SUDDIKSHANA KANNADA NEWS/ DAVANAGERE/ DATE:26-10-2024
ಹೈದರಾಬಾದ್: ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ 23 ವರ್ಷದ ಯುವಕ ಮಲಗಿದ್ದಾಗ ತನ್ನ ಮೊಬೈಲ್ ಫೋನ್ ಚಾರ್ಜ್ ಮಾಡಲು ಹಾಸಿಗೆಯ ಬಳಿ ಇರಿಸಲಾದ ಲೈವ್ ವೈರ್ ಸಂಪರ್ಕಕ್ಕೆ ಬಂದ ನಂತರ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ.
ಪೊಲೀಸರ ಪ್ರಕಾರ, ಶುಕ್ರವಾರ, ಅಕ್ಟೋಬರ್ 25 ರಂದು ಈ ಘಟನೆ ಸಂಭವಿಸಿದೆ, ಮಾಲೋತ್ ಅನಿಲ್ ತನ್ನ ಮೊಬೈಲ್ ಫೋನ್ ಅನ್ನು ಚಾರ್ಜ್ ಮಾಡಲು ತನ್ನ ಹಾಸಿಗೆಯ ಬಳಿ ಲೈವ್ ವೈರ್ ಅನ್ನು ವಿಸ್ತರಿಸಿ ನಂತರ ಮಲಗಲು ಹೋಗಿದ್ದ.
ನಿದ್ದೆಯಲ್ಲಿದ್ದಾಗ ತಂತಿ ಸ್ಪರ್ಶಿಸಿ ತೀವ್ರ ಅಸ್ವಸ್ಥರಾಗಿದ್ದು, ಕೂಡಲೇ ಹತ್ತಿರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ನಂತರ ಸ್ಥಿತಿ ಗಂಭೀರವಾದ ಕಾರಣ ಬೇರೆ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದ ಅನಿಲ್ ಪತ್ನಿ ಹಾಗೂ ಒಂದೂವರೆ ವರ್ಷದ ಮಗಳನ್ನು ಅಗಲಿದ್ದಾರೆ. ಈ ಕುರಿತು ತನಿಖೆ ಆರಂಭಿಸಲಾಗಿದೆ.
ಇದಕ್ಕೂ ಮೊದಲು, ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ಭಾನುವಾರ 40 ವರ್ಷದ ವ್ಯಕ್ತಿಯೊಬ್ಬರು ತಮ್ಮ ಸಾಕು ನಾಯಿಗೆ ಸ್ನಾನ ಮಾಡಲು ನೀರು ಕಾಯಿಸುವಾಗ ಆಕಸ್ಮಿಕವಾಗಿ ಎಲೆಕ್ಟ್ರಿಕ್ ಹೀಟರ್ನ ರಾಡ್ ಅನ್ನು ತೋಳಿನ ಕೆಳಗೆ ಇಟ್ಟು ವಿದ್ಯುತ್ ಸ್ಪರ್ಶಿಸಿ ಕೊನೆಯುಸಿರೆಳೆದಿದ್ದರು.
ಇದೇ ಸಂದರ್ಭದಲ್ಲಿ ಮತ್ತೊಬ್ಬ ವ್ಯಕ್ತಿ ಮನೆಯಲ್ಲಿ ಮೊಬೈಲ್ ಚಾರ್ಜ್ ಮಾಡುವಾಗ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾನೆ. ಜಿ ನರೇಶ್ ಎಂಬಾತ ಫೋನ್ ಚಾರ್ಜ್ ಮಾಡುತ್ತಿರುವಾಗ ಅದನ್ನು ಹಿಡಿದಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