Home ದಾವಣಗೆರೆ ಶಿವಶಂಕರಪ್ಪಾಜಿ ಹಾದಿಯಲ್ಲಿ ಸಮರ್ಥ್ ಹೆಜ್ಜೆ: ಗ್ರಾ. ಪಂ. ಮುಖಂಡರ ಸಭೆಯಲ್ಲಿ “ಕೈ” ಅಭ್ಯರ್ಥಿ ಗೆಲ್ಲಿಸುವಂತೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಕರೆ
ದಾವಣಗೆರೆಬೆಂಗಳೂರು

ಶಿವಶಂಕರಪ್ಪಾಜಿ ಹಾದಿಯಲ್ಲಿ ಸಮರ್ಥ್ ಹೆಜ್ಜೆ: ಗ್ರಾ. ಪಂ. ಮುಖಂಡರ ಸಭೆಯಲ್ಲಿ “ಕೈ” ಅಭ್ಯರ್ಥಿ ಗೆಲ್ಲಿಸುವಂತೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಕರೆ

Share
ಡಾ. ಪ್ರಭಾ ಮಲ್ಲಿಕಾರ್ಜುನ್
Share

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ‌ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯತಿ ಮಟ್ಟದ ಜನರೊಂದಿಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ನಗರದ ಕಲ್ಲೇಶ್ವರ ಮಿಲ್ ಆವರಣದಲ್ಲಿ ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಲಿಂಗೈಕ್ಯ ಡಾ. ಶಾಮನೂರು ಶಿವಶಂಕರಪ್ಪಾಜಿಯವರು ಶಾಸಕರಾಗಿ ಗ್ರಾಮೀಣಭಾಗದಲ್ಲಿ ಸಲ್ಲಿಸಿದ ಸೇವೆಯನ್ನು ಮುಖಂಡರು ಸ್ಮರಿಸಿದರು.

ಎಸ್ ಎಸ್ ಅವರು ದಕ್ಷಿಣ ಭಾಗದಲ್ಲಿ ಸಿಸಿ ರಸ್ತೆಗಳು, ಕಾಲುವೆಗಳ ನಿರ್ಮಾಣ, ಹೈಮಾಸ್ಟ್ ದೀಪಗಳು, ದೇವಸ್ಥಾನ ನಿರ್ಮಾಣಕ್ಕೆ ಅನುದಾನ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಅವರ ಹಾದಿಯಲ್ಲಿ ಸಮರ್ಥ್ ಕೂಡ ನಡೆಯಲಿದ್ದಾರೆ. ಆದ್ದರಿಂದ ಕಾಂಗ್ರೆಸ್ ಪಕ್ಷ ಬೆಂಬಲಿಸಬೇಕೆಂದು ಮನವಿ ಮಾಡಿದರು.

ಈ ವೇಳೆ ಮುಖಂಡರಾದ ಜಿ. ಸಿ ನಿಂಗಪ್ಪ, ತುರ್ಚಘಟ್ಟದ ಬಸವರಾಜಪ್ಪ, ಹದಡಿ ಹಾಲಪ್ಪ, ತೆಂಗಿನಮರದ ಬಸವರಾಜಪ್ಪ, ಪೂರ್ಣಿಮಾ, ಚಂದ್ರಪ್ಪ ಹಾಗೂ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *