Home ದಾವಣಗೆರೆ ಜಗಳೂರು ಬೆಸ್ಕಾಂ ವ್ಯಾಪ್ತಿಯಲ್ಲಿ ನಾಳೆ ಪವರ್ ಕಟ್: ನಿಮ್ಮ ಊರು ಈ ಪಟ್ಟಿಯಲ್ಲಿದೆಯೇ ಚೆಕ್ ಮಾಡಿ!
ದಾವಣಗೆರೆಬೆಂಗಳೂರು

ಜಗಳೂರು ಬೆಸ್ಕಾಂ ವ್ಯಾಪ್ತಿಯಲ್ಲಿ ನಾಳೆ ಪವರ್ ಕಟ್: ನಿಮ್ಮ ಊರು ಈ ಪಟ್ಟಿಯಲ್ಲಿದೆಯೇ ಚೆಕ್ ಮಾಡಿ!

Share
ಜಗಳೂರು
Share

ದಾವಣಗೆರೆ:ಜಗಳೂರು ಬೆಸ್ಕಾಂ ಉಪವಿಭಾಗದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜೂನ್  9ರಂದು ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. 

ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಕಟ್ ಆಗಲಿದೆ. ತಿಮ್ಲಾಪುರ, ದೇವಿಕೆರೆ, ಐಯ್ಯನಹಳ್ಳಿ ಮತ್ತು ಚಿಕ್ಕ ಉಜ್ಜಿನಿ ಭಾಗಗಳಲ್ಲಿ ಹಾಗೂ ಐ.ಪಿ ಮಾರ್ಗಗಳಾದ ಕಾನಾನಕಟ್ಟೆ, ಬಿಳಿಚೋಡು, ಗಿಡ್ಡನಕಟ್ಟೆ, ಬಸವಪುರ ಮತ್ತು ಹೊಸಕೆರೆ ಮಾರ್ಗಗಳಲ್ಲಿ ವಿದ್ಯುತ್ ಸ್ಥಗಿತಗೊಳಿಸಲಾಗುವುದು.

ಐ.ಪಿ. ಅಗ್ರಿ ಮಾರ್ಗಗಳಿಗೆ ಬೆಳಗ್ಗೆ 10 ಗಂಟೆಯ ಒಳಗಾಗಿ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಜಗಳೂರು ಬೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಸಾರ್ವಜನಿಕರು ಹಾಗೂ ರೈತರು ಈ ಕಡಿತದ ಸಮಯವನ್ನು ಗಮನಿಸಿ ಸಹಕರಿಸಬೇಕಾಗಿ ಕೋರಲಾಗಿದೆ.

Share

Leave a comment

Leave a Reply

Your email address will not be published. Required fields are marked *