ರಾಜಸ್ಥಾನ: ರಾಜಸ್ಥಾನದ ಸಿಕರ್‌ನಲ್ಲಿ ಹಾಸ್ಟೆಲ್ ಮಾಲೀಕರೊಬ್ಬರು ನೀಡಿದ ಮಾಹಿತಿಯಿಂದಾಗಿ ಭಾರಿ ಚರ್ಚೆಗೆ ಕಾರಣವಾಗಿದ್ದ NEET UG 2026 ಪರೀಕ್ಷೆಯ ಅಕ್ರಮ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪರೀಕ್ಷೆಯನ್ನು ರದ್ದುಗೊಳಿಸಿದ್ದು, ಪ್ರಕರಣದ ತನಿಖೆಯನ್ನು CBIಗೆ ವಹಿಸಿದೆ. ನೀಟ್ ಪೇಪರ್ ಲೀಕ್ ಬಯಲಾಗಿದ್ದು ಹೇಗೆ ಎಂಬುದೇ ಇಂಟ್ರೆಸ್ಟಿಂಗ್.
ಸುದ್ದಿ ಮುಖ್ಯಾಂಶಗಳು
ಅಚಾನಕ್ ಆಗಿ ಸಿಕ್ಕ ಮಾಹಿತಿ: ಕೇರಳದಲ್ಲಿ ಎಂಬಿಬಿಎಸ್ ಓದುತ್ತಿರುವ ಸಿಕರ್ ಮೂಲದ ವಿದ್ಯಾರ್ಥಿಯೊಬ್ಬ ತನ್ನ ತಂದೆಗೆ (ಹಾಸ್ಟೆಲ್ ಮಾಲೀಕ) ಮೇ 2ರಂದು ‘ಗೆಸ್ ಪೇಪರ್’ (Guess Paper) ಒಂದನ್ನು ಕಳುಹಿಸಿದ್ದನು.
ಅಚ್ಚರಿಯ ಸಾಮ್ಯತೆ: ಈ ಪೇಪರ್ ಅನ್ನು ಕೆಮಿಸ್ಟ್ರಿ ಶಿಕ್ಷಕರೊಬ್ಬರು ಪರೀಕ್ಷಿಸಿದಾಗ, ಅದರಲ್ಲಿನ 135 ಪ್ರಶ್ನೆಗಳು ಅಸಲಿ ನೀಟ್ ಪರೀಕ್ಷೆಯ ಪ್ರಶ್ನೆಗಳಿಗೆ ಹೂಬಹೂ ಹೋಲಿಕೆಯಾಗಿದ್ದವು.
ಪೊಲೀಸರ ನಿರ್ಲಕ್ಷ್ಯ: ಆರಂಭದಲ್ಲಿ ಸಿಕರ್ ಪೊಲೀಸರು ಈ ಬಗ್ಗೆ ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದರು. ಆದರೆ ತನಿಖೆ ತೀವ್ರಗೊಂಡಂತೆ ಇದು ಅಂತರರಾಜ್ಯ ಜಾಲ ಎಂಬುದು ದೃಢಪಟ್ಟಿದೆ.
ಮರುಪರೀಕ್ಷೆ: ಮೇ 3ರಂದು ನಡೆದಿದ್ದ ಪರೀಕ್ಷೆಯನ್ನು ಈಗ ರದ್ದುಪಡಿಸಲಾಗಿದ್ದು, ಶೀಘ್ರದಲ್ಲೇ ಹೊಸ ದಿನಾಂಕ ಪ್ರಕಟವಾಗಲಿದೆ.
ವಿದ್ಯಾರ್ಥಿಗಳ ಗಮನಕ್ಕೆ
ಮರು-ನೋಂದಣಿ ಅಗತ್ಯವಿಲ್ಲ: ಈಗಾಗಲೇ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಮತ್ತೆ ನೋಂದಣಿ ಮಾಡುವ ಅಥವಾ ಶುಲ್ಕ ಪಾವತಿಸುವ ಅಗತ್ಯವಿಲ್ಲ.
ಹೊಸ ಪ್ರವೇಶ ಪತ್ರ: ಮುಂದಿನ ದಿನಗಳಲ್ಲಿ NTA ಅಧಿಕೃತವಾಗಿ ಹೊಸ ಪ್ರವೇಶ ಪತ್ರಗಳನ್ನು (Admit Cards) ಬಿಡುಗಡೆ ಮಾಡಲಿದೆ.





Leave a comment