Home ಕ್ರೈಂ ನ್ಯೂಸ್ “ಜನರನ್ನು ದಾರಿ ತಪ್ಪಿಸಬೇಡಿ”: ವಿಜಯ್ ಅವರ ’10 ಲಕ್ಷ ಕೋಟಿ ರೂ. ಸಾಲ’ದ ಆರೋಪಕ್ಕೆ ಎಂ.ಕೆ. ಸ್ಟಾಲಿನ್ ಕೆಂಡಾಮಂಡಲ!
ಕ್ರೈಂ ನ್ಯೂಸ್ಬೆಂಗಳೂರುವಾಣಿಜ್ಯಸಿನಿಮಾ

“ಜನರನ್ನು ದಾರಿ ತಪ್ಪಿಸಬೇಡಿ”: ವಿಜಯ್ ಅವರ ’10 ಲಕ್ಷ ಕೋಟಿ ರೂ. ಸಾಲ’ದ ಆರೋಪಕ್ಕೆ ಎಂ.ಕೆ. ಸ್ಟಾಲಿನ್ ಕೆಂಡಾಮಂಡಲ!

Share
ಎಂ.ಕೆ. ಸ್ಟಾಲಿನ್
Share

ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಸಿ. ಜೋಸೆಫ್ ವಿಜಯ್ ಅವರು, ಹಿಂದಿನ ಡಿಎಂಕೆ ಸರ್ಕಾರವು ರಾಜ್ಯವನ್ನು 10 ಲಕ್ಷ ಕೋಟಿ ರೂಪಾಯಿ ಸಾಲದ ಸುಳಿಯಲ್ಲಿ ಸಿಲುಕಿಸಿದೆ ಎಂದು ಆರೋಪಿಸಿದ್ದರು.

ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಮಾಜಿ ಸಿಎಂ ಎಂ.ಕೆ. ಸ್ಟಾಲಿನ್, ರಾಜ್ಯದ ಸಾಲವು ಅನುಮತಿಸಲಾದ ಮಿತಿಯಲ್ಲಿದೆ ಮತ್ತು ಫೆಬ್ರವರಿ ಬಜೆಟ್‌ನಲ್ಲಿ ಎಲ್ಲವನ್ನೂ ಸ್ಪಷ್ಟಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

“ಸರ್ಕಾರದ ಬಳಿ ಹಣವಿಲ್ಲ ಎಂದು ಹೇಳುವ ಮೂಲಕ ಭರವಸೆಗಳಿಂದ ನುಣುಚಿಕೊಳ್ಳಬೇಡಿ” ಎಂದು ಸ್ಟಾಲಿನ್ ಕಿವಿಮಾತು ಹೇಳಿದ್ದಾರೆ. ಟಿವಿ ಕೆ (TVK) ಪಕ್ಷವು ಕಾಂಗ್ರೆಸ್ ಮತ್ತು ಇತರ ಮೈತ್ರಿಪಕ್ಷಗಳೊಂದಿಗೆ ಸೇರಿ ತಮಿಳುನಾಡಿನಲ್ಲಿ ಹೊಸ ಸರ್ಕಾರ ರಚಿಸಿದೆ.

ಅಧಿಕಾರ ವಹಿಸಿಕೊಂಡ ನಂತರ ಮಾತನಾಡಿದ ಅವರು, ಹಿಂದಿನ ಡಿಎಂಕೆ ಸರ್ಕಾರವು ರಾಜ್ಯವನ್ನು 10 ಲಕ್ಷ ಕೋಟಿ ರೂಪಾಯಿ ಸಾಲದ ಸುಳಿಗೆ ಸಿಲುಕಿಸಿದೆ ಎಂದು ಆರೋಪಿಸಿದರು. ಈ ಬಗ್ಗೆ ಶೀಘ್ರದಲ್ಲೇ ‘ಶ್ವೇತಪತ್ರ’ ಬಿಡುಗಡೆ ಮಾಡುವುದಾಗಿ ಘೋಷಿಸಿದರು. 234 ಸದಸ್ಯರ ಬಲದ ವಿಧಾನಸಭೆಯಲ್ಲಿ 120 ಸದಸ್ಯರ ಬೆಂಬಲದೊಂದಿಗೆ ವಿಜಯ್ ಸರ್ಕಾರ ರಚಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *