ದಾವಣಗೆರೆ: ವಿದ್ಯಾರ್ಥಿಗಳ ಭವಿಷ್ಯದ ಹಾದಿಗೆ ಮಾರ್ಗದರ್ಶಿಯಾದ ‘ದಿ ಹಿಂದೂ ಎಜುಕೇಶನ್ ಪ್ಲಸ್ ಕೆರಿಯರ್ ಕೌನ್ಸೆಲಿಂಗ್ ಫೇರ್’ 24ನೇ ಆವೃತ್ತಿಯು ರಾಜ್ಯಾದ್ಯಂತ ವಿವಿಧೆಡೆ ಆರಂಭವಾಗಲಿದೆ.
ದಾವಣಗೆರೆಯಲ್ಲಿ ಮೊದಲಿಗೆ ಏಪ್ರಿಲ್ 25ರ ಶನಿವಾರ ಬೆಳಗ್ಗೆ 9.30ಕ್ಕೆ ಬಾಪೂಜಿ ಎಂ.ಬಿ.ಎ ಕ್ಯಾಂಪಸ್, ಲೇಕ್ ವ್ಯೂ ಕ್ಯಾಂಪಸ್, ಎಸ್.ಎಸ್ ಲೇಔಟ್, ದೊಡ್ಡಪ್ಪ ಅಪ್ಪ ಸಭಾ ಮಂಟಪ, ಎಸ್.ಬಿ.ಕಾಲೇಜ್ ಕ್ಯಾಂಪಸ್, ದಾವಣಗೆರೆ ಇಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 9ರಿಂದ ವಿದ್ಯಾರ್ಥಿಗಳ ನೋಂದಣಿ ಆರಂಭವಾಗುವುದು ಎಂದು ಕಾರ್ಯಕ್ರಮದ ಸಂಘಟಕರು ತಿಳಿಸಿದ್ದಾರೆ.
ವೈದ್ಯಕೀಯ, ಎಂಜಿನಿಯರಿಂಗ್ ಸಹಿತ ವೃತ್ತಿಪರ ಕೋರ್ಸ್ ಗಳು, ಸಿಇಟಿ, ನೀಟ್, ಸಿಎ, ಸಿಎಸ್ ನಂತಹ ಪ್ರವೇಶ ಪರೀಕ್ಷೆಗಳು, ವಿಜ್ಞಾನ, ಕಲಾ, ಕಾಮರ್ಸ್ ಹಾಗೂ ಕಾನೂನು, ಹೀಗೆ ವಿವಿಧ ಪದವಿ ಮತ್ತಿತರ ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ದಾವಣಗೆರೆ ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಆಗಮಿಸಲಿದ್ದಾರೆ. ಚಾರ್ಟೆಡ್ ಅಕೌಂಟೆಂಟ್ ಕುರಿತು ಮಾತನಾಡಲು ಆದಿತ್ಯ ಬೊಂಡಾಡೆ, ಇಂಜಿನಿಯರಿಂಗ್ ಕುರಿತು ಮಾತನಾಡಲು ಪ್ರೊ. ವೃಷಭೇಂದ್ರಪ್ಪ, ವೈದ್ಯಕೀಯ ಕುರಿತು ಫಿಸಿಯಲೋಜಿ ವಿಭಾಗದ ಪ್ರೊಫೆಸರ್ ಡಾ.ಸೌಮ್ಯ ಬಿ. ಎ. ಮಾತನಾಡಲಿದ್ದಾರೆ. ಸಿಇಟಿ ಕುರಿತು ಮಾತನಾಡಲು ಕೆ.ಇ.ಎ ವತಿಯಿಂದ ನೋಡಲ್ ಆಫೀಸರ್ ರಾಜೇಶ್ ಹಾನಗಲ್ ಹಾಗೂ ಇನ್ನಿತರ ಶಿಕ್ಷಣಗಳ ಕುರಿತು ಮಾಹಿತಿ ನೀಡಲು ಸಿಗ್ಮಾ ಸಂಸ್ಥೆಯ ಸಯ್ಯದ್ ಅಮಿನ್ ಇ ಮುದ್ದಾಸರ್ ಆಗಮಿಸಲಿದ್ದಾರೆ.
ದ್ವಿತೀಯ ಪಿಯುಸಿ ಪಾಸಾದ ಹಾಗು ಓದುತ್ತಿರುವ ಈ ಕೆರಿಯರ್ ಕೌನ್ಸಿಲಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ವಿದ್ಯಾರ್ಥಿಗಳು ಮತ್ತು ಪೋಷಕರು ಹಾಗೂ ಶಿಕ್ಷಣ ಸಂಸ್ಥೆಗಳ ನಡುವೆ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುವ ಈ ಕೆರಿಯರ್ ಕೌನ್ಸೆಲಿಂಗ್ ನ ಸೂಕ್ತ ಮಾರ್ಗದರ್ಶನದಿಂದಾಗಿ ವಿದ್ಯಾರ್ಥಿಗಳು ಶೈಕ್ಷಣಿಕ ಜೀವನದಲ್ಲಿ ಸರಿಯಾದ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಲು ನೆರವಾಗಲಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 9448871815
- Bapuji MBA Campus Davanagere
- Career Counseling Fair 2026
- Career guidance after PUC
- CET NEET CA CS guidance
- Davanagere Education Fair
- Dr. Prabha Mallikarjun MP
- Educational fair Davanagere 2026
- Higher education options in Karnataka
- Student counseling session.
- The Hindu Education Plus
- ಉನ್ನತ ಶಿಕ್ಷಣದ ಹಾದಿ
- ಕೆರಿಯರ್ ಕೌನ್ಸೆಲಿಂಗ್ ಫೇರ್ 2026
- ಡಾ. ಪ್ರಭಾ ಮಲ್ಲಿಕಾರ್ಜುನ್
- ದಾವಣಗೆರೆ
- ದಾವಣಗೆರೆ ಶಿಕ್ಷಣ ಮೇಳ
- ದಿ ಹಿಂದೂ ಎಜುಕೇಶನ್ ಪ್ಲಸ್
- ಪಿಯುಸಿ ನಂತರದ ಶಿಕ್ಷಣ
- ಬಾಪೂಜಿ ಎಂಬಿಎ ಕ್ಯಾಂಪಸ್ ದಾವಣಗೆರೆ
- ವಿದ್ಯಾರ್ಥಿಗಳಿಗೆ ಮಾರ್ಗದರ್ಶನ.
- ವೃತ್ತಿ ಮಾರ್ಗದರ್ಶನ ಶಿಬಿರ
- ಸಿಇಟಿ ನೀಟ್ ಮಾರ್ಗದರ್ಶನ






Leave a comment