. ಹೋಟೆಲ್ ಮ್ಯಾನೇಜ್ಮೆಂಟ್ ನೀಡಿದ ದೂರಿನ ಆಧಾರದ ಮೇಲೆ ಸೈಬರ್ ಸೆಲ್ ನೆರವಿನೊಂದಿಗೆ ತಾಂತ್ರಿಕ ವಿಶ್ಲೇಷಣೆ ನಡೆಸಿದ ತೇಲಿಬಂಧ ಪೊಲೀಸರು, ಆರೋಪಿಯ ಮೊಬೈಲ್ ನಂಬರ್ ಆಧರಿಸಿ ಭುವನೇಶ್ವರದಲ್ಲಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯಿಂದ ಕದ್ದ ಲ್ಯಾಪ್ಟಾಪ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ತಿಹಾರ್ ಜೈಲಿನಲ್ಲಿ 15 ವರ್ಷ ಕಳೆದಿದ್ದ ಖದೀಮ!
ವಿಚಾರಣೆ ವೇಳೆ ಆರೋಪಿ ಜಾನ್ ತಾನು 1990 ರಿಂದಲೇ ಈ ವಂಚನೆ ದಂಧೆ ನಡೆಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ. ದೆಹಲಿ, ಮುಂಬೈ ಸೇರಿದಂತೆ ದೇಶದ 10 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಈತನ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಈ ಹಿಂದೆ ವಿವಿಧ ಪ್ರಕರಣಗಳಲ್ಲಿ ದೆಹಲಿಯ ತಿಹಾರ್ ಜೈಲು ಸೇರಿದಂತೆ ದೇಶದ ಬೇರೆ ಬೇರೆ ಕಾರಾಗೃಹಗಳಲ್ಲಿ ಈತ ಒಟ್ಟು 15 ವರ್ಷಗಳಿಗಿಂತ ಹೆಚ್ಚು ಕಾಲ ಶಿಕ್ಷೆ ಅನುಭವಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
- 69 year old hotel thief
- Bhubaneswar police arrest
- Bingson John arrested
- Charles Sobhraj style scammer
- five star hotel cheating case
- hotel laptop theft case
- Hyatt hotel Raipur fraud
- luxury hotel fraud India
- Raipur hotel scam
- Tamil Nadu scammer arrested
- ಐಷಾರಾಮಿ ಹೋಟೆಲ್ ಹಗರಣ
- ಕ್ರಿಮಿನಲ್ ನ್ಯೂಸ್
- ಚಾರ್ಲ್ಸ್ ಶೋಭರಾಜ್ ಪ್ರೇರಣೆ
- ತಮಿಳುನಾಡು ವಂಚಕ
- ಪಂಚತಾರಾ ಹೋಟೆಲ್ ದರೋಡೆ
- ಬಿಂಗ್ಸನ್ ಜಾನ್ ಅರೆಸ್ಟ್
- ಭುವನೇಶ್ವರದಲ್ಲಿ ಬಂಧನ
- ರಾಯ್ ಪುರ ಪೊಲೀಸ್
- ಸೈಬರ್ ಕ್ರೈಮ್ ರಾಯ್ ಪುರ
- ಹೋಟೆಲ್ ವಂಚನೆ ಪ್ರಕರಣ
- ಹ್ಯಾಟ್ ಹೋಟೆಲ್ ವಂಚನೆ





Leave a comment