ನವದೆಹಲಿ: ಅಮೆರಿಕ ಮೂಲದ ಇವಾಂಜೆಲಿಕಲ್ ಸಂಸ್ಥೆಯಾದ ‘ದಿ ತಿಮೋತಿ ಇನಿಶಿಯೇಟಿವ್’ (TTI) ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA) ನಿಯಮಗಳನ್ನು ಉಲ್ಲಂಘಿಸಿ 1,000ಕ್ಕೂ ಹೆಚ್ಚು ವಿದೇಶಿ ಡೆಬಿಟ್ ಕಾರ್ಡ್‌ಗಳ ಮೂಲಕ ಭಾರತಕ್ಕೆ ₹92 ಕೋಟಿಗೂ ಅಧಿಕ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವ ಗಂಭೀರ ಆರೋಪ ಎದುರಿಸುತ್ತಿದೆ.
ಜಾರಿ ನಿರ್ದೇಶನಾಲಯ (ED) ನಡೆಸಿರುವ ಪ್ರಾಥಮಿಕ ತನಿಖೆಯ ಪ್ರಕಾರ, ನವೆಂಬರ್ 2025 ರಿಂದ ಏಪ್ರಿಲ್ 2026 ರ ನಡುವೆ ಅಮೆರಿಕದ ಟ್ರೂಸ್ಟ್ ಬ್ಯಾಂಕ್‌ನಿಂದ ನೀಡಲಾದ ಈ ಡೆಬಿಟ್ ಕಾರ್ಡ್‌ಗಳನ್ನು ಬಳಸಿ ಕರ್ನಾಟಕ, ಅಸ್ಸಾಂ ಮತ್ತು ನಕ್ಸಲ್ ಪೀಡಿತ ಛತ್ತೀಸ್‌ಗಢದಾದ್ಯಂತ ಎಟಿಎಂಗಳ ಮೂಲಕ ಕೋಟ್ಯಂತರ ರೂಪಾಯಿ ನಗದನ್ನು ಹಿಂಪಡೆಯಲಾಗಿದೆ.
ಸುಳ್ಳು ಮತ್ತು ಕಾಲ್ಪನಿಕ ಹೆಸರುಗಳಲ್ಲಿ ಈ ಕಾರ್ಡ್‌ಗಳನ್ನು ಬಳಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತನಿಖೆಯ ವೇಳೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮಿಕಾ ಮಾರ್ಕ್ ಎಂಬಾತನನ್ನು 24 ವಿದೇಶಿ ಡೆಬಿಟ್ ಕಾರ್ಡ್‌ಗಳೊಂದಿಗೆ ವಶಕ್ಕೆ ಪಡೆಯಲಾಗಿದೆ.
ಹಣ ವರ್ಗಾವಣೆಯು ಮಾವೋವಾದಿ ಪೀಡಿತ ಬುಡಕಟ್ಟು ಪ್ರದೇಶಗಳಲ್ಲಿ ನಡೆದಿರುವುದರಿಂದ ಹಾಗೂ ಮತಾಂತರದ ಆರೋಪಗಳು ಕೇಳಿಬಂದಿರುವುದರಿಂದ, ಈ ಪ್ರಕರಣದಲ್ಲಿ ಕಠಿಣ ಭಯೋತ್ಪಾದನಾ ನಿರೋಧಕ ಕಾಯ್ದೆಯಾದ ಯುಎಪಿಎ (UAPA) ಮತ್ತು ಬಿಎನ್ಎಸ್ (BNS) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.





Leave a comment