Home ದಾವಣಗೆರೆ ದಣಿವರಿಯದೇ ದುಡಿಯುವ ನರೇಂದ್ರ ಮೋದಿ ಆಡಳಿತ ಭಾರತದ ಹೆಮ್ಮೆ ಮರು ಸ್ಥಾಪಿಸಿದೆ: ಯಶವಂತರಾವ್ ಜಾಧವ್ ಬಣ್ಣನೆ
ದಾವಣಗೆರೆನವದೆಹಲಿಬೆಂಗಳೂರು

ದಣಿವರಿಯದೇ ದುಡಿಯುವ ನರೇಂದ್ರ ಮೋದಿ ಆಡಳಿತ ಭಾರತದ ಹೆಮ್ಮೆ ಮರು ಸ್ಥಾಪಿಸಿದೆ: ಯಶವಂತರಾವ್ ಜಾಧವ್ ಬಣ್ಣನೆ

Share
ನರೇಂದ್ರ ಮೋದಿ
Share

ದಾವಣಗೆರೆ: ಭಾರತದ ಹೆಮ್ಮೆಯ ಪ್ರಧಾನ ಮಂತ್ರಿಗಳಾಗಿ 4399 ದಿನಗಳ ಆಡಳಿತದ ಐತಿಹಾಸಿಕ ಮೈಲುಗಲ್ಲು ಸ್ಥಾಪಿಸಿದ ನರೇಂದ್ರ ಮೋದಿ ಅವರು ಅತಿ ದೀರ್ಘಾವಧಿ ಚುನಾಯಿತ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಹಿನ್ನೆಲೆಯಲ್ಲಿ ದಕ್ಷಿಣ ವಿಧಾನಸಭಾ ಕ್ಷೇತ್ರದ ದೊಡ್ಡಪೇಟೆಯ ಗಣೇಶ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜನಹಳ್ಳಿ ಶಿವಕುಮಾರ್ ಅವರ ನೇತೃತ್ವದಲ್ಲಿ ವಿಘ್ನ ನಿವಾರಕನಿಗೆ ಪ್ರಾರ್ಥನೆ ಸಲ್ಲಿಸಿ ದೇಶದ ಅಭಿವೃದ್ಧಿ ಮತ್ತು ಆಂತರಿಕ ಭದ್ರತೆಗಾಗಿ ಇನ್ನೂ ಹಲವು ವರ್ಷಗಳ ಕಾಲ ನರೇಂದ್ರ ಮೋದಿ ಅವರೇ ದೇಶವನ್ನು ಮುನ್ನಡೆಸುವಂತಾಗಬೇಕು ಎಂದು ಹೇಳಿದರು.

ನರೇಂದ್ರ ಮೋದಿ

ಯಶವಂತರಾವ್ ಜಾಧವ್ ಮಾತನಾಡಿ ಭಾರತದ ರಾಜಕೀಯ ಇತಿಹಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಂದು ಅಪರೂಪದ ಮೈಲಿಗಲ್ಲಿಗೆ ಸಾಕ್ಷಿಯಾಗಿದ್ದಾರೆ. ಸಂವಿಧಾನ ಜಾರಿಗೆ ಬಂದ ನಂತರ ಭಾರತದಲ್ಲಿ ಅತ್ಯಂತ ಸುದೀರ್ಘ ಅವಧಿಗೆ ಸತತವಾಗಿ ಆಡಳಿತ ನಡೆಸಿದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ದೇಶಕ್ಕೆ ಹೆಮ್ಮೆಯ ವಿಚಾರ ಎಂದು ಹೇಳಿದರು.

ಮೇ 26, 2014 ರಂದು ಮೊದಲ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದ ನರೇಂದ್ರ ಮೋದಿ ಅವರು, ಸತತ 4,399 ದಿನಗಳ ಕಾಲ ಸೇವೆ ಸಲ್ಲಿಸುವ ಮೂಲಕ ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. “ಸಾರ್ವಜನಿಕ ಸೇವೆಯೇ ಉತ್ತಮ ಆಡಳಿತದ ಅತಿ ದೊಡ್ಡ ಅಳತೆಗೋಲು. ನಮ್ರತೆ, ಸಮರ್ಪಣಾ ಭಾವ ಮತ್ತು ಕರ್ತವ್ಯ ಪ್ರಜ್ಞೆಯಿಂದ ದಣಿವರಿಯದೆ ದುಡಿಯುವ ವ್ಯಕ್ತಿ ಮಾತ್ರ ಜನರ ವಿಶ್ವಾಸ ಗಳಿಸಲು ಸಾಧ್ಯ” ಎಂಬುದನ್ನು ಮೋದಿ ಅವರು ಸಾಬೀತುಪಡಿಸಿದ್ದಾರೆ ಎಂದು ತಿಳಿಸಿದರು.

ಮೋದಿಯವರ 12 ವರ್ಷಗಳ ಆಡಳಿತವು ಭಾರತದ ಹೆಮ್ಮೆಯನ್ನು ಮರುಸ್ಥಾಪಿಸಿದೆ ಮತ್ತು ದೇಶವನ್ನು ದಾಸ್ಯದ ಮನಸ್ಥಿತಿಯಿಂದ ಹೊರ ತಂದಿದೆ. ಆತ್ಮನಿರ್ಭರ್, ಮಹಿಳಾ ಸಬಲೀಕರಣ, ಎಲ್ಲಾ ವರ್ಗದ ಜನರ ಶ್ರೇಯೋಭಿವೃದ್ಧಿಗೆ
ಶ್ರಮಿಸಿದ ಮಹಾನ್ ನಾಯಕ ಎಂದು ಬಣ್ಣಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜನಹಳ್ಳಿ ಶಿವಕುಮಾರ್ ಮಾತನಾಡಿ “ಮೋದಿ ಅವರು ‘ದೇಶವೇ ಮೊದಲು’ ಎಂಬ ತತ್ವದಡಿ ಮುನ್ನಡೆಯುತ್ತಿರುವ ದಣಿವರಿಯದ ಕರ್ಮಯೋಗಿ”. ಆತ್ಮನಿರ್ಭರ, ವಿಕಸಿತ ಭಾರತ ಆಗಲು ನರೇಂದ್ರ
ಮೋದಿಯವರ ಅವಶ್ಯಕತೆ ಬಹಳ ಇದೆ. ಜಾಗತಿಕ ಬಿಕ್ಕಟ್ಟಿನಿಂದ ಭಾರತಕ್ಕೆ ತೊಂದರೆಯಾಗದಂತೆ ಮುನ್ನಡೆಸುವ ಶಕ್ತಿ ಮೋದಿಯವರಿಗೆ ಮಾತ್ರ ಇದೆ ಎಂದು ಹೇಳಿದರು.

ನಮ್ಮ ನೆಚ್ಚಿನ ಪ್ರಧಾನಮಂತ್ರಿ ದೇಶ ಕಂಡ ಅಪ್ರತಿಮ ನಾಯಕರು. ಸುದೀರ್ಘವಾದ ರಾಜಕೀಯ ಜೀವನದಲ್ಲಿ ಭಾರತದ ಪ್ರಧಾನಮಂತ್ರಿ ಯಾಗಿ 12 ವರ್ಷ ಪೂರೈಸಿದ್ದಾರೆ. ಜನರ ಪರ ರಾಜಕಾರಣ ಮಾಡಿ ಜನರ ಹಿತಕ್ಕಾಗಿ ದಿನಕ್ಕೆ 18 ತಾಸು ಕೆಲಸ ಮಾಡಿದ್ದಾರೆ. ನಿಂರತರ ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಅವರು ಮಾಡಿರುವ ಹಲವಾರು ಯೋಜನೆಗಳು ಭಾರತವನ್ನು ವಿಶ್ವದಲ್ಲಿಯೇ ಮೂರನೇ ಆರ್ಥಿಕ ಶಕ್ತಿಯಾಗಿ ತೆಗೆದುಕೊಂಡು ಹೋಗಿದೆ. ಭಾರತದ ಅಭಿವೃದ್ಧಿಯಲ್ಲಿ ಅತ್ಯಂತ ಕೆಳ ವರ್ಗದವರೂ ಕೂಡ ಅದರ ಲಾಭ ಮುಟುವಂತೆ ಮಾಡಿದ್ದಾರೆ. ಅದಕ್ಕಾಗಿಯೇ ಪ್ರಥಮವಾಗಿ 25 ಕೋಟಿ ಜನರು ಬಡತನದಿಂದ ಮೇಲೆತ್ತುವ ಕಾರ್ಯವಾಗಿದೆ. ಬಡವರಿಗೆ ಮನೆಗಳನ್ನು ನೀಡುವ ಮುಖಾಂತರ ಆರೋಗ್ಯ ವಿಮೆ, ಶಿಕ್ಷಣ, ಉದ್ಯೋಗ ಕೊಡುವ ಮುಖಾಂತರ ಅವರು ಮೂರು ಕೆಲಸಗಳನ್ನು ಬಹಳ ಸ್ಪಷ್ಟವಾಗಿ ಮಾಡಿದ್ದಾರೆ. ಜನಸಾಮಾನ್ಯರು, ಬಡವರು, ದೀನದಲಿತರಿಗೆ, ಹೆಣ್ಣು ಮಕ್ಕಳಿಗೆ ಮತ್ತು ಯುವಕರಿಗೆ, ಶಿಕ್ಷಣ, ಉದ್ಯೋಗ, ಸಬಲೀಕರಣ ಮೂರನ್ನು ಕೊಟ್ಟಿರುವ ಧೀಮಂತ ನಾಯಕ ನರೇಂದ್ರ ಮೋದಿ ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಪಿ. ರಮೇಶ್ ನಾಯ್ಕ್, ಗೋವಿಂದರಾಜ್, ಮಾತಲೇಶ್, ಕಿಶೋರ್ ಕುಮಾರ್, ಶಿವನಗೌಡ ಟಿ. ಪಾಟೀಲ್, ಟಿಂಕರ್ ಮಂಜಣ್ಣ, ಗುರು ಸೋಗಿ, ನವೀನ್ ಕುಮಾರ್ ಹೆಚ್. ಬಿ., ಜಗದೀಶ್ ಹೆಚ್. ಎನ್., ಮಹಿಳಾ
ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಗ್ಯ ಪಿಸಾಳೆ, ಪುಷ್ಪ ವಾಲಿ ಮತ್ತಿತರರು ಹಾಜರಿದ್ದರು.

Share

Leave a comment

Leave a Reply

Your email address will not be published. Required fields are marked *