SUDDIKSHANA KANNADA NEWS/ DAVANAGERE/ DATE:12-12-2024
ದಾವಣಗೆರೆ: ಮಾಜಿ ಮುಖ್ಯಮಂತ್ರಿ, ನಾಡು ಕಂಡ ಸಮಾಜವಾದಿ ನಾಯಕ ಜೆ. ಹೆಚ್. ಪಟೇಲ್ ಅವರ ಪುಣ್ಯಸ್ಮರಣೆ ನಡೆಯಿತು.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಾರಿಗನೂರಿನಲ್ಲಿನ ಜೆ. ಹೆಚ್. ಪಟೇಲ್ ಸಮಾಧಿಗೆ ನಮನ ಸಲ್ಲಿಸುವುದರ ಮೂಲಕ ಗೌರವ ಸಮರ್ಪಣೆ ಮಾಡಲಾಯಿತು.
ಹರಿಹರದ ಮಾಜಿ ಶಾಸಕ ಹೆಚ್. ಎಸ್. ಶಿವಶಂಕರ್, ಜೆ. ಹೆಚ್. ಪಟೇಲ್ ಪುತ್ರರಾದ ಮಹಿಮಾ ಜೆ. ಪಟೇಲ್, ತ್ರಿಶಿಲ್ ಪಾಣಿ ಪಟೇಲ್, ಸ್ವಾಮಿ ಸತೀಶ್ ಪಟೇಲ್, ನಾಗರಾಜ್ ಗೌಡ್ರು, ಚಂದ್ರು ಗಾರ್ಡನ್ ರೆಸ್ಟೋರೆಂಟ್ ಮಾಲೀಕ ರಾಘವೇಂದ್ರ, ಜಗದೀಶ್ ಪ್ರಜಾವಾಣಿ, ಚನ್ನಬಸಪ್ಪ, ಮ್ಯಾಗಳಗೆರೆ ರುದ್ರಮುನಿ, ಮಿಟ್ಲಕಟ್ಟೆ ಬೆಂಡಿಗೆರೆ ವಿಜಯ್ ಕುಮಾರ್, ಜಯಪ್ರಕಾಶ್ ಸತ್ತೂರು ಹಾಗೂ ಇತರರು ಹಾಜರಿದ್ದರು.