Home ಕ್ರೈಂ ನ್ಯೂಸ್ “ಶೇ. 90ರಷ್ಟು ಮಹಿಳೆಯರು ನಾಯಕರ ಕೋಣೆಗೆ ಹೋಗದೆ ರಾಜಕೀಯ ಮಾಡಲು ಸಾಧ್ಯವಿಲ್ಲ”: ತೀವ್ರ ಆಕ್ರೋಶದ ಬೆನ್ನಲ್ಲೇ ಸಂಸದ ಪಪ್ಪು ಯಾದವ್ ಕ್ಷಮೆ!
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

“ಶೇ. 90ರಷ್ಟು ಮಹಿಳೆಯರು ನಾಯಕರ ಕೋಣೆಗೆ ಹೋಗದೆ ರಾಜಕೀಯ ಮಾಡಲು ಸಾಧ್ಯವಿಲ್ಲ”: ತೀವ್ರ ಆಕ್ರೋಶದ ಬೆನ್ನಲ್ಲೇ ಸಂಸದ ಪಪ್ಪು ಯಾದವ್ ಕ್ಷಮೆ!

Share
ಪಪ್ಪು ಯಾದವ್
Share

ಬಿಹಾರ: ಪೂರ್ಣಿಯಾ ಲೋಕಸಭಾ ಕ್ಷೇತ್ರದ ಪಕ್ಷೇತರ ಸಂಸದ ಪಪ್ಪು ಯಾದವ್ ರಾಜಕಾರಣದಲ್ಲಿರುವ ಮಹಿಳೆಯರ ಬಗ್ಗೆ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಕ್ಷಮೆಯಾಚಿಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, “ಶೇ. 90ರಷ್ಟು ಮಹಿಳೆಯರು ನಾಯಕರ ಕೋಣೆಗೆ ಹೋಗದೆ ರಾಜಕೀಯ ಮಾಡಲು ಸಾಧ್ಯವಿಲ್ಲ” ಎಂದು ಹೇಳಿದ್ದರು. ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎನ್‌ಡಿಎ ನಾಯಕರು ಮತ್ತು ಬಿಹಾರ ರಾಜ್ಯ ಮಹಿಳಾ ಆಯೋಗ ತೀವ್ರ ಖಂಡನೆ ವ್ಯಕ್ತಪಡಿಸಿದ್ದವು. ರಾಜ್ಯದ ಹಲವೆಡೆ ಅವರ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು.

ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ಪಪ್ಪು ಯಾದವ್, “ನನ್ನ ಹೇಳಿಕೆಯಿಂದ ಮಹಿಳೆಯರಿಗೆ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ. ಆದರೆ ಈ ಕ್ಷಮೆಯು ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಮಾತ್ರವೇ ಹೊರತು ರಾಜಕಾರಣಿಗಳಿಗಲ್ಲ” ಎಂದು ಹೇಳಿದ್ದಾರೆ. ಅಲ್ಲದೆ, ರಾಜಕೀಯದಲ್ಲಿ ಮಹಿಳೆಯರ ಮೇಲಾಗುವ ಶೋಷಣೆಯ ವಿರುದ್ಧವೇ ನನ್ನ ಹೋರಾಟ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *