Home ಉದ್ಯೋಗ ವಾರ್ತೆ 899 ಎಲೆಕ್ಟ್ರಿಷಿಯನ್, ಡ್ರಾಫ್ಟ್ಸ್‌ಮನ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: ಸಂಪೂರ್ಣ ಮಾಹಿತಿ ಇಲ್ಲಿದೆ
ಉದ್ಯೋಗ ವಾರ್ತೆದಾವಣಗೆರೆಬೆಂಗಳೂರು

899 ಎಲೆಕ್ಟ್ರಿಷಿಯನ್, ಡ್ರಾಫ್ಟ್ಸ್‌ಮನ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: ಸಂಪೂರ್ಣ ಮಾಹಿತಿ ಇಲ್ಲಿದೆ

Share
ಅರ್ಜಿ
Share

ಬೆಂಗಳೂರು: ರಕ್ಷಣಾ ಸಚಿವಾಲಯದ ಒಳಪಡುವ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) – ಜನರಲ್ ರಿಸರ್ವ್ ಇಂಜಿನಿಯರ್ ಫೋರ್ಸ್ (GREF) ಖಾಲಿ ಇರುವ ವಿವಿಧ ತಾಂತ್ರಿಕ ಮತ್ತು ಟ್ರೇಡ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ (Advt No. 01/2026) ಹೊರಡಿಸಿದೆ. ಒಟ್ಟು 899 ಹುದ್ದೆಗಳು ಲಭ್ಯವಿದ್ದು, ಕೇವಲ ಅರ್ಹ ಪುರುಷ ಅಭ್ಯರ್ಥಿಗಳಿಂದ ಮಾತ್ರ ಆಫ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ:

ಸ್ಟೋರ್ ಕೀಪರ್ ಟೆಕ್ನಿಕಲ್ (SKT) – 300

ಆಪರೇಟರ್ ಕಮ್ಯುನಿಕೇಶನ್ – 261

ಆಪರೇಟರ್ ಎಕ್ಸ್‌ಕವೇಟಿಂಗ್ ಮೆಷಿನರಿ (OEM) – 207

ಎಲೆಕ್ಟ್ರಿಷಿಯನ್ – 79

ಡ್ರಾಫ್ಟ್ಸ್‌ಮನ್ – 42

ಹಿಂದಿ ಟೈಪಿಸ್ಟ್ – 10

ವಯೋಮಿತಿ:

ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಮತ್ತು ಗರಿಷ್ಠ 27 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ (ಜೂನ್ 01, 2026 ಕ್ಕೆ ಅನ್ವಯಿಸುವಂತೆ). ಸರ್ಕಾರದ ನಿಯಮಾವಳಿಗಳ ಪ್ರಕಾರ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇರಲಿದೆ.

ಶೈಕ್ಷಣಿಕ ಅರ್ಹತೆ:

ಹುದ್ದೆಗಳಿಗೆ ಅನುಗುಣವಾಗಿ 10ನೇ ತರಗತಿ (ಮೆಟ್ರಿಕ್ಯುಲೇಷನ್), ಪಿಯುಸಿ (10+2) ಉತ್ತೀರ್ಣತೆಯೊಂದಿಗೆ ಸಂಬಂಧಪಟ್ಟ ವಿಭಾಗದಲ್ಲಿ ಐಟಿಐ (ITI) ಪ್ರಮಾಣಪತ್ರ ಅಥವಾ ಹೆವಿ ಮೋಟಾರ್ ವೆಹಿಕಲ್ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು.

ಅರ್ಜಿ ಶುಲ್ಕ ಮತ್ತು ಸಲ್ಲಿಕೆ ವಿಧಾನ:

ಸಾಮಾನ್ಯ (UR), ಒಬಿಸಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ 50 ರೂಪಾಯಿ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ (SBI Collect ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಪಾವತಿಸಬೇಕು). ಎಸ್‌ಸಿ, ಎಸ್‌ಟಿ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಪೋಸ್ಟ್ ಮೂಲಕ “Commandant, GREF Centre, Dighi Camp, Pune – 411015” ವಿಳಾಸಕ್ಕೆ ತಲುಪಿಸಬೇಕು.

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ: ಮೇ 21, 2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 04, 2026 (ಈಶಾನ್ಯ ರಾಜ್ಯಗಳ ಅಭ್ಯರ್ಥಿಗಳಿಗೆ ಜುಲೈ 19, 2026)

ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: www.bro.gov.in

Share

Leave a comment

Leave a Reply

Your email address will not be published. Required fields are marked *

Related Articles