Home ದಾವಣಗೆರೆ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಸರ್ಕಾರಿ ಗ್ಯಾರಂಟಿ ಕಟ್! ಡಿಕೆ ಶಿವಕುಮಾರ್ ಬಿಗ್ ವಾರ್ನಿಂಗ್!
ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯ

ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಸರ್ಕಾರಿ ಗ್ಯಾರಂಟಿ ಕಟ್! ಡಿಕೆ ಶಿವಕುಮಾರ್ ಬಿಗ್ ವಾರ್ನಿಂಗ್!

Share
ಮತದಾರರ
Share

ಬೆಂಗಳೂರು: ಕರ್ನಾಟಕದಲ್ಲಿ ಇಂದಿನಿಂದ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಆರಂಭವಾಗುತ್ತಿದ್ದು, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಾರ್ವಜನಿಕರಿಗೆ ಮಹತ್ವದ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಮತದಾರರ ಪಟ್ಟಿಯಲ್ಲಿ ಹೆಸರನ್ನು ಖಚಿತಪಡಿಸಿಕೊಳ್ಳದಿದ್ದರೆ, ಸರ್ಕಾರದ ಸೌಲಭ್ಯ ಹಾಗೂ ಗ್ಯಾರಂಟಿಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

“ಮತದಾನದ ಹಕ್ಕು ಎಂದರೆ ಬದುಕುವ ಹಕ್ಕು ಇದ್ದಂತೆ. ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಆಧರಿಸಿ ಅನರ್ಹ ಪಡಿತರ ಚೀಟಿ (Ration Card) ಫಲಾನುಭವಿಗಳನ್ನು ಪತ್ತೆ ಹಚ್ಚಿ ರದ್ದುಗೊಳಿಸಲಾಗುತ್ತಿದೆ. ನಮ್ಮ ರಾಜ್ಯದಲ್ಲೂ ಮತದಾನದ ಹಕ್ಕು ಕಳೆದುಕೊಂಡರೆ, ಸರ್ಕಾರದ ಸೌಲಭ್ಯಗಳೂ ಕಡಿತಗೊಳ್ಳಲಿವೆ” ಎಂದು ಡಿಕೆಶಿ ಎಚ್ಚರಿಸಿದ್ದಾರೆ.

ಮನೆ ಮನೆ ಸಮೀಕ್ಷೆ ಹೇಗೆ ನಡೆಯಲಿದೆ?

ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ನೀಡಿರುವ ಮಾಹಿತಿ ಪ್ರಕಾರ, ಜೂನ್ 30 ರಿಂದ ಜುಲೈ 29 ರವರೆಗೆ ರಾಜ್ಯಾದ್ಯಂತ ಮನೆ ಮನೆಗೆ ಭೇಟಿ ನೀಡಿ ಮತದಾರರ ಗಣತಿ ಕಾರ್ಯ ನಡೆಯಲಿದೆ. ರಾಜ್ಯದ 5.5 ಕೋಟಿಗೂ ಹೆಚ್ಚು ಮತದಾರರನ್ನು ಈ ಪ್ರಕ್ರಿಯೆ ಒಳಗೊಳ್ಳಲಿದ್ದು, ಇದಕ್ಕಾಗಿ 59,050 ಬಿಎಲ್‌ಒ (BLO) ಹಾಗೂ 7,556 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ.

ಮನೆಗಳ ಮೇಲಿನ ಸ್ಟಿಕ್ಕರ್ ಗುರುತುಗಳು:

  • ನೇರಳೆ ಬಣ್ಣದ ಚೌಕಾಕಾರದ ಸ್ಟಿಕ್ಕರ್: ಬಿಎಲ್‌ಒಗಳು ಮನೆಗೆ ಭೇಟಿ ನೀಡಿ ನಮೂನೆ (Enumeration Form) ವಿತರಿಸಿದ ಬಳಿಕ ಈ ಸ್ಟಿಕ್ಕರ್ ಅಂಟಿಸಲಾಗುತ್ತದೆ.

  • ಕೆಂಪು ಬಣ್ಣದ ವರ್ತುಲಾಕಾರದ ಸ್ಟಿಕ್ಕರ್: ಮನೆ ಬೀಗ ಹಾಕಿದ್ದರೆ ಈ ಸ್ಟಿಕ್ಕರ್ ಹಾಕಲಾಗುತ್ತದೆ. ಇಂತಹ ಮನೆಗಳಿಗೆ ಬಿಎಲ್‌ಒಗಳು ಕನಿಷ್ಠ 3 ಬಾರಿ ಭೇಟಿ ನೀಡಲಿದ್ದಾರೆ.

ಗಮನಿಸಿ: ಈ ಹಂತದಲ್ಲಿ ಸಾರ್ವಜನಿಕರಿಂದ ಯಾವುದೇ ದಾಖಲೆಗಳನ್ನು ಸಂಗ್ರಹಿಸಲಾಗುವುದಿಲ್ಲ. ಕೇವಲ ಫಾರಂ ಭರ್ತಿ ಮಾಡಿ ಸಹಿ ನೀದಬೇಕಿರುತ್ತದೆ.

ಶಾಶ್ವತ ವಾಸಸ್ಥಳ ಪ್ರಮಾಣಪತ್ರ (Permanent Residential Certificate)

ಮತದಾರರ ಪಟ್ಟಿ ಪರಿಷ್ಕರಣೆಗೆ ಅನುಕೂಲವಾಗುವಂತೆ ರಾಜ್ಯ ಸರ್ಕಾರವು ಸಾರ್ವಜನಿಕರಿಗೆ ‘ಶಾಶ್ವತ ವಾಸಸ್ಥಳ ಪ್ರಮಾಣಪತ್ರ’ ನೀಡಲು ಮುಂದಾಗಿದೆ. ಸಾರ್ವಜನಿಕರು ಆನ್‌ಲೈನ್‌ನಲ್ಲಿ ಸೇವಾ ಸಿಂಧು (Seva Sindhu) ಪೋರ್ಟಲ್ ಮೂಲಕ ಅಥವಾ ಅಟಲ್ ಜೀ ಜನಸ್ನೇಹಿ ಕೇಂದ್ರ (ನಾಡಕಚೇರಿ), ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಗ್ರಾಮ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿ ಇದನ್ನು ಪಡೆಯಬಹುದು.

ಮಹತ್ವದ ದಿನಾಂಕಗಳು (Timeline):

  • ಜೂನ್ 30 – ಜುಲೈ 29, 2026: ಮನೆ ಮನೆಗೆ ಬಿಎಲ್‌ಒಗಳ ಭೇಟಿ ಮತ್ತು ಮಾಹಿತಿ ಸಂಗ್ರಹಣೆ.

  • ಆಗಸ್ಟ್ 5, 2026: ಕರಡು ಮತದಾರರ ಪಟ್ಟಿ ಪ್ರಕಟಣೆ.

  • ಆಗಸ್ಟ್ 5 – ಸೆಪ್ಟೆಂಬರ್ 4, 2026: ಆಕ್ಷೇಪಣೆ ಮತ್ತು ಹಕ್ಕುಗಳ ಸಲ್ಲಿಕೆಗೆ ಅವಕಾಶ.

  • ಅಕ್ಟೋಬರ್ 7, 2026: ಅಂತಿಮ ಮತದಾರರ ಪಟ್ಟಿ ಬಿಡುಗಡೆ.

Share

Leave a comment

Leave a Reply

Your email address will not be published. Required fields are marked *