ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (TMC) ಪಕ್ಷದಿಂದ ಉಚ್ಚಾಟನೆಗೊಂಡ ಎರಡೇ ದಿನಗಳಲ್ಲಿ ಶಾಸಕ ರಿತಬ್ರತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ (LoP) ಅಧಿಕಾರ ವಹಿಸಿಕೊಂಡಿದ್ದಾರೆ.
ಪಕ್ಷದ ನಾಯಕತ್ವದ ನಿರ್ಧಾರವನ್ನು ಬಹಿರಂಗವಾಗಿ ವಿರೋಧಿಸಿರುವ ಸುಮಾರು 58 ರಿಂದ 60 ಟಿಎಂಸಿ ಶಾಸಕರು ರಿತಬ್ರತಾ ಅವರಿಗೆ ಲಿಖಿತ ಬೆಂಬಲ ಸೂಚಿಸಿದ್ದು, ಸ್ಪೀಕರ್ ರತೀಂದ್ರನಾಥ್ ಬೋಸ್ ಅವರು ಇವರನ್ನು ಅಧಿಕೃತವಾಗಿ ವಿರೋಧ ಪಕ್ಷದ ನಾಯಕರನ್ನಾಗಿ ಗುರುತಿಸಿದ್ದಾರೆ.
ಪಕ್ಷವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಉಚ್ಚಾಟನೆಗೊಂಡಿದ್ದ ಮಾಜಿ ಎಡಪಂಥೀಯ ನಾಯಕ ರಿತಬ್ರತಾ, ತಾವೇ ಅಸಲಿ ಟಿಎಂಸಿ ಶಾಸಕಾಂಗ ಪಕ್ಷ ಎಂದು ಹಕ್ಕು ಮಂಡಿಸಿದ್ದಾರೆ.
ಆದರೆ, ಈ ರಾಜಕೀಯ ಬಂಡಾಯದ ನಡುವೆಯೂ, “ಮಮತಾ ಬ್ಯಾನರ್ಜಿ ಅವರೇ ನಮ್ಮ ಸರ್ವೋಚ್ಚ ನಾಯಕಿ. ಪಕ್ಷವನ್ನು ಇಬ್ಬಾಗ ಮಾಡುವ ಯಾವುದೇ ಉದ್ದೇಶ ನಮಗಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಹಿ ನಕಲು ಆರೋಪದ ವಿವಾದದ ಬೆನ್ನಲ್ಲೇ ಈ ಮಹತ್ತರ ಬೆಳವಣಿಗೆ ನಡೆದಿದ್ದು, ಬಂಗಾಳ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ





Leave a comment