ದಾವಣಗೆರೆ: ದೇಶ ಕಾಯುವ ವೀರ ಯೋಧರ ಸೇವೆ ಮತ್ತು ತ್ಯಾಗವನ್ನು ಸ್ಮರಿಸಿ, ತಮ್ಮ ಜೀವಿತಾವಧಿಯ ಸಂಪಾದನೆಯನ್ನು ಸೈನಿಕರ ಕಲ್ಯಾಣಕ್ಕಾಗಿ ಸಂಪಾದನೆ ಧಾರೆ ಎರೆಯುವ ಮೂಲಕ ನಿವೃತ್ತ ಶಿಕ್ಷಕಿ ಕರಿಬಸಮ್ಮ ಅವರು ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ.
ರಾಜ್ಯಾದ್ಯಂತ ತಾವೊಬ್ಬರೇ ಹೋರಾಟ ನಡೆಸಿ ‘ದಯಾ ಮರಣ ಹೋರಾಟಗಾರ’ ಎಂದೇ ಪ್ರಸಿದ್ಧರಾಗಿರುವ ಕರಿಬಸಮ್ಮ ಅವರು, ತಮ್ಮ ನಿವೃತ್ತಿ ವೇತನ (ಪೆನ್ಷನ್) ಹಾಗೂ ಸ್ವಂತ ಮನೆಯನ್ನು ಮಾರಾಟ ಮಾಡಿ ಬಂದ ಒಟ್ಟು 10 ಲಕ್ಷ ರೂಪಾಯಿಗಳ ಚೆಕ್ ಅನ್ನು ಯೋಧರ ನಿಧಿಗೆ ನೀಡಿದ್ದಾರೆ. ಈ ಮೊತ್ತವನ್ನು ಕೇಂದ್ರ ಸರ್ಕಾರದ ಅಧಿಕೃತ ನಿಧಿಯಾದ ‘ಭಾರತ್ ಕೆ ವೀರ್’ (Bharat Ke Veer Corpus Fund) ಗೆ ತಲುಪಿಸಲಾಗುವುದು.
50 ವರ್ಷಗಳ ಕನಸು ನನಸು:
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿವೃತ್ತ ಶಿಕ್ಷಕಿ ಕರಿಬಸಮ್ಮ, “ಸುಮಾರು 50 ವರ್ಷಗಳ ಹಿಂದೆ ರೇಡಿಯೋದಲ್ಲಿ ಗಡಿಯ ಕಠಿಣ ಪರಿಸ್ಥಿತಿಯಲ್ಲಿ ದೇಶ ಕಾಯುವ ಸೈನಿಕರ ಕಷ್ಟಗಳ ಬಗ್ಗೆ ಕೇಳಿ ಮನನೊಂದಿದ್ದೆ. ಅಂದಿನಿಂದಲೇ ದೇಶಕ್ಕಾಗಿ ಏನಾದರೂ ಮಾಡಬೇಕೆಂಬ ಭಾವನೆ ನನ್ನಲ್ಲಿ ಮೂಡಿತ್ತು. ದಯಾಮರಣದ ಹೋರಾಟದ ವೇಳೆ ಅನೇಕ ಗಣ್ಯರು ಹಣದ ಸಹಾಯ ಮಾಡಲು ಮುಂದೆ ಬಂದರೂ ನಾನು ಸ್ವೀಕರಿಸದೆ, ನನ್ನ ಸ್ವಂತ ಮನೆಯನ್ನೇ ಮಾರಾಟ ಮಾಡಿದೆ. ಅದರಲ್ಲಿ 6 ಲಕ್ಷ ರೂ.ಗಳನ್ನು ಬಿಎಸ್‌ಎಫ್ ನಿಧಿಗೆಂದು ಕಾಯ್ದಿರಿಸಿದ್ದೆ. ಪ್ರಸ್ತುತ ಪಿಂಚಣಿ ಹಣ ಹಾಗೂ ಬಡ್ಡಿ ಸೇರಿ ಒಟ್ಟು 10 ಲಕ್ಷ ರೂ.ಗಳಾಗಿದ್ದು, ಅದನ್ನು ಸಂಪೂರ್ಣವಾಗಿ ಸೈನಿಕರ ನಿಧಿಗೆ ನೀಡುತ್ತಿದ್ದೇನೆ” ಎಂದರು.
