Home ದಾವಣಗೆರೆ ಕಡಿಮೆ ಕರೆಂಟ್ ಬಳಸಿದ್ರೂ ಬಿಲ್ ಜಾಸ್ತಿ! ಗ್ರಾಹಕರಿಗೆ ಬಿಗ್ ಶಾಕ್ ನೀಡಲು ಸಜ್ಜಾದ ಕೇಂದ್ರ ವಿದ್ಯುತ್ ಪ್ರಾಧಿಕಾರ!
ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯ

ಕಡಿಮೆ ಕರೆಂಟ್ ಬಳಸಿದ್ರೂ ಬಿಲ್ ಜಾಸ್ತಿ! ಗ್ರಾಹಕರಿಗೆ ಬಿಗ್ ಶಾಕ್ ನೀಡಲು ಸಜ್ಜಾದ ಕೇಂದ್ರ ವಿದ್ಯುತ್ ಪ್ರಾಧಿಕಾರ!

Share
ಕರೆಂಟ್
Share

ಬೆಂಗಳೂರು / ನವದೆಹಲಿ: ನೀವು ಮನೆಯಲ್ಲಿ ಕರೆಂಟ್ ಕಡಿಮೆ ಬಳಸಿದರೂ ಇನ್ಮುಂದೆ ನಿಮ್ಮ ಜೇಬಿಗೆ ಕತ್ತರಿ ಬೀಳುವುದು ಗ್ಯಾರಂಟಿ! ಹೌದು, ದೇಶಾದ್ಯಂತ ವಿದ್ಯುತ್ ಬಿಲ್ ಲೆಕ್ಕಾಚಾರ ಮಾಡುವ ಪದ್ಧತಿಯಲ್ಲಿ ಭಾರಿ ಬದಲಾವಣೆ ತರಲು ಕೇಂದ್ರ ವಿದ್ಯುತ್ ಪ್ರಾಧಿಕಾರ (CEA) ಗಂಭೀರ ಪ್ರಸ್ತಾಪವೊಂದನ್ನು ಸಿದ್ಧಪಡಿಸಿದೆ.

ಏನಿದು ಹೊಸ ಪ್ರಸ್ತಾಪ? ಪ್ರಸ್ತುತ ನಾವು ಬಳಸುವ ಯೂನಿಟ್ ಆಧಾರದ ಮೇಲೆ ವಿದ್ಯುತ್ ಬಿಲ್ ನಿಗದಿಯಾಗುತ್ತದೆ. ಆದರೆ ಸಿಇಎ (CEA) ಶಿಫಾರಸಿನ ಪ್ರಕಾರ, ಇನ್ಮುಂದೆ ಪ್ರತಿ ತಿಂಗಳ ‘ಸ್ಥಿರ ಶುಲ್ಕ’ವನ್ನು (Fixed Charges) ಗಣನೀಯವಾಗಿ ಹೆಚ್ಚಿಸಲಾಗುತ್ತದೆ. ಅಂದರೆ, ನೀವು ಕಡಿಮೆ ಕರೆಂಟ್ ಬಳಸಿದರೂ ಸಹ, ಸರ್ಕಾರ ನಿಗದಿಪಡಿಸುವ ಕನಿಷ್ಠ ಸ್ಥಿರ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಲೇಬೇಕಾಗುತ್ತದೆ.

ದರ ಏರಿಕೆಗೆ ಕಾರಣವೇನು?

ಬೆಳೆಯುತ್ತಿರುವ ಸೋಲಾರ್ ಕ್ರೇಜ್: ಇತ್ತೀಚಿನ ದಿನಗಳಲ್ಲಿ ಕೈಗಾರಿಕೆಗಳು ಹಾಗೂ ಶ್ರೀಮಂತ ಕುಟುಂಬಗಳು ತಮ್ಮದೇ ಆದ ರೂಫ್‌ಟಾಪ್ ಸೋಲಾರ್ (Rooftop Solar) ಅಳವಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಅವರು ಗ್ರಿಡ್‌ನಿಂದ ವಿದ್ಯುತ್ ಖರೀದಿಸುವುದು ಕಡಿಮೆಯಾಗಿದೆ.

