Home ಉದ್ಯೋಗ ವಾರ್ತೆ KSP ನೇಮಕಾತಿ 2026: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 8176 ಕಾನ್ಸ್‌ಟೇಬಲ್ ಮತ್ತು ಸಬ್‌ಇನ್ಸ್‌ಪೆಕ್ಟರ್ ಹುದ್ದೆಗಳ ಭರ್ತಿಗೆ ಅಧಿಸೂಚನೆ! ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ
ಉದ್ಯೋಗ ವಾರ್ತೆದಾವಣಗೆರೆನವದೆಹಲಿಬೆಂಗಳೂರು

KSP ನೇಮಕಾತಿ 2026: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 8176 ಕಾನ್ಸ್‌ಟೇಬಲ್ ಮತ್ತು ಸಬ್‌ಇನ್ಸ್‌ಪೆಕ್ಟರ್ ಹುದ್ದೆಗಳ ಭರ್ತಿಗೆ ಅಧಿಸೂಚನೆ! ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ

Share
ಪೊಲೀಸ್
Share

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಕರ್ನಾಟಕದ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ ಎದುರಾಗಿದೆ. ಕರ್ನಾಟಕ ರಾಜ್ಯ ಪೊಲೀಸ್ (KSP) ಇಲಾಖೆಯು ಖಾಲಿ ಇರುವ ಒಟ್ಟು 8,176 ಪೊಲೀಸ್ ಕಾನ್ಸ್‌ಟೇಬಲ್, ಸಬ್‌ಇನ್ಸ್‌ಪೆಕ್ಟರ್ (SI) ಹಾಗೂ ಎಎಸ್‌ಐ (ASI) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಶೀಘ್ರದಲ್ಲೇ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಿದೆ.

ಕರ್ನಾಟಕ ಸರ್ಕಾರದ ಬೃಹತ್ 56,432 ಹುದ್ದೆಗಳ ಭರ್ತಿ ಪ್ರಕ್ರಿಯೆಯ ಭಾಗವಾಗಿ ಈ ನೇಮಕಾತಿ ನಡೆಯುತ್ತಿದ್ದು, ಆಂತರಿಕ ಪ್ರಕ್ರಿಯೆಗಳು ಈಗಾಗಲೇ ಚುರುಕಾಗಿವೆ.

ಹುದ್ದೆಗಳ ವಿವರ :

ಈ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ (KK) ಭಾಗಕ್ಕೆ 1,786 ಹುದ್ದೆಗಳು ಹಾಗೂ ಉಳಿಕೆ ಮೂಲ ವೃಂದದ (NKK) ಭಾಗಕ್ಕೆ 6,390 ಹುದ್ದೆಗಳನ್ನು ಮೀಸಲಿಡಲಾಗಿದೆ.

ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್: 4,110 ಹುದ್ದೆಗಳು

ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (APC): 1,650 ಹುದ್ದೆಗಳು

ವಿಶೇಷ ರಿಸರ್ವ್ ಪೊಲೀಸ್ ಕಾನ್ಸ್‌ಟೇಬಲ್ (KSRP): 2,032 ಹುದ್ದೆಗಳು

ಕೆಎಸ್ಐಎಸ್ಎಫ್ (KSISF) ಕಾನ್ಸ್‌ಟೇಬಲ್: 76 ಹುದ್ದೆಗಳು

ಡಿಡೆಕ್ಟಿವ್ ಸಬ್ ಇನ್ಸ್‌ಪೆಕ್ಟರ್ (DSI): 56 ಹುದ್ದೆಗಳು

ಅರ್ಹತೆಗಳು ಮತ್ತು ವಯೋಮಿತಿ:

ಶೈಕ್ಷಣಿಕ ಅರ್ಹತೆ: ಹುದ್ದೆಗಳಿಗೆ ಅನುಗುಣವಾಗಿ ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ, ಪಿಯುಸಿ (12th), ಐಟಿಐ, ಡಿಪ್ಲೊಮಾ ಅಥವಾ ಯಾವುದೇ ಪದವಿ (Degree) ಮುಗಿಸಿರಬೇಕು.

ವಯೋಮಿತಿ: ಕನಿಷ್ಠ 18 ವರ್ಷ ತುಂಬಿರಬೇಕು ಹಾಗೂ ಗರಿಷ್ಠ ವಯೋಮಿತಿ 38 ವರ್ಷಗಳು (ಹುದ್ದೆಯ ನಿಯಮಾವಳಿಗಳ ಪ್ರಕಾರ).

ವಯೋಮಿತಿ ಸಡಿಲಿಕೆ: ಒಬಿಸಿ (2A, 2B, 3A, 3B) ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇರಲಿದೆ.

ಆಯ್ಕೆ ವಿಧಾನ:

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ (Written Exam), ದೈಹಿಕ ಸಾಮರ್ಥ್ಯ ಪರೀಕ್ಷೆ (Endurance Test), ದೈಹಿಕ ಜಾಣ್ಮೆ ಪರೀಕ್ಷೆ (Physical Standard Test) ಹಾಗೂ ಸಂದರ್ಶನದ (ಅನ್ವಯಿಸುವ ಹುದ್ದೆಗಳಿಗೆ ಮಾತ್ರ) ಮೂಲಕ ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು ಮತ್ತು ಲಿಂಕ್‌ಗಳು:

ಅರ್ಜಿ ಸಲ್ಲಿಕೆ ಆರಂಭದ ದಿನಾಂಕ: ಶೀಘ್ರದಲ್ಲೇ ಪ್ರಕಟಿಸಲಾಗುವುದು (Upcoming Soon)

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಪ್ರಕಟಣೆ ಹೊರಬಿದ್ದ ತಕ್ಷಣ ತಿಳಿಸಲಾಗುವುದು.

ಅಧಿಕೃತ ವೆಬ್‌ಸೈಟ್: ksp-recruitment.in ಅಥವಾ ksp.karnataka.gov.in

Share

Leave a comment

Leave a Reply

Your email address will not be published. Required fields are marked *