Home ದಾವಣಗೆರೆ ಉತ್ತರ ಪ್ರದೇಶದಲ್ಲಿ ಶಾಕಿಂಗ್ ಘಟನೆ:ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಪ್ರಯಾಣಿಸುತ್ತಿದ್ದ ರೈಲಿನ ಮೇಲೆ ಕಲ್ಲು: ಕಿಟಕಿ ಗಾಜು ಚೂರು ಚೂರು, ಓರ್ವನ ಬಂಧನ!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಉತ್ತರ ಪ್ರದೇಶದಲ್ಲಿ ಶಾಕಿಂಗ್ ಘಟನೆ:ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಪ್ರಯಾಣಿಸುತ್ತಿದ್ದ ರೈಲಿನ ಮೇಲೆ ಕಲ್ಲು: ಕಿಟಕಿ ಗಾಜು ಚೂರು ಚೂರು, ಓರ್ವನ ಬಂಧನ!

Share
ಉತ್ತರ ಪ್ರದೇಶ
Share

ಲಕ್ನೋ/ಫಿರೋಜಾಬಾದ್: ಉತ್ತರ ಪ್ರದೇಶದ ಫಿರೋಜಾಬಾದ್ ರೈಲ್ವೆ ನಿಲ್ದಾಣದ ಬಳಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ ಅವರು ಪ್ರಯಾಣಿಸುತ್ತಿದ್ದ ಲಕ್ನೋ-ದೆಹಲಿ ಸ್ವರ್ಣ ಶತಾಬ್ದಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 12003) ರೈಲಿನ ಮೇಲೆ ಅಪರಿಚಿತ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಆಘಾತಕಾರಿ ಘಟನೆ ಗುರುವಾರ ಸಂಜೆ ನಡೆದಿದೆ.

ಘಟನೆಯ ವಿವರ:

ಕಾನ್ಪುರದಿಂದ ನವದೆಹಲಿಗೆ ತೆರಳುತ್ತಿದ್ದ ಶತಾಬ್ದಿ ಎಕ್ಸ್‌ಪ್ರೆಸ್ ರೈಲು ಗುರುವಾರ ಸಂಜೆ ಸುಮಾರು 7:15 ರ ಸುಮಾರಿಗೆ ಫಿರೋಜಾಬಾದ್‌ನ ರಸೂಲ್‌ಪುರ ಮತ್ತು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಗಡಿ ಪ್ರದೇಶದಲ್ಲಿ ಚಲಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ದುಷ್ಕರ್ಮಿಗಳು ಎಸೆದ ಕಲ್ಲು ರೈಲಿನ ಎಸಿ ಫಸ್ಟ್ ಕ್ಲಾಸ್ (E1) ಕೋಚ್‌ಗೆ ತಗುಲಿದ್ದು, ಕಿಟಕಿಯ ಹೊರಗಿನ ಗಾಜು ಸಂಪೂರ್ಣವಾಗಿ ಪುಡಿಯಾಗಿದೆ.

ಮೋಹನ್ ಭಾಗವತ್ ಸುರಕ್ಷಿತ:

ಕಲ್ಲು ತೂರಾಟ ನಡೆದ ಕೋಚ್‌ನಲ್ಲೇ ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಹಾಗೂ ಉತ್ತರ ಪ್ರದೇಶದ ಸಚಿವ ಭೂಪೇಂದ್ರ ಚೌಧರಿ ಅವರು ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್ ಮೋಹನ್ ಭಾಗವತ್ ಅವರು ಕಿಟಕಿಯ ವಿರುದ್ಧ ದಿಕ್ಕಿನ ಸೀಟಿನಲ್ಲಿ ಕುಳಿತಿದ್ದರಿಂದ ಯಾವುದೇ ಅಪಾಯವಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರೈಲಿನಲ್ಲಿದ್ದ ಇತರ ಯಾವುದೇ ಪ್ರಯಾಣಿಕರಿಗೂ ಗಾಯಗಳಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ತನಿಖೆ ಚುರುಕು, ಒಬ್ಬ ವಶಕ್ಕೆ:

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಆಗ್ರಾ ವಲಯದ ಎಡಿಜಿ ಎಸ್.ಕೆ. ಭಗತ್, ಫಿರೋಜಾಬಾದ್ ಎಸ್‌ಎಸ್‌ಪಿ ಆದಿತ್ಯ ಲಾಂಗೇ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ರೈಲ್ವೆ ಸುರಕ್ಷತಾ ಪಡೆ (RPF) ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಒಬ್ಬ ಶಂಕಿತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಕಲ್ಲು ತೂರಾಟದ ಹಿಂದಿನ ಉದ್ದೇಶದ ಬಗ್ಗೆ ತನಿಖೆ ಮುಂದುವರಿದಿದೆ. ಅಗತ್ಯ ತಪಾಸಣೆಗಳ ನಂತರ ರೈಲನ್ನು ದೆಹಲಿಯತ್ತ ಬಿಡಲಾಯಿತು

