ದಾವಣಗೆರೆ: ಜಿಲ್ಲೆಯ ವಿವಿಧ ವಿದ್ಯುತ್ ಸ್ವೀಕರಣಾ ಕೇಂದ್ರ ಹಾಗೂ ಉಪಕೇಂದ್ರಗಳಲ್ಲಿ ತುರ್ತು ಕಾಮಗಾರಿ ಮತ್ತು ಲೈನ್ ನಿರ್ವಹಣಾ ಕೆಲಸಗಳನ್ನು ಹಮ್ಮಿಕೊಂಡಿರುವುದರಿಂದ ಜೂನ್ 17 ರಂದು ದಾವಣಗೆರೆ ನಗರದ ಕೆಲವು ಬಡಾವಣೆಗಳು ಹಾಗೂ ಜಗಳೂರು ತಾಲೂಕಿನ ಪ್ರಮುಖ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಪ್ರಕಟಣೆ ತಿಳಿಸಿದೆ.
ದಾವಣಗೆರೆ ನಗರದ ವಿವರಗಳು: ಎಸ್.ಆರ್.ಎಸ್. ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿವೇಕಾನಂದ ಫೀಡರ್ ವ್ಯಾಪ್ತಿಯಲ್ಲಿ ವಿದ್ಯುತ್ ಇರುವುದಿಲ್ಲ.
ಬಾಧಿತ ಪ್ರದೇಶಗಳು: ಸ್ವಾಮಿ ವಿವೇಕಾನಂದ ಬಡಾವಣೆ, ಎಲ್.ಐ.ಸಿ ಕಾಲೋನಿ, ಆಂಜನೇಯ ಬಡಾವಣೆ, ವಿನಾಯಕ ಬಡಾವಣೆ ಹಾಗೂ ಇವುಗಳ ಸುತ್ತಮುತ್ತಲಿನ ಪ್ರದೇಶಗಳು.
ಜಗಳೂರು ಹಾಗೂ ಗ್ರಾಮಾಂತರ ಪ್ರದೇಶಗಳ ವಿವರಗಳು: 66/11ಕೆವಿ ಪಲ್ಲಾಗಟ್ಟೆ, ಜಗಳೂರು ಮತ್ತು ಹೆಚ್.ಎಂ ಹೊಳೆ ವಿ.ವಿ ಕೇಂದ್ರಗಳಿಗೆ ಸಂಬಂಧಿಸಿದ ಎನ್‍ಜೆವೈ ಮತ್ತು ಐ.ಪಿ 11ಕೆವಿ ಮಾರ್ಗಗಳಲ್ಲಿ ಜಂಗಲ್ ಕಟಿಂಗ್ ಹಾಗೂ ಫೀಡರ್‌ಗಳ ಕಾರ್ಯನಿರ್ವಹಣೆ ಕಾಮಗಾರಿ ಕಾರಣದಿಂದಾಗಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಕೈಕೊಡಲಿದೆ.
ಬಾಧಿತ ಪ್ರದೇಶಗಳು: ರಂಗಾಪುರ, ತುಪ್ಪದಹಳ್ಳಿ, ಬಸವನಕೋಟೆ, ಗಿಡ್ಡನಕಟ್ಟೆ, ಸಿದ್ದಿಹಳ್ಳಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳು.
ಗೃಹಬಳಕೆದಾರರು, ರೈತರು ಹಾಗೂ ಕೈಗಾರಿಕೋದ್ಯಮಿಗಳು ಬೆಸ್ಕಾಂ ಇಲಾಖೆಯೊಂದಿಗೆ ಸಹಕರಿಸಬೇಕಾಗಿ ಪ್ರಕಟಣೆಯಲ್ಲಿ ಕೋರಲಾಗಿದೆ.





Leave a comment