Home ಕ್ರೈಂ ನ್ಯೂಸ್ ರಾಹುಲ್ ಗಾಂಧಿ ಡಿಎನ್ಎ ಟೆಸ್ಟ್ ಮಾಡಿಸಬೇಕೆಂದಿರುವ ಯತ್ನಾಳ್ ಶಾಸಕ ಸ್ಥಾನಕ್ಕೆ ಯೋಗ್ಯನಲ್ಲ: ಎಫ್ಐಆರ್ ದಾಖಲಿಸಿ ಬಂಧಿಸುವಂತೆ ಬಿ. ಎನ್. ವಿನಾಯಕ್ ಆಗ್ರಹ
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ರಾಹುಲ್ ಗಾಂಧಿ ಡಿಎನ್ಎ ಟೆಸ್ಟ್ ಮಾಡಿಸಬೇಕೆಂದಿರುವ ಯತ್ನಾಳ್ ಶಾಸಕ ಸ್ಥಾನಕ್ಕೆ ಯೋಗ್ಯನಲ್ಲ: ಎಫ್ಐಆರ್ ದಾಖಲಿಸಿ ಬಂಧಿಸುವಂತೆ ಬಿ. ಎನ್. ವಿನಾಯಕ್ ಆಗ್ರಹ

Share
ರಾಹುಲ್ ಗಾಂಧಿ
Share

ದಾವಣಗೆರೆ: ರಾಹುಲ್ ಗಾಂಧಿ ಅವರು ರಾಜೀವ್ ಗಾಂಧಿ ಮಗನೋ ಅಲ್ವೋ ಎಂಬ ಬಗ್ಗೆ ಡಿಎನ್ಎ ಟೆಸ್ಟ್ ಆಗಬೇಕು, ಸೋನಿಯಾ ಗಾಂಧಿ ತಂದೆ ಭಾರತದ ವಿಗ್ರಹ ಕಳ್ಳತನ ಮಾಡಿದ್ದಾರೆ ಎಂಬ ಸುಳ್ಳು ಹಾಗೂ ಆಧಾರರಹಿತ ಆರೋಪ ಮಾಡಿರುವ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡಲೇ ಬೇಷರತ್ ಕ್ಷಮೆಯಾಚಿಸಬೇಕು. ಆಡಿರುವ ಮಾತುಗಳನ್ನು ವಾಪಸ್ ಪಡೆಯಬೇಕು ಎಂದು ಕೆಪಿಸಿಸಿ ಸಂಶೋಧನೆ ಮತ್ತು ತರಬೇತಿ ವಿಭಾಗದ ಸಂಚಾಲಕ ಹಾಗೂ ಕಾಂಗ್ರೆಸ್ ಎಸ್ಟಿ ಘಟಕದ ಉಪಾಧ್ಯಕ್ಷ ಬಿ. ಎನ್. ವಿನಾಯಕ್ ಆಗ್ರಹಿಸಿದ್ದಾರೆ.

ಬಿಜೆಪಿ ಪಕ್ಷವು ಇಂಥ ಮಾತನಾಡಿದ್ದಕ್ಕೆ ಯತ್ನಾಳ್ ಅವರನ್ನು ಉಚ್ಚಾಟಿಸಿದೆ. ಬಾಯಿಹರುಕ, ಎಲುಬಿಲ್ಲದ ನಾಲಗೆ ಎಂದು ಬೇಕಾಬಿಟ್ಟಿ, ಸುಳ್ಳು ಆರೋಪ ಮಾಡುವ ಯತ್ನಾಳ್ ಗೆ ನಾಲಗೆ ಮೇಲೆ ಹಿಡಿತವಿರಲಿ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಅವರ ತಂದೆ ಮೇಲೆ ಆರೋಪ ಮಾಡಿರುವ ಯತ್ನಾಳ್ ಶಾಸಕನಾಗುವುದಕ್ಕೆ ಯೋಗ್ಯನಲ್ಲ. ಕೂಡಲೇ ರಾಜೀನಾಮೆ ನೀಡಬೇಕು. ಪೊಲೀಸರು ಇಂಥ ಹೇಳಿಕೆ ನೀಡಿರುವ ಯತ್ನಾಳ್ ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಬಿಜೆಪಿ ಪಕ್ಷದಿಂದ ಗೆದ್ದು ಬಂದು ಆ ಪಕ್ಷದ ನಾಯಕರ ವಿರುದ್ಧವೇ ಆರೋಪ ಮಾಡಿ ಉಂಡ ಮನೆಗೆ ದ್ರೋಹ ಬಗೆದ ರಾಜಕಾರಣಿ ಎಂಬ ಕೀರ್ತಿ ಪಡೆದಿದ್ದರೆ ಅದು ಯತ್ನಾಳ್ ಮಾತ್ರ. ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರನ್ನು ನಿಂದಿಸುವಂಥ ಮಾತನಾಡಿದರೆ ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳುತ್ತಾರೆಂದು ತಲೆಬುಡವಿಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ರಾಹುಲ್ ಗಾಂಧಿ ಅವರ ವಿರುದ್ಧ ಹೋದ ಕಡೆಗಳಲೆಲ್ಲಾ ಸುಳ್ಳು ಆರೋಪ ಮಾಡುತ್ತಾ, ನಿಂದನೆ ಮಾಡುತ್ತಾ ತನ್ನ ಯೋಗ್ಯತೆ ಏನು ಎಂಬುದನ್ನು ಯತ್ನಾಳ್ ಅವರೇ ತೋರಿಸಿಕೊಡುತ್ತಿದ್ದಾರೆ. ಮಾನ, ಮರ್ಯಾದೆ ಇಲ್ಲದ ರಾಜಕಾರಣಿ ಎಂದರೆ ಅದು ಯತ್ನಾಳ್ ಮಾತ್ರ. ಇನ್ನು ಮುಂದೆ ರಾಹುಲ್ ಗಾಂಧಿ ವಿರುದ್ಧ ಆರೋಪ ಮಾಡಿದರೆ ಕಾಂಗ್ರೆಸ್ಸಿಗರು ಸುಮ್ಮನೆ ಕೂರುವ ಪ್ರಶ್ನೆಯೇ ಇಲ್ಲ. ರಾಜ್ಯಾದ್ಯಂತ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಯತ್ನಾಳ್ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿ. ಎನ್. ವಿನಾಯಕ್ ಅವರು ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles