Home ದಾವಣಗೆರೆ ಕರ್ನಾಟಕ ಅಬಕಾರಿ ನೀತಿ ಓವರ್‌ಹಾಲ್: ಮದ್ಯದ ದರ ಏರಿಕೆ ಫಿಕ್ಸ್; ಬಾಟಲಿಗಳ ಮೇಲೆ ಪದಾರ್ಥಗಳ ವಿವರಕ್ಕೆ ಕೊಕ್!
ದಾವಣಗೆರೆಬೆಂಗಳೂರುವಾಣಿಜ್ಯ

ಕರ್ನಾಟಕ ಅಬಕಾರಿ ನೀತಿ ಓವರ್‌ಹಾಲ್: ಮದ್ಯದ ದರ ಏರಿಕೆ ಫಿಕ್ಸ್; ಬಾಟಲಿಗಳ ಮೇಲೆ ಪದಾರ್ಥಗಳ ವಿವರಕ್ಕೆ ಕೊಕ್!

Share
ಅಬಕಾರಿ
Share

ಬೆಂಗಳೂರು: ಕರ್ನಾಟಕದ ಸಿದ್ದರಾಮಯ್ಯ ಸರ್ಕಾರವು ರಾಜ್ಯದ ಅಬಕಾರಿ ನೀತಿಯಲ್ಲಿ ಸಮಗ್ರ ಬದಲಾವಣೆ ತರಲು ಮುಂದಾಗಿದ್ದು, ಇದರಿಂದಾಗಿ ಮದ್ಯದ ಬೆಲೆ ಏರಿಕೆಯಾಗುವ ಮುನ್ಸೂಚನೆ ಸಿಕ್ಕಿದೆ. ಅಬಕಾರಿ, ಬ್ರೂವರಿ ಮತ್ತು ಬಾಟ್ಲಿಂಗ್ ನಿಯಮಗಳಿಗೆ ತಿದ್ದುಪಡಿ ತರಲು ಕರಡು ಅಧಿಸೂಚನೆ ಹೊರಡಿಸಲಾಗಿದ್ದು, ಹಲವು ಹೊಸ ನಿಯಮಗಳನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ.

ಪದಾರ್ಥಗಳ ಮಾಹಿತಿ ಇರುವುದಿಲ್ಲ:

ಬ್ರೂವರಿ ನಿಯಮಗಳು-1967ಕ್ಕೆ ತಿದ್ದುಪಡಿ ತರಲು ಉದ್ದೇಶಿಸಲಾಗಿದ್ದು, ಇದರ ಪ್ರಕಾರ ಮದ್ಯದ ಬಾಟಲಿ ಅಥವಾ ಕ್ಯಾನ್‌ಗಳ ಮೇಲೆ ಅದರಲ್ಲಿ ಬಳಕೆಯಾದ ಪದಾರ್ಥಗಳ (Ingredients) ವಿವರ, ಅದರಲ್ಲೂ ಪ್ರಮುಖವಾಗಿ ಸಕ್ಕರೆಯ ಅಂಶದ ಮಾಹಿತಿಯನ್ನು ನಮೂದಿಸುವುದನ್ನು ಕಡ್ಡಾಯದಿಂದ ಕೈಬಿಡಲು ನಿರ್ಧರಿಸಲಾಗಿದೆ. ಇದು ಗ್ರಾಹಕರ ಹಿತದೃಷ್ಟಿಯಿಂದ ಆತಂಕಕ್ಕೆ ಕಾರಣವಾಗಿದ್ದರೂ, ಉದ್ಯಮಿಗಳಿಗೆ ವ್ಯಾಪಾರ ಸುಲಭಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಬೆಲೆ ಏರಿಕೆ ಏಕೆ?:

ಹೊಸ ನೀತಿಯಲ್ಲಿ ‘ಆಲ್ಕೋಹಾಲ್-ಇನ್-ಬೆವರೇಜ್’ (AIB) ಎಂಬ ಹೊಸ ತೆರಿಗೆ ಪದ್ಧತಿಯನ್ನು ಪರಿಚಯಿಸಲಾಗುತ್ತಿದೆ. ಪ್ರತಿ ಲೀಟರ್ ಶುದ್ಧ ಆಲ್ಕೋಹಾಲ್‌ಗೆ 1,000 ರೂ.ಗಳ ಅಬಕಾರಿ ಸುಂಕ ವಿಧಿಸಲು ಪ್ರಸ್ತಾಪಿಸಲಾಗಿದೆ.

ಬಿಯರ್ ಮೇಲೆ ಅದರ ಆಲ್ಕೋಹಾಲ್ ಪ್ರಮಾಣಕ್ಕೆ ಅನುಗುಣವಾಗಿ (ಶೇ. 5ರವರೆಗೆ 12 ರೂ. ಹಾಗೂ ಶೇ. 5-8ರವರೆಗೆ 20 ರೂ. ಪ್ರತಿ ಲೀಟರ್‌ಗೆ) ತೆರಿಗೆ ವಿಧಿಸಲಾಗುತ್ತದೆ. ಇದರಿಂದ ಪ್ರೀಮಿಯಂ ಮದ್ಯ ಹಾಗೂ ಬಿಯರ್ ಬೆಲೆಗಳಲ್ಲಿ ಏರಿಕೆಯಾಗಲಿದೆ.

Share

Leave a comment

Leave a Reply

Your email address will not be published. Required fields are marked *