ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾವು ರಂಗೇರತೊಡಗಿದೆ. ಮುಸ್ಲಿಂ ಸಮುದಾಯದ ತಮಗೆ ಟಿಕೆಟ್ ಬೇಕೆಂದು ಪಟ್ಟು ಹಿಡಿದಿದ್ದರೆ, ತನ್ನ ಪುತ್ರ ಸಮರ್ಥ್ ಶಾಮನೂರು ಟಿಕೆಟ್ ಪಡೆಯಲು ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಪ್ರಯತ್ನ ಮುಂದುವರಿಸಿದ್ದಾರೆ. ಈ ಬೆಳವಣಿಗೆ ನಡುವೆ ವಸತಿ ಸಚಿವ ಜಮೀರ್ ಅಹ್ಮದ್ ವಿರುದ್ಧ ನೇರಾ ನೇರಾ ವಾಗ್ದಾಳಿ ನಡೆಸಿರುವ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಎಚ್ಚರಿಕೆಯನ್ನೂ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ನಮ್ಮದು. ಅವನ್ಯಾರು ಮಾತನಾಡಲು. ಇವೆಲ್ಲಾ ಸರಿಯಿರಲ್ಲ. ಸಭೆ ಕರೆದಾಗ ಮಾತನಾಡುತ್ತೇವೆ. ಸುಮ್ಮನಿದ್ದರೆ ಒಳಿತು ಎಂದು ಖಾರವಾಗಿಯೇ ವಾರ್ನಿಂಗ್ ಕೊಟ್ಟಿದ್ದಾರೆ.
ಶಾಮನೂರು ಶಿವಶಂಕರಪ್ಪರ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡಿಸಲು ಜಮೀರ್ ಅಹ್ಮದ್ ಅವರು ಸಿಎಂ ಸಿದ್ದರಾಮಯ್ಯ ಮತ್ತು ಹೈಕಮಾಂಡ್ ಮಟ್ಟದಲ್ಲಿ ಲಾಭಿ ಶುರುವಿಟ್ಟುಕೊಂಡಿದ್ದಾರೆ. ಈ ನಡುವೆ ಎಸ್. ಎಸ್. ಮಲ್ಲಿಕಾರ್ಜುನ್ ಅವರಂತೂ ನೇರ ನೇರ ಎಚ್ಚರಿಕೆ ಕೊಟ್ಟಿದ್ದು, ತೆಪ್ಪಗಿದ್ದರೆ ಒಳ್ಳೆಯದು ಎಂಬರ್ಥದಲ್ಲಿ ಹೇಳಿದ್ದಾರೆ.
ಉಪಚುನಾವಣೆಗೆ ಎಲ್ಲರೂ ಟಿಕೆಟ್ ಕೇಳುತ್ತಾರೆ. ಎಲ್ಲರಿಗೂ ನಿಲ್ಲಬೇಕೆಂಬ ಆಸೆ ಇರುತ್ತದೆ. ಎಲ್ಲರೂ ಕುಳಿತು ಅಭಿಪ್ರಾಯ ಸಂಗ್ರಹಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ. ನಮಗೆ ಸಮರ್ಥ ಅಭ್ಯರ್ಥಿ ಬೇಕು ಎಂಬುದಷ್ಟೇ ನಮ್ಮ ಅಪೇಕ್ಷೆ. ಸೂಕ್ತ ಅಭ್ಯರ್ಥಿ ನಿಲ್ಲಿಸಿ ಗೆಲ್ಲಿಸಬೇಕೆಂಬ ನಿರ್ಧಾರ ನಮ್ಮದು ಎಂದು ಎಸ್. ಎಸ್. ಮಲ್ಲಿಕಾರ್ಜುನ್ ಹೇಳಿದರು.
- Congress Internal Fight
- Davanagere News today.
- Davanagere Politics News
- Davanagere South Bypoll
- Karnataka Bypolls 2026
- Minority Ticket Lobby
- Samarth Shamanur Ticket
- Shamanur Shivashankarappa Demise
- Siddaramaiah High Command
- SS Mallikarjun vs Zameer Ahmed
- ಅಲ್ಪಸಂಖ್ಯಾತ ಟಿಕೆಟ್ ಲಾಬಿ
- ಎಸ್. ಎಸ್. ಮಲ್ಲಿಕಾರ್ಜುನ್
- ಕರ್ನಾಟಕ ಉಪಚುನಾವಣೆ 2026
- ಕಾಂಗ್ರೆಸ್ ಟಿಕೆಟ್ ಫೈಟ್
- ಜಮೀರ್ ಅಹ್ಮದ್ ಖಾನ್
- ದಾವಣಗೆರೆ ದಕ್ಷಿಣ ಉಪಚುನಾವಣೆ
- ದಾವಣಗೆರೆ ರಾಜಕೀಯ ಸುದ್ದಿ
- ಶಾಮನೂರು ಶಿವಶಂಕರಪ್ಪ
- ಸಮರ್ಥ್ ಶಾಮನೂರು
- ಸಿದ್ದರಾಮಯ್ಯ ಹೈಕಮಾಂಡ್




Leave a comment