ಲಕ್ನೋ: ಅಯೋಧ್ಯೆಯ ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೇಹಾದುಲ್ ಮುಸ್ಲಿಮೀನ್ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪಶ್ಚಿಮ ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ನಡೆದ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಜಾರಿಯಲ್ಲಿ ಸರ್ಕಾರದ ದ್ವಂದ್ವ ನೀತಿಯನ್ನು ಕಟುವಾಗಿ ಟೀಕಿಸಿದ್ದಾರೆ.
“ರಾಮ ಮಂದಿರ ಟ್ರಸ್ಟ್‌ನಲ್ಲಿ ಯಾರಾದರೂ ಮುಸ್ಲಿಂ ಇದ್ದಿದ್ದರೆ, ಈ ವೇಳೆಗೆ ಸರ್ಕಾರ ಆತನನ್ನು ಎನ್‌ಕೌಂಟರ್ ಮಾಡಿ ಕೊಂದಿರುತ್ತಿತ್ತು ಮತ್ತು ಆತನ ಮನೆ ಮೇಲೆ ಬುಲ್ಡೋಜರ್ ಚಲಾಯಿಸಿ ಧ್ವಂಸಗೊಳಿಸುತ್ತಿತ್ತು. ಆದರೆ ಈಗ ಆರೋಪಿಗಳು ರಾಜಾರೋಷವಾಗಿ ಆರಾಮವಾಗಿದ್ದಾರೆ,” ಎಂದು ಓವೈಸಿ ವ್ಯಂಗ್ಯವಾಡಿದ್ದಾರೆ.
ದೇಣಿಗೆ ಕಳ್ಳತನದ ಆರೋಪ ಕೇಳಿಬಂದ ಬೆನ್ನಲ್ಲೇ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಚಂಪತ್ ರೈ ಹಾಗೂ ಟ್ರಸ್ಟಿ ಅನಿಲ್ ಮಿಶ್ರಾ ರಾಜೀನಾಮೆ ನೀಡಿದ್ದಾರೆ. ಇದನ್ನು ಪ್ರಸ್ತಾಪಿಸಿದ ಓವೈಸಿ, “ಟ್ರಸ್ಟ್‌ನ ಮುಖ್ಯಸ್ಥರು ಹಗರಣದ ನಂತರವೂ ಆರಾಮವಾಗಿದ್ದಾರೆ. ಪೊಲೀಸರು ಉನ್ನತ ಮಟ್ಟದ ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಲು ಹಿಂಜರಿಯುತ್ತಿದ್ದಾರೆ,” ಎಂದು ಆರೋಪಿಸಿದರು. ಮುಸ್ಲಿಮರ ವಿರುದ್ಧ ತಕ್ಷಣವೇ ಬುಲ್ಡೋಜರ್ ಕ್ರಮ ಕೈಗೊಳ್ಳುವ ಯುಪಿ ಸರ್ಕಾರ, ಈ ಪ್ರಕರಣದಲ್ಲಿ ಯಾಕೆ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಏನಿದು ರಾಮ ಮಂದಿರ ದೇಣಿಗೆ ಹಗರಣ?
ರಾಮ ಮಂದಿರದ ಲೆಕ್ಕಪತ್ರ ಪುಸ್ತಕಗಳಿಂದ ಸುಮಾರು 7 ರಿಂದ 7.5 ಕೋಟಿ ರೂಪಾಯಿ ನಗದು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಜೂನ್ 25 ರಂದು ದಾಖಲಾದ ಮೊದಲ ಎಫ್‌ಐಆರ್‌ನಲ್ಲಿ ದೇಣಿಗೆ ಎಣಿಕೆ ಸಿಬ್ಬಂದಿಯಾಗಿದ್ದ ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಲಾಗಿದೆ. ಇವರಿಂದ ಪೊಲೀಸರು ಈಗಾಗಲೇ 80 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (SIT) ರಚಿಸಲಾಗಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಾರ್ವಜನಿಕರ ನಂಬಿಕೆಗೆ ದ್ರೋಹ ಬಗೆಯುವವರ ವಿರುದ್ಧ ‘ಶೂನ್ಯ ಸಹನೆ’ (Zero-Tolerance) ನೀತಿ ಅನುಸರಿಸುವುದಾಗಿ ತಿಳಿಸಿದ್ದಾರೆ.
- Asaduddin Owaisi statement
- Ayodhya temple donation row
- Bulldozer justice UP
- Champat Rai resignation
- ram mandir donation scam
- Ram Mandir SIT investigation
- Ram Mandir trust theft case
- UP politics news
- Yogi Adityanath government
- ಅಯೋಧ್ಯೆ ರಾಮ ಮಂದಿರ ತನಿಖೆ
- ಅಸಾದುದ್ದೀನ್ ಓವೈಸಿ
- ಉತ್ತರ ಪ್ರದೇಶ ಸುದ್ದಿ
- ಎಸ್ಐಟಿ ತನಿಖೆ
- ಚಂಪತ್ ರೈ ರಾಜೀನಾಮೆ
- ಬುಲ್ಡೋಜರ್ ಜಸ್ಟಿಸ್
- ಯೋಗಿ ಆದಿತ್ಯನಾಥ್
- ರಾಮ ಜನ್ಮಭೂಮಿ ಟ್ರಸ್ಟ್
- ರಾಮ್ ಮಂದಿರ ದೇಣಿಗೆ ಹಗರಣ





Leave a comment