Home ಕ್ರೈಂ ನ್ಯೂಸ್ ಬೆಂಗಳೂರು: ದಿಢೀರ್ ಮನೆ ಖಾಲಿ ಮಾಡಲು ಹೇಳಿದ ಮನೆಮಾಲೀಕ; ಅಸಲಿ ಕಾರಣ ಕೇಳಿ ಬೆಚ್ಚಿಬಿದ್ದ ಯುವತಿ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಬೆಂಗಳೂರು: ದಿಢೀರ್ ಮನೆ ಖಾಲಿ ಮಾಡಲು ಹೇಳಿದ ಮನೆಮಾಲೀಕ; ಅಸಲಿ ಕಾರಣ ಕೇಳಿ ಬೆಚ್ಚಿಬಿದ್ದ ಯುವತಿ!

Share
ಬೆಂಗಳೂರು
Share

ಬೆಂಗಳೂರು: ಸಿಲಿಕಾನ್ ಸಿಟಿಯ ಬಾಡಿಗೆ ಮನೆಯ ಮಾರುಕಟ್ಟೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವುದು ಹೊಸದೇನಲ್ಲ. ಆದರೆ, ಇಲ್ಲೊಬ್ಬ ಮನೆಮಾಲೀಕ ಬಾಡಿಗೆದಾರ ಮಹಿಳೆಗೆ ದಿಢೀರ್ ಮನೆ ಖಾಲಿ ಮಾಡುವಂತೆ ಹೇಳಿ, ನಂತರ ನೀಡಿದ ಅಸಲಿ ಕಾರಣ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ದಿಶಾಕಾ ಎಂಬ ಯುವತಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋ ಈಗ ವೈರಲ್ ಆಗಿದೆ. ಆಕೆಯ ಮನೆಮಾಲೀಕ ಮೊದಲು ಮಾಸಿಕ ಬಾಡಿಗೆಯನ್ನು ₹4,000 ಹೆಚ್ಚಳ ಮಾಡುವುದಾಗಿ ಹೇಳಿದ್ದಲ್ಲದೆ, ತನ್ನ ಸಹೋದರ ನಗರಕ್ಕೆ ಬರುತ್ತಿರುವುದರಿಂದ ಆತನಿಗೆ ಈ ಫ್ಲ್ಯಾಟ್ ಬೇಕಾಗಿದೆ, ಹಾಗಾಗಿ ಮನೆ ಖಾಲಿ ಮಾಡಿ ಎಂದು ತಿಳಿಸಿದ್ದಾನೆ.

ಆದರೆ, ಆ ಇಡೀ ಕಟ್ಟಡ ಆ ಮಾಲೀಕನಿಗೆ ಸೇರಿದ್ದರೂ, ಕೇವಲ ತನ್ನನ್ನೇ ಯಾಕೆ ಖಾಲಿ ಮಾಡಲು ಹೇಳುತ್ತಿದ್ದಾನೆ ಎಂಬ ಅನುಮಾನ ಯುವತಿಗೆ ಬಂದಿದೆ. ಈ ಬಗ್ಗೆ ಮತ್ತಷ್ಟು ಮಾತನಾಡಿದಾಗ, ಮನೆಮಾಲೀಕ ಅಸಲಿ ವಿಷಯ ಬಾಯಿಬಿಟ್ಟಿದ್ದಾನೆ. ಸದ್ಯ ಆ ಪ್ರದೇಶದಲ್ಲಿ 1BHK ಫ್ಲ್ಯಾಟ್‌ಗಳ ಬಾಡಿಗೆ ₹26,000 ಇಂದ ₹28,000 ವರೆಗೆ ಏರಿಕೆಯಾಗಿದೆ ಎಂದು ಒಪ್ಪಿಕೊಂಡಿದ್ದಾನೆ.

ತನ್ನ ಸಹೋದರ ಬರುತ್ತಾನೆ ಎಂಬುದು ಕೇವಲ ನೆಪವಾಗಿದ್ದು, ಹೊಸ ಬಾಡಿಗೆದಾರರಿಂದ ಹೆಚ್ಚಿನ ಹಣ ವಸೂಲಿ ಮಾಡಲು ಮಾಲೀಕ ಈ ತಂತ್ರ ಹೂಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಬೆಂಗಳೂರಿನ ಮನೆಮಾಲೀಕರು ಕೇವಲ ಹಣದ ಹಿಂದೆ ಬಿದ್ದಿದ್ದಾರೆ ಎಂದು ತಾನು ಕೇಳಿದ್ದ ಮಾತು ಈಗ ಸ್ವತಃ ಅನುಭವಕ್ಕೆ ಬಂದಿದೆ ಎಂದು ಆಕೆ ಬೇಸರ ವ್ಯಕ್ತಪಡಿಸಿದ್ದಾಳೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬೆಂಗಳೂರಿನ ಹಲವು ಬಾಡಿಗೆದಾರರು ತಮಗೂ ಇಂತಹದ್ದೇ ಅನುಭವಗಳಾಗಿವೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಹೊಸಬರಿಗೆ ಹೆಚ್ಚಿನ ಬಾಡಿಗೆ ವಿಧಿಸುವುದು ಸುಲಭ ಎಂಬ ಕಾರಣಕ್ಕೆ ಹಳಬರನ್ನು ಇಂತಹ ನೆಪಗಳ ಮೂಲಕ ಹೊರಹಾಕಲಾಗುತ್ತಿದೆ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

Share

Leave a comment

Leave a Reply

Your email address will not be published. Required fields are marked *