ಡಿಸ್ಕಾಂಗಳ ನಷ್ಟ: ಸೋಲಾರ್ ಬಳಸುವವರು ಕೇವಲ ಎಮರ್ಜೆನ್ಸಿ ಬ್ಯಾಕಪ್‌ಗಾಗಿ ಮಾತ್ರ ಸರ್ಕಾರಿ ವಿದ್ಯುತ್ ಲೈನ್‌ ನೆಚ್ಚಿಕೊಂಡಿರುತ್ತಾರೆ. ಆದರೆ ಇಲಾಖೆಯು ಇವರಿಗಾಗಿ ಮೂಲಸೌಕರ್ಯ ಹಾಗೂ ನೆಟ್‌ವರ್ಕ್ ನಿರ್ವಹಣೆಯನ್ನು ನಿರಂತರವಾಗಿ ಮಾಡಬೇಕಿರುತ್ತದೆ. ಇದರಿಂದ ವಿದ್ಯುತ್ ಸರಬರಾಜು ಕಂಪನಿಗಳಿಗೆ (Discoms) ನಷ್ಟ ಉಂಟಾಗುತ್ತಿದೆ.

ಖರ್ಚು-ಆದಾಯದ ವ್ಯತ್ಯಾಸ: ವಿದ್ಯುತ್ ಕಂಬಗಳು, ತಂತಿಗಳು ಹಾಗೂ ಉದ್ಯೋಗಿಗಳ ಸಂಬಳಕ್ಕಾಗಿ ಇಲಾಖೆಗೆ ಒಟ್ಟು ವೆಚ್ಚದ ಶೇ. 38 ರಿಂದ 56 ರಷ್ಟು ಹಣ ಬೇಕಾಗುತ್ತದೆ. ಆದರೆ ಪ್ರಸ್ತುತ ಸ್ಥಿರ ಶುಲ್ಕದಿಂದ ಬರುತ್ತಿರುವ ಆದಾಯ ಕೇವಲ ಶೇ. 9 ರಿಂದ 20 ರಷ್ಟು ಮಾತ್ರ. ಈ ನಷ್ಟ ತುಂಬಲು ಸ್ಥಿರ ಶುಲ್ಕ ಹೆಚ್ಚಳಕ್ಕೆ ತೀರ್ಮಾನಿಸಲಾಗಿದೆ.

2030ರ ಒಳಗಾಗಿ ಜಾರಿ: ಈ ಹೊಸ ನಿಯಮದ ಅನ್ವಯ, 2030 ರ ವೇಳೆಗೆ ಗೃಹಬಳಕೆ ಮತ್ತು ಕೃಷಿ ಗ್ರಾಹಕರ ಒಟ್ಟು ಬಿಲ್‌ನಲ್ಲಿ ಕನಿಷ್ಠ ಶೇ. 25 ರಷ್ಟು ಭಾಗ ಕಡ್ಡಾಯ ಸ್ಥಿರ ಶುಲ್ಕವಾಗಿರಲಿದೆ. ಇನ್ನು ಕೈಗಾರಿಕಾ ವಲಯಕ್ಕೆ ಇದನ್ನು ಶೇ. 100 ರಷ್ಟು ಮಾಡಲು ಪ್ರಸ್ತಾಪಿಸಲಾಗಿದೆ. ಈ ವರದಿಯನ್ನು ಶೀಘ್ರದಲ್ಲೇ ನಿಯಂತ್ರಕರ ವೇದಿಕೆಗೆ (Forum of Regulators) ಸಲ್ಲಿಸಿ ಅನುಮೋದನೆ ಪಡೆಯಲಾಗುವುದು ಎಂದು ತಿಳಿದುಬಂದಿದೆ.

Share

Leave a comment

Leave a Reply

Your email address will not be published. Required fields are marked *

Related Articles