ನವದೆಹಲಿ: ಕೇಂದ್ರ ಸರ್ಕಾರ ಏಪ್ರಿಲ್ 16 ರಿಂದ 18 ರವರೆಗೆ ಕರೆದಿರುವ ಸಂಸತ್ತಿನ ವಿಶೇಷ ಅಧಿವೇಶನದ ಹಿಂದೆ ಮಹಿಳಾ ಮೀಸಲಾತಿಗಿಂತ ಹೆಚ್ಚಾಗಿ ‘ಕ್ಷೇತ್ರ ಮರುವಿಂಗಡಣೆ’ (Delimitation) ಅಡಗಿದೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆರೋಪಿಸಿದ್ದಾರೆ.
ಪತ್ರಿಕೆಯೊಂದರಲ್ಲಿ ಲೇಖನ ಬರೆದಿರುವ ಅವರು, ಸರ್ಕಾರದ ಈ ಕ್ರಮವು ಸಂವಿಧಾನದ ಮೇಲಿನ ದಾಳಿಯಾಗಿದ್ದು, ಜನಸಂಖ್ಯೆಯನ್ನು ನಿಯಂತ್ರಿಸಿದ ರಾಜ್ಯಗಳಿಗೆ ಇದು ಅನ್ಯಾಯವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಜಾತಿ ಗಣತಿಯನ್ನು ವಿಳಂಬಗೊಳಿಸಲು ಪ್ರಧಾನಿ ಮೋದಿ ಈ ತಂತ್ರ ಹೂಡಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ಮುಖ್ಯಾಂಶಗಳು:
ಏಪ್ರಿಲ್ 16-18ರ ವಿಶೇಷ ಅಧಿವೇಶನದ ಅಜೆಂಡಾ ಬಗ್ಗೆ ಸೋನಿಯಾ ಗಾಂಧಿ ಪ್ರಶ್ನೆ.
ಕ್ಷೇತ್ರ ಮರುವಿಂಗಡಣೆ ಪ್ರಸ್ತಾವನೆ ಸಂವಿಧಾನಕ್ಕೆ ಮಾರಕ ಎಂದ ಕಾಂಗ್ರೆಸ್ ನಾಯಕಿ.
2029ರ ಚುನಾವಣಾ ದೃಷ್ಟಿಯಿಂದ ಸರ್ಕಾರದಿಂದ ತರಾತುರಿ ನಿರ್ಧಾರದ ಆರೋಪ.
ಹೊಸ ದೆಹಲಿ: ಕೇಂದ್ರ ಸರ್ಕಾರವು ಈ ವಾರ ಕರೆದಿರುವ ಸಂಸತ್ತಿನ ವಿಶೇಷ ಅಧಿವೇಶನವು ಕೇವಲ ಮಹಿಳಾ ಮೀಸಲಾತಿ ಜಾರಿಗಾಗಿ ಅಲ್ಲ, ಅದರ ಹಿಂದೆ ಕ್ಷೇತ್ರ ಮರುವಿಂಗಡಣೆಯ ಅಪಾಯಕಾರಿ ರಾಜಕಾರಣ ಅಡಗಿದೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
‘ದಿ ಹಿಂದೂ’ ಪತ್ರಿಕೆಯಲ್ಲಿ ಪ್ರಕಟವಾದ ತಮ್ಮ ಲೇಖನದಲ್ಲಿ, ಕ್ಷೇತ್ರ ಮರುವಿಂಗಡಣೆಯು ರಾಜಕೀಯ ಪ್ರಾತಿನಿಧ್ಯವನ್ನು ಅಸ್ಥಿರಗೊಳಿಸಬಹುದು ಎಂದು ಅವರು ಎಚ್ಚರಿಸಿದ್ದಾರೆ. ಮಹಿಳಾ ಮೀಸಲಾತಿಯನ್ನು 2011ರ ಜನಗಣತಿಯ ಆಧಾರದ ಮೇಲೆ ಜಾರಿಗೆ ತರಲು ಸರ್ಕಾರ ಮುಂದಾಗಿರುವುದು ಕೇವಲ ಚುನಾವಣಾ ಗಿಮಿಕ್ ಆಗಿದೆ. ಇದು ರಾಜ್ಯಗಳ ನಡುವಿನ ರಾಜಕೀಯ ಸಮಾನತೆಯನ್ನು ಕುಂದಿಸುವ ಪ್ರಯತ್ನ ಎಂದು ಅವರು ಬಣ್ಣಿಸಿದ್ದಾರೆ.
ಇದರೊಂದಿಗೆ ಓಬಿಸಿ (OBC) ಮಹಿಳೆಯರಿಗೂ ಮೀಸಲಾತಿಯಲ್ಲಿ ಪಾಲು ನೀಡಬೇಕು ಎಂಬ ವಿಪಕ್ಷಗಳ ಬೇಡಿಕೆಯನ್ನು ಅವರು ಪುನರುಚ್ಚರಿಸಿದ್ದಾರೆ.





Leave a comment