Home ಕ್ರೈಂ ನ್ಯೂಸ್ ನಾಸಿಕ್ ಟಿಸಿಎಸ್ ಮತಾಂತರ ಪ್ರಕರಣದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್: ಮಲೇಷ್ಯಾ ನಂಟು ಮತ್ತು ಬುರ್ಖಾ ಸ್ಫೋಟಕ ರಹಸ್ಯ ತನಿಖೆಯಲ್ಲಿ ಬಯಲು!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯ

ನಾಸಿಕ್ ಟಿಸಿಎಸ್ ಮತಾಂತರ ಪ್ರಕರಣದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್: ಮಲೇಷ್ಯಾ ನಂಟು ಮತ್ತು ಬುರ್ಖಾ ಸ್ಫೋಟಕ ರಹಸ್ಯ ತನಿಖೆಯಲ್ಲಿ ಬಯಲು!

Share
ನಾಸಿಕ್
Share

ಮುಂಬೈ: ನಾಸಿಕ್ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ನಾಸಿಕ್ ಘಟಕದಲ್ಲಿ ನಡೆದ ಧಾರ್ಮಿಕ ಮತಾಂತರ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಗಳು ಮತ್ತಷ್ಟು ಆಘಾತಕಾರಿ ಅಂಶಗಳನ್ನು ಬಹಿರಂಗಪಡಿಸಿವೆ. ಪ್ರಕರಣದ ಪ್ರಮುಖ ಆರೋಪಿ ನಿದಾ ಖಾನ್, ಸಂತ್ರಸ್ತೆಯನ್ನು ಮತಾಂತರಗೊಳಿಸಲು ವ್ಯವಸ್ಥಿತ ಪಿತೂರಿ ನಡೆಸಿದ್ದಳು ಎಂಬುದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ಸಂತ್ರಸ್ತೆಗೆ ಇಸ್ಲಾಮಿಕ್ ಧಾರ್ಮಿಕ ಪುಸ್ತಕಗಳು ಮತ್ತು ಬುರ್ಖಾವನ್ನು ನೀಡಿದ್ದಲ್ಲದೆ, ಆಕೆಯ ಹೆಸರನ್ನು ‘ಹನಿಯಾ’ ಎಂದು ಬದಲಾಯಿಸಲು ಒತ್ತಾಯಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲದೆ, ಕೆಲಸದ ನೆಪದಲ್ಲಿ ಸಂತ್ರಸ್ತೆಯನ್ನು ಮಲೇಷ್ಯಾಕ್ಕೆ ಕಳುಹಿಸಿ ಅಲ್ಲಿ ಇಮ್ರಾನ್ ಎಂಬುವವನ ಬಳಿ ಕೆಲಸಕ್ಕೆ ಸೇರಿಸುವ ಸಂಚು ಕೂಡ ರೂಪಿಸಲಾಗಿತ್ತು.

ಆರೋಪಿ ನಿದಾ ಖಾನ್ ಈಗಾಗಲೇ ಸಂತ್ರಸ್ತೆಯ ಶೈಕ್ಷಣಿಕ ದಾಖಲೆಗಳನ್ನು ಕಿತ್ತುಕೊಂಡಿದ್ದು, ಆಕೆಯ ಮೊಬೈಲ್‌ನಲ್ಲಿ ಇಸ್ಲಾಮಿಕ್ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್ ಮಾಡಿ ಸತತವಾಗಿ ಧಾರ್ಮಿಕ ಪ್ರಚೋದನೆಯ ಲಿಂಕ್‌ಗಳನ್ನು ಕಳುಹಿಸುತ್ತಿದ್ದಳು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಸಂತ್ರಸ್ತೆ ಪರಿಶಿಷ್ಟ ಜಾತಿಗೆ ಸೇರಿದವರಾಗಿರುವುದರಿಂದ, ಆರೋಪಿ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ತಲೆಮರೆಸಿಕೊಂಡಿರುವ ನಿದಾ ಖಾನ್ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles