Home ಕ್ರೈಂ ನ್ಯೂಸ್ ಡಿ.ಕೆ. ಶಿವಕುಮಾರ್ ರನ್ನು ಶಿವನಂತೆ ಬಿಂಬಿಸಿದ ಪತ್ರಿಕೆ: ಭಕ್ತರ ಆಕ್ರೋಶ, ‘ಬ್ಲಾಸ್‌ಫೆಮಿ’ ಎಂದ ನೆಟ್ಟಿಗರು
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಡಿ.ಕೆ. ಶಿವಕುಮಾರ್ ರನ್ನು ಶಿವನಂತೆ ಬಿಂಬಿಸಿದ ಪತ್ರಿಕೆ: ಭಕ್ತರ ಆಕ್ರೋಶ, ‘ಬ್ಲಾಸ್‌ಫೆಮಿ’ ಎಂದ ನೆಟ್ಟಿಗರು

Share
ಡಿ.ಕೆ. ಶಿವಕುಮಾರ್
Share

ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸುವ ದಿನದಂದೇ ಪತ್ರಿಕೆಯೊಂದರ ಮುಖಪುಟದ ಚಿತ್ರ ಭಾರಿ ವಿವಾದಕ್ಕೆ ಕಾರಣವಾಗಿದೆ. ಕನ್ನಡ ದಿನಪತ್ರಿಕೆ ‘ವಿಶ್ವವಾಣಿ’ ತನ್ನ ಮುಖಪುಟದಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ಅವತಾರದಲ್ಲಿ ಬಿಂಬಿಸಿ ಪ್ರಕಟಿಸಿದ ಚಿತ್ರ ಸಾರ್ವಜನಿಕರು ಹಾಗೂ ನೆಟ್ಟಿಗರ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.

ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ಜಟಾಧಾರಿ, ಹುಲಿಚರ್ಮದ ಉಡುಪು, ತ್ರಿಶೂಲ ಮತ್ತು ಡಮರುಗ ಹಿಡಿದಿರುವ ಡಿ.ಕೆ.ಶಿವಕುಮಾರ್ ಅವರ ಈ ಚಿತ್ರವನ್ನು ಎಕ್ಸ್ (ಟ್ವಿಟರ್) ನಲ್ಲೂ ಹಂಚಿಕೊಂಡಿದ್ದರು.

ರಾಜಕೀಯ ನಾಯಕರೊಬ್ಬರನ್ನು ದೇವರಿಗೆ ಹೋಲಿಸಿರುವುದನ್ನು ನೆಟ್ಟಿಗರು ಕಠಿಣ ಪದಗಳಲ್ಲಿ ಖಂಡಿಸಿದ್ದು, ಇದು “ದೇವನಿಂದನೆ” (Blasphemy) ಮತ್ತು “ರಾಜಕೀಯ ಚಮಚಾಗಿರಿ” ಎಂದು ಆಪಾದಿಸಿದ್ದಾರೆ.

ಧರ್ಮವನ್ನು ರಾಜಕೀಯ ಪ್ರಚಾರಕ್ಕೆ ಬಳಸಿರುವುದನ್ನು ವಿರೋಧಿಸಿರುವ ವಕೀಲ ಗಿರೀಶ್ ಭಾರದ್ವಾಜ್ ಸೇರಿದಂತೆ ಹಲವರು, ರಾಜಕಾರಣಿಗಳನ್ನು ದೇವರಂತೆ ಬಿಂಬಿಸುವುದು ಧರ್ಮ ವಿರೋಧಿ ಮತ್ತು ದೇವಸ್ಥಾನಗಳ ಪವಿತ್ರತೆಗೆ ಧಕ್ಕೆ ತರುವಂಥದ್ದು ಎಂದು ಕಿಡಿಕಾರಿದ್ದಾರೆ.

ಇನ್ನು ಕೆಲವರು ಡಿ.ಕೆ. ಶಿವಕುಮಾರ್ ಅವರ ಹಿಂದಿನ ತಿಹಾರ್ ಜೈಲು ವಾಸದ ದಿನಗಳನ್ನು ನೆನಪಿಸಿ ದೇವರೊಂದಿಗೆ ಹೋಲಿಸುವುದನ್ನು ಟೀಕಿಸಿದ್ದರೆ, ಮತ್ತೆ ಕೆಲವರು ಈ ಚಿತ್ರದ ಎಡಿಟಿಂಗ್ ಗುಣಮಟ್ಟವನ್ನು ಅಣಕಿಸಿದ್ದಾರೆ.

ಸಿದ್ದರಾಮಯ್ಯ ಅವರ ರಾಜೀನಾಮೆ ಬಳಿಕ ಹೈಕಮಾಂಡ್ ಸೂಚನೆಯಂತೆ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಸಂದರ್ಭದಲ್ಲೇ ಈ ವಿವಾದ ತಾರಕಕ್ಕೇರಿದೆ.

Share

Leave a comment

Leave a Reply

Your email address will not be published. Required fields are marked *