ಕೊಲ್ಹಾಪುರ: ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದಿದ್ದ ಸಾಮೂಹಿಕ ಲೈಂಗಿಕ ಶೋಷಣೆ ಪ್ರಕರಣದ ಬೆನ್ನಲ್ಲೇ, ಕೊಲ್ಹಾಪುರದಲ್ಲಿ ಅಂತಹದ್ದೇ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಸಾಮಾಜಿಕ ಜಾಲತಾಣಗಳ ಮೂಲಕ ಯುವತಿಯರನ್ನು ಪರಿಚಯ ಮಾಡಿಕೊಂಡು, ಅವರ ಅಶ್ಲೀಲ ವಿಡಿಯೋಗಳನ್ನು ಚಿತ್ರಿಸಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ 22 ವರ್ಷದ ಫಾರ್ಮಸಿ ವಿದ್ಯಾರ್ಥಿ ಶಾಹಿದ್ ಸಮೀರ್ ಸನಾದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ:
ಕೊಲ್ಹಾಪುರದ ಹಾತಕಣಂಗಲೆ ತಾಲೂಕಿನ ನಿವಾಸಿಯಾದ ಶಾಹಿದ್, ಸೋಶಿಯಲ್ ಮೀಡಿಯಾ ಮೂಲಕ ಯುವತಿಯರೊಂದಿಗೆ ಸ್ನೇಹ ಬೆಳೆಸುತ್ತಿದ್ದನು. ನಂತರ ಅವರನ್ನು ವಿವಿಧ ಲಾಡ್ಜ್ಗಳಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ರಹಸ್ಯವಾಗಿ ವಿಡಿಯೋಗಳನ್ನು ಚಿತ್ರಿಸುತ್ತಿದ್ದನು. ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ಯುವತಿಯರನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಶೋಷಿಸುತ್ತಿದ್ದ ಎನ್ನಲಾಗಿದೆ.
ಒಬ್ಬ ಸಂತ್ರಸ್ತೆ ಧೈರ್ಯ ಮಾಡಿ ಏಪ್ರಿಲ್ 26 ರಂದು ದೂರು ನೀಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಯನ್ನು ಪ್ರಸ್ತುತ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಇವನು ಸುಮಾರು 10ಕ್ಕೂ ಹೆಚ್ಚು ಯುವತಿಯರನ್ನು ಇದೇ ರೀತಿ ಬಲೆಗೆ ಬೀಳಿಸಿರುವ ಸಾಧ್ಯತೆಯಿದೆ ಎಂದು ಹಿಂದೂಪರ ಸಂಘಟನೆಗಳು ಆರೋಪಿಸಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಪೊಲೀಸರ ಮನವಿ:
ಈತನಿಂದ ಶೋಷಣೆಗೊಳಗಾದ ಇತರ ಯುವತಿಯರು ಯಾರಾದರೂ ಇದ್ದರೆ ಧೈರ್ಯವಾಗಿ ಬಂದು ದೂರು ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ದೂರುದಾರರ ಗುರುತನ್ನು ಗೌಪ್ಯವಾಗಿ ಇರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
- Amravati 2.0 case
- digital blackmailing case
- Kolhapur crime news
- Kolhapur police
- Maharashtra sexual exploitation case
- Pharmacy student arrested
- Shahid Sameer Sanadi arrest
- woman safety Maharashtra.
- ಅಶ್ಲೀಲ ವಿಡಿಯೋ ಬ್ಲ್ಯಾಕ್ಮೇಲ್
- ಕೊಲ್ಹಾಪುರ ಅಪರಾಧ ಸುದ್ದಿ
- ಕೊಲ್ಹಾಪುರ ಪೊಲೀಸ್.
- ಮಹಾರಾಷ್ಟ್ರ ಸುದ್ಧಿ
- ಮಹಿಳಾ ಸುರಕ್ಷತೆ
- ಯುವತಿಯರ ಶೋಷಣೆ ಪ್ರಕರಣ
- ಶಾಹಿದ್ ಸಮೀರ್ ಸನಾದಿ ಬಂಧನ





Leave a comment