Home ಕ್ರೈಂ ನ್ಯೂಸ್ ಮದುವೆಯಾಗದ ಯುವಕರೇ ಟಾರ್ಗೆಟ್: ‘ಲೂಟೇರಿ ದುಲ್ಹನ್’ ಗ್ಯಾಂಗ್ ವಂಚಕ ವಧು ಸೇರಿ ಮೂವರ ಕೃತ್ಯವೇ ಭಯಾನಕ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಮದುವೆಯಾಗದ ಯುವಕರೇ ಟಾರ್ಗೆಟ್: ‘ಲೂಟೇರಿ ದುಲ್ಹನ್’ ಗ್ಯಾಂಗ್ ವಂಚಕ ವಧು ಸೇರಿ ಮೂವರ ಕೃತ್ಯವೇ ಭಯಾನಕ!

Share
ಮದುವೆ
Share

ಭೋಪಾಲ್: ಮದುವೆಯ ಹೆಸರಿನಲ್ಲಿ ವಂಚಿಸುತ್ತಿದ್ದ ‘ಲೂಟೇರಿ ದುಲ್ಹನ್’ (ರನ್‌ಅವೇ ಬ್ರೈಡ್) ಗ್ಯಾಂಗ್ ಅನ್ನು ಭೋಪಾಲ್ ಪೊಲೀಸರು ಯಶಸ್ವಿಯಾಗಿ ಪತ್ತೆಹಚ್ಚಿದ್ದು, ವಂಚಕ ವಧು ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ರೂಪ್ ಸಿಂಗ್ ರೈಕ್ವಾರ್, ಸರೋಜ್ ಉಯಿಕಿ (ವಧು) ಮತ್ತು ಇವರ ಸಹಚರ ರವಿ ಕುಶ್ವಾಹಾ ಎಂದು ಗುರುತಿಸಲಾಗಿದೆ.

ಘಟನೆಯ ವಿವರ:

ಭೋಪಾಲ್‌ನ ಅಮ್ಲ್ಯಾ ಗ್ರಾಮದ ನಿವಾಸಿ ಸರ್ವನ್ ಮೀನಾ ಅವರಿಗೆ ಮದುವೆಗೆ ಹುಡುಗಿ ಸಿಗುತ್ತಿರಲಿಲ್ಲ. ಇದನ್ನು ಬಂಡವಾಳ ಮಾಡಿಕೊಂಡ ಮಧ್ಯವರ್ತಿ ರೂಪ್ ಸಿಂಗ್, ತಾನು ಹುಡುಗಿಯನ್ನು ಹುಡುಕಿ ಕೊಡುವುದಾಗಿ ನಂಬಿಸಿ ಮೀನಾ ಕುಟುಂಬದಿಂದ 2.5 ಲಕ್ಷ ರೂಪಾಯಿ ಹಣ ಪಡೆದಿದ್ದTarget. ಏಪ್ರಿಲ್ 30 ರಂದು ಹಣ ಕೈ ಸೇರಿದ ತಕ್ಷಣ ರೂಪ್ ಸಿಂಗ್, ಸರೋಜ್ ಉಯಿಕಿ ಎಂಬಾಕೆಯನ್ನು ಪರಿಚಯಿಸಿದ್ದಾನೆ. ನಂತರ ಇಬ್ಬರಿಗೂ ಮದುವೆ ಮಾಡಿಸಲಾಗಿತ್ತು.

ಆದರೆ, ಮದುವೆಯಾಗಿ ಕೇವಲ ಹತ್ತು ದಿನಗಳಲ್ಲೇ ವಧು ಸರೋಜ್ ಮನೆಯಿಂದ ನಾಪತ್ತೆಯಾಗಿದ್ದಾಳೆ. ಇದರಿಂದ ಆತಂಕಗೊಂಡ ವರನ ಕುಟುಂಬಸ್ಥರು ಮಧ್ಯವರ್ತಿ ರೂಪ್ ಸಿಂಗ್‌ನನ್ನು ಸಂಪರ್ಕಿಸಿದಾಗ ಆತ ಸರಿಯಾಗಿ ಸ್ಪಂದಿಸಿಲ್ಲ. ತಾವು ವಂಚನೆಗೊಳಗಾಗಿದ್ದೇವೆ ಎಂದು ಅರಿತ ಸರ್ವನ್ ಮೀನಾ ಕುಟುಂಬ ನಜೀರಾಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles