Home ಕ್ರೈಂ ನ್ಯೂಸ್ “ವಿಚ್ಛೇದನ ಪಡೆದಿದ್ದಕ್ಕೆ ನಾನು ಈಗಲೂ ಖುಷಿಯಾಗಿದ್ದೇನೆ”: ಸಾಂಪ್ರಾದಾಯಿಕ ಮುಸ್ಲಿಂ ಕುಟುಂಬ ಬಿಟ್ಟಿದ್ದರ ಬಗ್ಗೆ ಮೌನ ಮುರಿದ ನಟಿ ಪೂಜಾ ಬೇಡಿ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಸಿನಿಮಾ

“ವಿಚ್ಛೇದನ ಪಡೆದಿದ್ದಕ್ಕೆ ನಾನು ಈಗಲೂ ಖುಷಿಯಾಗಿದ್ದೇನೆ”: ಸಾಂಪ್ರಾದಾಯಿಕ ಮುಸ್ಲಿಂ ಕುಟುಂಬ ಬಿಟ್ಟಿದ್ದರ ಬಗ್ಗೆ ಮೌನ ಮುರಿದ ನಟಿ ಪೂಜಾ ಬೇಡಿ!

Share
ಪೂಜಾ ಬೇಡಿ
Share

ಮುಂಬೈ: “ವಿಚ್ಛೇದನ ಪಡೆದಿದ್ದಕ್ಕೆ ನಾನು ಈಗಲೂ ಖುಷಿಯಾಗಿದ್ದೇನೆ”: ಹಳೆಯ ಸಂಪ್ರದಾಯದ ಬಗ್ಗೆ ಮೌನ ಮುರಿದ ನಟಿ ಪೂಜಾ ಬೇಡಿ! ಎಂದು ಬಾಲಿವುಡ್ ಖ್ಯಾತ ನಟಿ ಪೂಜಾ ಬೇಡಿ ಹೇಳಿದ್ದಾರೆ. 

ಬಾಲಿವುಡ್‌ನ ಖ್ಯಾತ ನಟಿ ಪೂಜಾ ಬೇಡಿ ತಮ್ಮ ವೈವಾಹಿಕ ಜೀವನ ಮತ್ತು ವಿಚ್ಛೇದನದ ಕುರಿತು ಮತ್ತೊಮ್ಮೆ ಮುಕ್ತವಾಗಿ ಮಾತನಾಡಿದ್ದಾರೆ.

1994ರಲ್ಲಿ ಫರ್ಹಾನ್ ಫರ್ನಿಚರ್ವಾಲಾ ಅವರನ್ನು ವಿವಾಹವಾಗಿದ್ದ ಪೂಜಾ, ಮದುವೆಯ ನಂತರ ತಮ್ಮ ವೃತ್ತಿಜೀವನವನ್ನು ಬಿಡಬೇಕಾಗಿ ಬಂದಿದ್ದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, “ಸಂಪ್ರದಾಯಸ್ಥ ಮುಸ್ಲಿಂ ಕುಟುಂಬಕ್ಕೆ ಸೊಸೆಯಾಗಿ ಹೋದ ಮೇಲೆ ಚಿತ್ರರಂಗದಲ್ಲಿ ಮುಂದುವರಿಯುವುದು ಅಸಾಧ್ಯವಾಗಿತ್ತು. ಆದರೆ ಆ 12 ವರ್ಷಗಳ ಸುಂದರ ಪಯಣ ನನಗೆ ಇಬ್ಬರು ಅದ್ಭುತ ಮಕ್ಕಳನ್ನು ನೀಡಿದೆ. ಕೇವಲ 12 ವರ್ಷಗಳ ಉತ್ತಮ ಜೀವನಕ್ಕಾಗಿ ನಾನು ಮುಂದಿನ 50 ವರ್ಷಗಳ ಕಾಲ ಕಷ್ಟಪಡಲು ಇಷ್ಟಪಡಲಿಲ್ಲ, ಅದಕ್ಕಾಗಿಯೇ ವಿಚ್ಛೇದನ ಪಡೆದೆ. ಇಂದು ನಾನು ಮತ್ತು ನನ್ನ ಮಾಜಿ ಪತಿ ಉತ್ತಮ ಸ್ನೇಹಿತರಾಗಿದ್ದೇವೆ,” ಎಂದು ಹೇಳಿದ್ದಾರೆ.

ವಿಚ್ಛೇದನ ಎನ್ನುವುದು ಕೇವಲ ಅಂತ್ಯವಲ್ಲ, ಅದು ಹೊಸ ಬದುಕಿನ ಆರಂಭ ಎಂದು ಅವರು ವ್ಯಾಖ್ಯಾನಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *