Home ದಾವಣಗೆರೆ ಜೂನ್ 25ರ ನಾಳೆ ದಾವಣಗೆರೆಯ ವಿವಿಧ ಗ್ರಾಮಗಳಲ್ಲಿ ಪವರ್ ಕಟ್: ಇಲ್ಲಿದೆ ಸಂಪೂರ್ಣ ವಿವರ
ದಾವಣಗೆರೆಬೆಂಗಳೂರು

ಜೂನ್ 25ರ ನಾಳೆ ದಾವಣಗೆರೆಯ ವಿವಿಧ ಗ್ರಾಮಗಳಲ್ಲಿ ಪವರ್ ಕಟ್: ಇಲ್ಲಿದೆ ಸಂಪೂರ್ಣ ವಿವರ

Share
ದಾವಣಗೆರೆ
Share

ದಾವಣಗೆರೆ: ಜಿಲ್ಲೆಯ ಪ್ರಮುಖ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತುರ್ತು ನಿರ್ವಹಣಾ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಜೂನ್ 25 ರಂದು ಬೆಳಿಗ್ಗೆಯಿಂದ ಸಂಜೆಯವರೆಗೆ ಹಲವು ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ (BESCOM) ಪ್ರಕಟಣೆ ತಿಳಿಸಿದೆ.

ವಿದ್ಯುತ್ ವ್ಯತ್ಯಯದ ಸಮಯ:

  • ದಿನಾಂಕ: ಜೂನ್ 25, 2026

  • ಸಮಯ: ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ

ಬಾಧಿತವಾಗಲಿರುವ ವಿದ್ಯುತ್ ಕೇಂದ್ರಗಳು:

  • 66/11 ಕೆ.ವಿ. ಕುಕ್ಕವಾಡ ಶ್ಯಾಗಲೆ ವಿತರಣ ಕೇಂದ್ರ

  • 66/11 ಕೆ.ವಿ. ಮೇಳ್ಳೆಕಟ್ಟೆ ವಿತರಣ ಕೇಂದ್ರ

  • 66/11 ಕೆ.ವಿ. ಕಾಡಜ್ಜಿ ವಿದ್ಯುತ್ ವಿತರಣ ಕೇಂದ್ರ

 ವಿದ್ಯುತ್ ಕೈಕೊಡಲಿರುವ ಗ್ರಾಮಗಳ ಪಟ್ಟಿ:

ಕುಕ್ಕವಾಡ, ಕೊಲಕುಂಟೆ, ಗಿರಿಯಾಪುರ, ಕೈದಾಳೆ, ಹದಡಿ, ಕಲಬಂಡೆ, ಲೋಕಿಕೆರೆ, ಬಲ್ಲೂರು, ಕನಗೊಂಡನಹಳ್ಳಿ, ಮತ್ತಿ, ನಾಗರಸನಹಳ್ಳಿ, ಹೂವಿನಮಡು, ಶ್ಯಾಗಲೆ, ಕಂದ್ಗಲ್ಲು, ಕೋಡಿಹಳ್ಳಿ, ಗೋಣಿವಾಡ, ಆಲೂರು, ಬಿ.ಜಿ.ಹಳ್ಳಿ, ಸಿದ್ದನೂರು, ಮಲ್ಲಾಪುರ, ಗುಡಾಳು, ಅಣಜಿ, ಕಿತ್ತೂರು, ಕಂದನಕೋವಿ, ಮೆಳ್ಳೆಕಟ್ಟೆ, ರೆಡ್ಡಿ ಕ್ಯಾಂಪ್, ಪುಟಗಾನಾಳು, ಶ್ರೀರಾಮ ನಗರ, ಕಾಡಜ್ಜಿ, ಬಸವಾನಾಳು, ನಾಗರಕಟ್ಟೆ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಸೂಚನೆ:

ವಿದ್ಯುತ್ ಗ್ರಾಹಕರು ಹಾಗೂ ಸಾರ್ವಜನಿಕರು ಈ ಅವಧಿಯಲ್ಲಿ ಬೆಸ್ಕಾಂ ಸಿಬ್ಬಂದಿಯೊಂದಿಗೆ ಸಹಕರಿಸಬೇಕಾಗಿ ವಿನಂತಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *