Home ಉದ್ಯೋಗ ವಾರ್ತೆ HPCL ನೇಮಕಾತಿ 2026: 731 ಜೂನಿಯರ್ ಎಕ್ಸಿಕ್ಯೂಟಿವ್, ಎಂಜಿನಿಯರ್ ಮತ್ತು ಇತರ ಹುದ್ದೆಗಳಿಗೆ ಅರ್ಜಿ ಆಹ್ವಾನ – ಇಂದೇ ಅಪ್ಲೈ ಮಾಡಿ!
ಉದ್ಯೋಗ ವಾರ್ತೆದಾವಣಗೆರೆನವದೆಹಲಿಬೆಂಗಳೂರು

HPCL ನೇಮಕಾತಿ 2026: 731 ಜೂನಿಯರ್ ಎಕ್ಸಿಕ್ಯೂಟಿವ್, ಎಂಜಿನಿಯರ್ ಮತ್ತು ಇತರ ಹುದ್ದೆಗಳಿಗೆ ಅರ್ಜಿ ಆಹ್ವಾನ – ಇಂದೇ ಅಪ್ಲೈ ಮಾಡಿ!

Share
hpcl
Share

ಕೇಂದ್ರ ಸರ್ಕಾರದ ಅಧೀನದಲ್ಲಿರುವ ಮಹಾರತ್ನ ಸಂಸ್ಥೆಯಾದ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) 2026ನೇ ಸಾಲಿನ ಬೃಹತ್ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಒಟ್ಟು 731 ಅಧಿಕಾರಿ ಮಟ್ಟದ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈ ನೇಮಕಾತಿಯಲ್ಲಿ ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಸಿವಿಲ್ ಮತ್ತು ಕೆಮಿಕಲ್ ಎಂಜಿನಿಯರ್‌ಗಳು ಸೇರಿದಂತೆ ಫೈನಾನ್ಸ್, ಎಚ್‌ಆರ್ (HR), ಮತ್ತು ಮಾಹಿತಿ ವ್ಯವಸ್ಥೆ (IS) ವಿಭಾಗದ ಹುದ್ದೆಗಳು ಲಭ್ಯವಿವೆ.

ಪ್ರಮುಖ ವಿವರಗಳು:

ಒಟ್ಟು ಹುದ್ದೆಗಳು: 731

ವೇತನ ಶ್ರೇಣಿ:

₹30,000 ರಿಂದ ₹2,80,000 ವರೆಗೆ (ಹುದ್ದೆಗೆ ಅನುಗುಣವಾಗಿ).

ವಯೋಮಿತಿ:

ಕನಿಷ್ಠ 25 ರಿಂದ ಗರಿಷ್ಠ 45 ವರ್ಷಗಳು (ಮೀಸಲಾತಿ ಅನ್ವಯ ಸಡಿಲಿಕೆ ಇರುತ್ತದೆ).

ಆಯ್ಕೆ ಪ್ರಕ್ರಿಯೆ:

ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT), ಗುಂಪು ಚರ್ಚೆ ಮತ್ತು ವೈಯಕ್ತಿಕ ಸಂದರ್ಶನ.

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ: 25 ಫೆಬ್ರವರಿ 2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25 ಮಾರ್ಚ್ 2026

ಪರೀಕ್ಷೆಯ ತಾತ್ಕಾಲಿಕ ದಿನಾಂಕ: 03 ಮೇ 2026

ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್‌ಲೈನ್ ಅರ್ಜಿ ಸಲ್ಲಿಕೆಗಾಗಿ HPCL ಅಧಿಕೃತ ವೆಬ್‌ಸೈಟ್ www.hindustanpetroleum.com ಗೆ ಭೇಟಿ ನೀಡಬಹುದು.

Share

Leave a comment

Leave a Reply

Your email address will not be published. Required fields are marked *