Home ಕ್ರೈಂ ನ್ಯೂಸ್ ಹೆಂಡತಿಯನ್ನೇ ರೂ. 50 ಸಾವಿರಕ್ಕೆ ಮಾರಿದ ಗಂಡ: ಮಹಿಳೆ ಮೇಲೆ ಗ್ಯಾಂಗ್ ರೇಪ್, 7 ಮಂದಿ ಬಂಧನ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಹೆಂಡತಿಯನ್ನೇ ರೂ. 50 ಸಾವಿರಕ್ಕೆ ಮಾರಿದ ಗಂಡ: ಮಹಿಳೆ ಮೇಲೆ ಗ್ಯಾಂಗ್ ರೇಪ್, 7 ಮಂದಿ ಬಂಧನ!

Share
ಗಂಡ
Share

ಬನಸ್ಕಾಂತ (ಗುಜರಾತ್): ಹೆಂಡತಿಯನ್ನೇ ದೇವರೆಂದು ಭಾವಿಸುವ ಈ ಸಮಾಜದಲ್ಲಿ, ಇಲ್ಲೊಬ್ಬ ಪಾಪಿ ಗಂಡ ಹಣದಾಸೆಗೆ ತನ್ನ ಸ್ವಂತ ಪತ್ನಿಯನ್ನೇ ಅಪರಿಚಿತರಿಗೆ ಕೇವಲ 50,000 ರೂಪಾಯಿಗೆ ಮಾರಾಟ ಮಾಡಿರುವ ಬೆಚ್ಚಿಬೀಳಿಸುವ ಘಟನೆ ಗುಜರಾತ್‌ನ ಬನಸ್ಕಾಂತ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಮಾನವ ಸಾಗಣೆಗೆ (Human Trafficking) ಬಲಿಯಾದ ಈ ದುರದೃಷ್ಟಕರ ಮಹಿಳೆಯನ್ನು ಅಪಹರಿಸಿ, ಒತ್ತೆಯಾಳಾಗಿ ಇಟ್ಟುಕೊಂಡು ಸರಣಿ ಅತ್ಯಾಚಾರ ನಡೆಸಿ, ಆಕೆಯ ಚಿನ್ನಾಭರಣಗಳನ್ನು ದೋಚಲಾಗಿದೆ.

ಈ ವಿಕೃತ ಕೃತ್ಯಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಪತಿ ನಿಕೇಶ್ ಪಟೇಲ್ ಸೇರಿದಂತೆ ಒಟ್ಟು ಏಳು ಜನರನ್ನು ಪಾಲನ್‌ಪುರ ಪಶ್ಚಿಮ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರಿಗೆ ಅನುಮಾನ ಬಂದಿದ್ದು ಹೇಗೆ?

ಮೇ 11 ರಂದು ಆರೋಪಿ ಪತಿ ನಿಕೇಶ್ ಪಟೇಲ್, ತನ್ನ ಪತ್ನಿ ಪಾಲನ್‌ಪುರ ನಗರದಿಂದ ನಾಪತ್ತೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದನು. ಆದರೆ, ದೂರು ನೀಡಿದ ಕೇವಲ ಎರಡೇ ದಿನಗಳಲ್ಲಿ ನಿಕೇಶ್ ಪಟೇಲ್ ಕೂಡ ನಾಪತ್ತೆಯಾಗಿದ್ದನು. ಇದರಿಂದ ಗಾಬರಿಗೊಂಡ ಆತನ ತಂದೆ ಪಾಲನ್‌ಪುರ ಪೂರ್ವ ಪೊಲೀಸ್ ಠಾಣೆಯಲ್ಲಿ ಮಗ ನಾಪತ್ತೆಯಾಗಿರುವ ಬಗ್ಗೆ ಮತ್ತೊಂದು ದೂರು ದಾಖಲಿಸಿದ್ದರು. ಗಂಡ-ಹೆಂಡತಿ ಇಬ್ಬರೂ ಬೆನ್ನುಬೆನ್ನಿಗೆ ನಾಪತ್ತೆಯಾದ ಈ ವಿಚಿತ್ರ ನಡೆ ಪೊಲೀಸರಲ್ಲಿ ತೀವ್ರ ಅನುಮಾನ ಮೂಡಿಸಿತು.

