Home ದಾವಣಗೆರೆ ಭದ್ರಾ ಜಲಾಶಯ: ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು ಹರಿಸುವ ಅವಧಿ ವಿಸ್ತರಣೆ 17 ಕ್ಕೆ ಅಂತ್ಯ
ದಾವಣಗೆರೆನವದೆಹಲಿಬೆಂಗಳೂರು

ಭದ್ರಾ ಜಲಾಶಯ: ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು ಹರಿಸುವ ಅವಧಿ ವಿಸ್ತರಣೆ 17 ಕ್ಕೆ ಅಂತ್ಯ

Share
ಭದ್ರಾ ಜಲಾಶಯ
Share

ದಾವಣಗೆರೆ: 2025-26ನೇ ಸಾಲಿನ ಬೇಸಿಗೆ ಹಂಗಾಮಿನ ಬೆಳೆಗಳಿಗಾಗಿ ನೀರಾವರಿ ಸಲಹಾ ಸಮಿತಿಯ ತೀರ್ಮಾನದಂತೆ ಭದ್ರಾ ಜಲಾಶಯದ ಬಲದಂಡೆ ಮತ್ತು ಎಡದಂಡೆ ಕಾಲುವೆಗಳಿಗೆ ನೀರನ್ನು ಹರಿಸಲಾಗುತ್ತಿತ್ತು. ಕಾಲುವೆಗಳ ತುರ್ತು ದುರಸ್ಥಿ ಕಾರ್ಯದಿಂದಾಗಿ ಈ ಹಿಂದೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು.

ಸದರಿ ಕಡಿತಗೊಂಡ ಅವಧಿಯ ಬೆಳೆಗಳಿಗೆ ನೀರನ್ನು ಪೂರೈಸಲು, ಬೇಸಿಗೆ ಬೆಳೆಗಾಗಿ ಮೀಸಲಿಟ್ಟ ನೀರಿನ ಮಿತಿಯೊಳಗೆ ನೀರು ಹರಿಸುವ ಅವಧಿಯನ್ನು ಮೇ 17, 2026ರವರೆಗೆ ವಿಸ್ತರಿಸಲಾಗಿತ್ತು.

ಭದ್ರಾ ಜಲಾಶಯದ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಲ್ಲಿ ಹರಿಸುತ್ತಿರುವ ನೀರನ್ನು ಮೇ 17, 2026ರ ಮಧ್ಯರಾತ್ರಿಯ ನಂತರ ಅಧಿಕೃತವಾಗಿ ನಿಲ್ಲಿಸಲಾಗುವುದು. ಪ್ರಸ್ತುತ ಜಲಾಶಯದಲ್ಲಿ ಕುಡಿಯುವ ನೀರಿನ ಅಗತ್ಯತೆಗಾಗಿ ಮಾತ್ರ ನೀರನ್ನು ಶೇಖರಿಸಿಡಲಾಗಿದ್ದು, ಬೆಳೆಗಳಿಗೆ ಹೆಚ್ಚುವರಿಯಾಗಿ ನೀರನ್ನು ಹರಿಸಲು ಜಲಾಶಯದಲ್ಲಿ ನೀರಿನ ಲಭ್ಯತೆ ಇಲ್ಲದಿರುವುದರಿಂದ ರೈತರು ಈ ವಿಷಯವನ್ನು ಗಮನಿಸಬೇಕೆಂದು ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ಹಾಗೂ ಸದಸ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *