Home ದಾವಣಗೆರೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ: ತರಳಬಾಳು ಮಠದಿಂದ ಸುಸಜ್ಜಿತ ಬಾಲಕರ ಹಾಸ್ಟೆಲ್ ಪ್ರಾರಂಭ!
Homeದಾವಣಗೆರೆಬೆಂಗಳೂರು

ದಾವಣಗೆರೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ: ತರಳಬಾಳು ಮಠದಿಂದ ಸುಸಜ್ಜಿತ ಬಾಲಕರ ಹಾಸ್ಟೆಲ್ ಪ್ರಾರಂಭ!

Share
ದಾವಣಗೆರೆ
Share

ದಾವಣಗೆರೆ: ಎಸ್ ಎಸ್ ಬಡಾವಣೆಯ ‘ಎ ‘ ಬ್ಲಾಕ್ ನಲ್ಲಿ ಶ್ರೀ ತರಳಬಾಳು ಜಗದ್ಗುರು ಶ್ರೀ ಗುರುಶಾಂತರಾಜ ದೇಶೀಕೇಂದ್ರ ಮಹಾಸ್ವಾಮಿಗಳ ಬಾಲಕರ ನೂತನ ವಿದ್ಯಾರ್ಥಿ ನಿಲಯ ಪ್ರಾರಂಭ. 2026-27 ನೇ ಸಾಲಿನಿಂದ ಪ್ರವೇಶಾತಿ ಆರಂಭ.

ದಾವಣಗೆರೆ: ಶ್ರೀ ತರಳಬಾಳು ಜಗದ್ಗುರು ಶ್ರೀ ಶ್ರೀ ಶ್ರೀ 1108 ಡಾ. ಶಿವಾಚಾರ್ಯ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ದಾವಣಗೆರೆ ನಗರದ ಎಸ್ ಎಸ್ ಬಡಾವಣೆ ಎ ಬ್ಲಾಕ್ ನಲ್ಲಿ ನೂತನವಾಗಿ ಸುಸಜ್ಜಿತವಾಗಿ ನಿರ್ಮಿಸಲಾಗಿರುವ ಬಾಲಕರ ನೂತನ ವಿದ್ಯಾರ್ಥಿ ನಿಲಯವು ಪ್ರಸಕ್ತ 2026-27ನೇ ಶೈಕ್ಷಣಿಕ ಸಾಲಿನಿಂದ ಅಧಿಕೃತವಾಗಿ ಕಾರ್ಯಾ ಆರಂಭ ಮಾಡಲು ಸಿದ್ದಗೊಂಡಿದೆ.

ಈ ವಿದ್ಯಾರ್ಥಿ ನಿಲಯಕ್ಕೆ ಪದವಿಪೂರ್ವ (ಪಿಯುಸಿ) ಪದವಿ (ಡಿಗ್ರಿ) ವೃತ್ತಿ ಶಿಕ್ಷಣ ಹಾಗೂ ಸ್ನಾತಕೋತ್ತರ (ಪಿಜಿ) ತರಗತಿಗಳಲ್ಲಿ ಅಧ್ಯಯನ ಮಾಡುವ ಬಾಲಕರಿಗೆ ಪ್ರವೇಶಾವಕಾಶ ಕಲ್ಪಿಸಲಾಗಿದೆ.

ಗ್ರಾಮೀಣ ಹಾಗೂ ದೂರದ ಊರುಗಳಿಂದ ಆಗಮಿಸಿ ದಾವಣಗೆರೆಯಲ್ಲಿ ವಿವಿಧ ಹಂತದ ಉನ್ನತ ಶಿಕ್ಷಣ ಪಡೆಯತ್ತಿರುವ ವಿದ್ಯಾರ್ಥಿಗಳಿಗೆ ಇದು ಅತ್ಯಂತ ಅನುಕೂಲಕರವಾಗಿದೆ ಎಂದು ವಸತಿ ನಿಲಯದ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯ ಮೂಲಕ ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಈ ನಂಬರ್ ಗಳನ್ನು ಸಂಪರ್ಕಿಸಲು ಕೋರಿದೆ. 9341000411, 9986503680

Share

Leave a comment

Leave a Reply

Your email address will not be published. Required fields are marked *