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles
ಗಣೇಶ
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಮಸೀದಿ ಮುಂದೆ ಗಣೇಶ ಮೆರವಣಿಗೆ ನಿರ್ಬಂಧಿಸಿದರೆ ಠಾಣೆಗೆ ನುಗ್ಗುತ್ತೇನೆ: ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ ಬೆನ್ನಲ್ಲೇ ರೌಡಿಗೆ ಜೈಲು ಗ್ಯಾರಂಟಿ ಎಂದ್ರು ಪ್ರಿಯಾಂಕ್ ಖರ್ಗೆ! ಬೆಂಗಳೂರು ಮೈಸೂರು:ಗಣೇಶೋತ್ಸವ ಮೆರವಣಿಗೆಯ ವೇಳೆ ಮಸೀದಿ ಮುಂಭಾಗ ಹಾದುಹೋಗುವ ಮಾರ್ಗ ಹಾಗೂ ಧ್ವನಿವರ್ಧಕಗಳ ಬಳಕೆಯ ಕುರಿತು ಟಿ. ನರಸೀಪುರ ಪೊಲೀಸ್ ಇನ್‌ಸ್ಪೆಕ್ಟರ್ ನೀಡಿದ್ದ ಎಚ್ಚರಿಕೆಯ ಹೇಳಿಕೆಗೆ ಮೈಸೂರು-ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಟಿ. ನರಸೀಪುರ ಪೊಲೀಸ್ ಇನ್ಸ್‌ಪೆಕ್ಟರ್ ಸಾರ್ವಜನಿಕ ಸಭೆಯಲ್ಲಿ ಬ್ರಿಟಿಷರ ಕಾಲದ ದರ್ಪ ಪ್ರದರ್ಶಿಸಿದ್ದಾರೆ. ಕಾನೂನು ಸುವ್ಯವಸ್ಥೆ ಹೆಸರಿನಲ್ಲಿ ಯುವಕರು ಮತ್ತು ಸಾರ್ವಜನಿಕರನ್ನು ಬೆದರಿಸುವುದನ್ನು ಸಹಿಸಲು ಸಾಧ್ಯವಿಲ್ಲ. ಮಸೀದಿ ಮುಂದೆ ಯುವಕರು ನೃತ್ಯ ಮಾಡಿದರೆ ಅಥವಾ ಮೆರವಣಿಗೆ ಸಾಗಿದರೆ ತಪ್ಪೇನು?” ಎಂದು ಪ್ರಶ್ನಿಸಿದರು. ಮುಂದುವರಿದು ಮಾತನಾಡಿದ ಅವರು, “ಪುಂಡಾಟಿಕೆ ಮಾಡುವುದು ಮತ್ತು ಕಲ್ಲು ತೂರುವ ಕೆಲಸಗಳನ್ನು ಯಾರು ಮಾಡುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ, ಹಿಂದೂಗಳು ಎಂದಿಗೂ ಈ ರೀತಿಯ ಕೆಲಸಗಳನ್ನು ಮಾಡಿಲ್ಲ. ಮಸೀದಿಗಳಿಂದ ದಿನಕ್ಕೆ ಐದು ಬಾರಿ ಬರುವ ಧ್ವನಿವರ್ಧಕಗಳ ಕೂಗು ಹಿಂದೂಗಳ ಮನೆಗೆ ಕೇಳಿಸದಂತೆ ಮಾಡುವ ಧೈರ್ಯ ಪೊಲೀಸರಿಗಿದೆಯೇ? ಅದನ್ನು ಬಿಟ್ಟು ಹಬ್ಬ ಆಚರಿಸುವ ಹಿಂದೂ ಯುವಕರಿಗೆ ಧಮ್ಕಿ ಹಾಕುವುದು ಸರಿಯಲ್ಲ. ಟಿ. ನರಸೀಪುರ ಇನ್ಸ್‌ಪೆಕ್ಟರ್ ಇನ್ನೊಮ್ಮೆ ಈ ರೀತಿ ಬಾಲ ಅಲ್ಲಾಡಿಸಿದರೆ ಅಥವಾ ಬೆದರಿಕೆ ಹಾಕಿದರೆ ನಾನೇ ನೇರವಾಗಿ ಠಾಣೆಗೆ ನುಗ್ಗುತ್ತೇನೆ” ಎಂದು ಖಡಕ್ ಸವಾಲು ಹಾಕಿದರು. ಇತ್ತೀಚಿನ ಗಣೇಶ ವಿಸರ್ಜನೆ ಮೆರವಣಿಗೆಯ ಸಿದ್ಧತೆಗಳ ಹಿನ್ನೆಲೆಯಲ್ಲಿ ಈ ಹೇಳಿಕೆಗಳು ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಈ ನಡುವೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಮೈಸೂರಿನಲ್ಲೊಬ್ಬ ರೌಡಿ ಇದ್ದಾನೆ. ಆತನಿಗೆ ಪರಪ್ಪನ ಆಗ್ರಹಾರಕ್ಕೆ ನುಗ್ಗಿಸುತ್ತೇವೆ. ಕಾನೂನು ಕೈಗೆತ್ತಿಕೊಂಡರೆ ಸುಮ್ಮನಿರಲ್ಲ ಎಂದಿದ್ದಾರೆ. ಇದು ಪ್ರತಾಪ್ ಸಿಂಹ ಮತ್ತು ಪ್ರಿಯಾಂಕ್ ಖರ್ಗೆ ನಡುವೆ ಸಮರಕ್ಕೆ ಕಾರಣವಾಗಿದೆ.