ಕ್ಯಾನ್ಸರ್ ನಡುವೆಯೂ ಕುಗ್ಗದ ಸಂಕಲ್ಪ: “ನಿರಂತರ ಹೋರಾಟದಿಂದಾಗಿ ನನಗೆ ಬಿಪಿ, ಶುಗರ್, ಪೆಪ್ಟಿಕ್ ಅಲ್ಸರ್ ಹಾಗೂ ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳು ಬಂದಿವೆ. ನನ್ನ ಆರೋಗ್ಯದಲ್ಲಿ ಏರುಪೇರಾಗುತ್ತಿರುವುದರಿಂದ, ಆದಷ್ಟು ಬೇಗ ಈ ಹಣವನ್ನು ದೇಶಕ್ಕೆ ಒಪ್ಪಿಸಿ ಋಣ ಮುಕ್ತಳಾಗಬೇಕೆಂಬುದು ನನ್ನ ಆಸೆಯಾಗಿತ್ತು” ಎಂದು ಕರಿಬಸಮ್ಮ ಭಾವುಕರಾದರು.
ನಿರಂತರ ಹೋರಾಟಗಳ ಪರಿಣಾಮವಾಗಿ ನನಗೆ ಬಿಪಿ, ಶುಗರ್, ಪೆಪ್ಟಿಕ್ ಅಲ್ಸರ್ ಹಾಗೂ ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳಿಗೆ ತುತ್ತಾಗಿದ್ದೆ . ಅನಾರೋಗ್ಯದ ಏರುಪೇರಿನ ನಡುವೆಯೂ ಸೈನಿಕರಿಗೆ ಸಹಾಯ ಮಾಡಬೇಕೆಂಬ ನನ್ನ ಸಂಕಲ್ಪ ಮಾತ್ರ ಕುಗ್ಗಿಲ್ಲ. “ನನ್ನ ಆರೋಗ್ಯದಲ್ಲಿ ಏರುಪೇರಾಗುತ್ತಿರುವುದರಿಂದ, ಆದಷ್ಟು ಬೇಗ ಈ ಹಣವನ್ನು ದೇಶಕ್ಕೆ ಒಪ್ಪಿಸಿ ಋಣಮುಕ್ತಳಾಗಬೇಕೆಂಬುದು ನನ್ನ ಆಸೆ. ಈ ಹಣವನ್ನು ಸದುಪಯೋಗ ಪಡಿಸುವ ನಿಟ್ಟಿನಲ್ಲಿ, ಬಿ.ಎಸ್.ಎಫ್ ನಿಧಿಗೆ ಹಸ್ತಾಂತರಿಸಲಾಗುವುದು. ಇದು ನನಗೆ ಅಪಾರ ಸಂತೋಷವನ್ನು ತಂದಿದೆ,” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಿ. ಎಂ. ಗಂಗಾಧರ ಸ್ವಾಮಿ, ಕರಿಬಸಮ್ಮ ಅವರ ಶಿಷ್ಯರು ಹಾಗೂ ಮಾಜಿ ವಿಧಾನಪರಿಷತ್ ಸದಸ್ಯರಾದ ಡಾ.ಶಿವಯೋಗಿಸ್ವಾಮಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
- 10 Lakh Donation
- 10 ಲಕ್ಷ ದೇಣಿಗೆ
- Bharat Ke Veer
- BSF Fund
- DAVANAGERE NEWS
- DC GM Gangadharaswamy
- Euthanasia Activist Karnataka
- Karibasamma Davanagere
- Retired Teacher Patriotism
- Soldiers Welfare Fund
- ಕರಿಬಸಮ್ಮ ದಾವಣಗೆರೆ
- ಜಿಲ್ಲಾಧಿಕಾರಿ ಗಂಗಾಧರಸ್ವಾಮಿ
- ದಯಾಮರಣ ಹೋರಾಟಗಾರ್ತಿ
- ದಾವಣಗೆರೆ ಸುದ್ದಿ
- ನಿವೃತ್ತ ಶಿಕ್ಷಕಿ ದೇಶಪ್ರೇಮ
- ಬಿಎಸ್‌ಎಫ್ ನಿಧಿ
- ಭಾರತ್ ಕೆ ವೀರ್
- ಯೋಧರ ಕಲ್ಯಾಣ ನಿಧಿ





Leave a comment