Home ಕ್ರೈಂ ನ್ಯೂಸ್ ಕೇರಳದ ಪಾಲಕ್ಕಾಡ್‌ನಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಪ್ರಚಾರ: ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ, ಮಾಲೀಕನ ಸ್ಪಷ್ಟನೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಕೇರಳದ ಪಾಲಕ್ಕಾಡ್‌ನಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಪ್ರಚಾರ: ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ, ಮಾಲೀಕನ ಸ್ಪಷ್ಟನೆ!

Share
ಕೇರಳ
Share

ಪಾಲಕ್ಕಾಡ್: ಕೇರಳದ ಪಾಲಕ್ಕಾಡ್ ಜಿಲ್ಲೆಯ ಪುತುನಗರಂನಲ್ಲಿರುವ ಫಿಟ್‌ನೆಸ್ ಸೆಂಟರ್ ಒಂದು ತನ್ನನ್ನು “ಇಸ್ಲಾಮಿಕ್ ಸ್ನೇಹಿ ಜಿಮ್” (Islam-friendly gym) ಎಂದು ಪ್ರಚಾರ ಮಾಡಿಕೊಂಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಈ ಜಿಮ್ ಕೇವಲ ಒಂದು ಧರ್ಮದವರಿಗೆ ಮಾತ್ರ ಸೀಮಿತವೇ ಎಂದು ಹಲವರು ಪ್ರಶ್ನಿಸಿದ್ದಾರೆ.

ಜಿಮ್ ಮಾಲೀಕ ನವಾಜ್ ಮುತ್ತು ಟಿ ಬಿಡುಗಡೆ ಮಾಡಿದ್ದ ಪ್ರಚಾರದ ವಿಡಿಯೋದಲ್ಲಿ, ಜಿಮ್‌ನಲ್ಲಿ ಜೋರಾಗಿ ಮ್ಯೂಸಿಕ್ ಹಾಕಲಾಗುವುದಿಲ್ಲ, ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಸಮಯ ಹಾಗೂ ಪ್ರತ್ಯೇಕ ವರ್ಕೌಟ್ ಜಾಗ ಇರಲಿದೆ ಮತ್ತು ತರಬೇತುದಾರರನ್ನು ಸಹ ಪ್ರತ್ಯೇಕಿಸಲಾಗುವುದು ಎಂದು ಹೇಳಿದ್ದರು. ಇದು ವಿವಾದಕ್ಕೀಡಾಗುತ್ತಿದ್ದಂತೆ ಹಳೆಯ ವಿಡಿಯೋ ಡಿಲೀಟ್ ಮಾಡಿದ ನವಾಜ್, ಹೊಸ ಸ್ಪಷ್ಟನೆ ನೀಡಿದ್ದಾರೆ.

ಕಳೆದ 15 ವರ್ಷಗಳಿಂದ ನಡೆಯುತ್ತಿರುವ ಈ ಜಿಮ್ ಸದ್ಯ ನವೀಕರಣಗೊಳ್ಳುತ್ತಿದ್ದು, ಇದು ಯಾವುದೇ ಧರ್ಮಕ್ಕೆ ಸೀಮಿತವಾಗಿಲ್ಲ ಮತ್ತು ಎಲ್ಲಾ ಧರ್ಮದವರಿಗೂ ಮುಕ್ತವಾಗಿದೆ ಎಂದು ಮಾಲೀಕರು ಸ್ಪಷ್ಟಪಡಿಸಿದ್ದಾರೆ.

ಇಸ್ಲಾಂ ಧರ್ಮದ ನಿಯಮಗಳನ್ನು ಪಾಲಿಸುವವರು ಹಾಗೂ ಮಿಶ್ರ ಜಿಮ್‌ಗಳಿಗೆ ಹೋಗಲು ಮುಜುಗರ ಪಡುವ ಮಹಿಳೆಯರ ಅನುಕೂಲಕ್ಕಾಗಿ ಈ ನಿಯಮಗಳನ್ನು ತರಲಾಗಿದೆಯೇ ಹೊರತು ಯಾರನ್ನೂ ನಿರ್ಬಂಧಿಸಿಲ್ಲ; ಹೆಡ್‌ಫೋನ್ ಬಳಸಿ ಯಾರು ಬೇಕಾದರೂ ಹಾಡು ಕೇಳಬಹುದು ಎಂದು ಅವರು ತಿಳಿಸಿದ್ದಾರೆ. ಈ ವಿವಾದದ ಕುರಿತು ಸದ್ಯ ಇಂಟರ್ನೆಟ್‌ನಲ್ಲಿ ಪರ-ವಿರೋಧದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

Share

Leave a comment

Leave a Reply

Your email address will not be published. Required fields are marked *

Related Articles