ರಾಷ್ಟ್ರೀಯ ಮಾಧ್ಯಮಗಳಿಗೆ ಮಾತನಾಡಿದ ಸಾಹಿಲ್ ಗೋಯಲ್, “ಅಶುತೋಷ್ ಶ್ರೀವಾಸ್ತವ ಅವರನ್ನು ನಮ್ಮ ಕಾನೂನು ಪ್ರತಿನಿಧಿಯನ್ನಾಗಿ ನಾವಾಗಲಿ ಅಥವಾ ನಮ್ಮ ಕುಟುಂಬದವರಾಗಲಿ ನೇಮಿಸಿಲ್ಲ. ಅವರು ನಮಗೆ ಬೆದರಿಕೆ ಹಾಕುತ್ತಿದ್ದಾರೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.

ವಂಚನೆಯಿಂದ ಸಹಿ ಪಡೆದ ಆರೋಪ:

ವಕೀಲ ಅಶುತೋಷ್ ಶ್ರೀವಾಸ್ತವ ಅವರು ವಂಚನೆ ಮತ್ತು ಮೋಸದ ಮೂಲಕ ಸಿಯಾ ಗೋಯಲ್ ಅವರ ಸಹಿಯನ್ನು ಪಡೆದುಕೊಂಡಿರಬಹುದು ಎಂದು ಸಾಹಿಲ್ ಗೋಯಲ್ ಸಂಶಯ ವ್ಯಕ್ತಪಡಿಸಿದ್ದಾರೆ.

ಈ ಬೆಳವಣಿಗೆಯು ಸದ್ಯ ಇಡೀ ಪ್ರಕರಣದಲ್ಲಿ ಅಶುತೋಷ್ ಅವರ ಪಾತ್ರದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಪುಣೆ ಗ್ರಾಮಾಂತರ ಪೊಲೀಸರು ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿಯನ್ನು ಈಗಾಗಲೇ ಕಸ್ಟಡಿಗೆ ಪಡೆದು ತನಿಖೆ ನಡೆಸುತ್ತಿರುವ ಬೆನ್ನಲ್ಲೇ ಕುಟುಂಬಸ್ಥರು ವಕೀಲರ ವಿರುದ್ಧವೇ ತಿರುಗಿಬಿದ್ದಿರುವುದು ತೀವ್ರ ಕುತೂಹಲ ಮೂಡಿಸಿದೆ.