SUDDIKSHANA KANNADA NEWS/ DAVANAGERE/ DATE:12-12-2024
ದಾವಣಗೆರೆ: ಕಾಡಜ್ಜಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ರೈತರಿಗೆ ಸಿರಿಧಾನ್ಯ ಬೆಳೆಗಳ ಬೇಸಾಯ ತಾಂತ್ರಿಕತೆಗಳು ಹಾಗೂ ಮೌಲ್ಯವರ್ಧನೆ ಕುರಿತು ಮೂರು ದಿನಗಳ ಸಾಂಸ್ಥಿಕ ತರಬೇತಿಯನ್ನು ಡಿ.23 ರಿಂದ 25 ರವರೆಗೆ ಆಯೋಜಿಸಲಾಗಿದೆ.
ಆಸಕ್ತ ರೈತ ಮಹಿಳೆಯರು ಹಾಗೂ ಸಂಘ ಸಂಸ್ಥೆಯವರು ಡಿ.19ರ ಒಳಗಾಗಿ ನೋಂದಾಯಿಸಬೇಕು. ರೈತರು ಕಡ್ಡಾಯವಾಗಿ ಎಫ್ಐಡಿ(FID) ಸಂಖ್ಯೆ ಅಥವಾ ಚುನಾವಣಾ ಗುರುತಿನ ಚೀಟಿಯೊಂದಿಗೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 9844295795, 8861536658 ನ್ನು ಸಂಪರ್ಕಿಸಲು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.