ತನಿಖೆಯಲ್ಲಿ ಹೊರಬಂತು ಕರಾಳ ಸತ್ಯ!

ಡಿಸಿಪಿ ಜಿಗ್ನೇಶ್ ಗಮಿತ್ ನೇತೃತ್ವದಲ್ಲಿ ತನಿಖೆ ತೀವ್ರಗೊಳಿಸಿದ ಪೊಲೀಸರು, ಇಬ್ಬರನ್ನೂ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ಈ ವೇಳೆ ಸಂತ್ರಸ್ತ ಮಹಿಳೆಯನ್ನು ರಕ್ಷಿಸಿ ವಿಚಾರಣೆ ನಡೆಸಿದಾಗ ಇಡೀ ನೆಟ್‌ವರ್ಕ್‌ನ ಕರಾಳ ಮುಖ ಬಯಲಾಗಿದೆ. ತನ್ನ ಪತಿ ನಿಕೇಶ್ ಪಟೇಲ್ ತನ್ನ ಸಹಚರರಾದ ಸಂಜಯ್ ಠಾಕೂರ್, ಅಶೋಕ್ ಠಾಕೂರ್ ಮತ್ತು ಸಚಿನ್ ದರ್ಬಾರ್ ಎಂಬುವವರೊಂದಿಗೆ ಸೇರಿ ಕೇವಲ ₹50,000 ಹಣಕ್ಕೆ ತನ್ನನ್ನು ಮಾರಾಟ ಮಾಡಿದ್ದಾಗಿ ಸಂತ್ರಸ್ತೆ ಕಣ್ಣೀರು ಹಾಕಿದ್ದಾಳೆ.

ಖರೀದಿಸಿದ ಕಾಮುಕರು ಮಹಿಳೆಯನ್ನು ರಹಸ್ಯ ಸ್ಥಳದಲ್ಲಿ ಕೂಡಿಹಾಕಿ, ನಿರಂತರವಾಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅಷ್ಟೇ ಅಲ್ಲದೆ ಆಕೆಯ ಮೈಮೇಲಿದ್ದ ಒಡವೆಗಳನ್ನು ಬಲವಂತವಾಗಿ ಕಸಿದುಕೊಂಡು ಸ್ಥಳೀಯ ಜ್ಯುವೆಲ್ಲರ್ಸ್‌ಗೆ ಮಾರಾಟ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗೆ ಹಳೇ ಚಾಳಿ!

ಪ್ರಮುಖ ಆರೋಪಿ ನಿಕೇಶ್ ಪಟೇಲ್ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು, ಈ ಹಿಂದೆ ಮದುವೆಯಾಗಿದ್ದರೂ ಸಹ ಯುವತಿಯರನ್ನು ಪುಸಲಾಯಿಸಿ ಅಪಹರಿಸುತ್ತಿದ್ದ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಸದ್ಯ ಪೊಲೀಸರು ಅತ್ಯಾಚಾರ, ಮಾನವ ಸಾಗಣೆ ಮತ್ತು ಕ್ರಿಮಿನಲ್ ಪಿತೂರಿ ಪ್ರಕರಣ ದಾಖಲಿಸಿಕೊಂಡು, ಈ ದಂಧೆಯ ಹಿಂದೆ ಬೇರೆ ಯಾರಾದರೂ ಇದ್ದಾರೆಯೇ ಎಂಬ ನಿಟ್ಟಿನಲ್ಲಿ ತನಿಖೆ ಮುಂದುವರಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *