ಮಧ್ಯಪ್ರದೇಶ: ಇಲ್ಲಿ ರೇವಾ (Rewa) ಪೊಲೀಸ್ ತರಬೇತಿ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದ ಆರು ಮಂದಿ ಕಾನ್ಸ್ಟೆಬಲ್ಗಳು ಪೊಲೀಸ್ ಸಮವಸ್ತ್ರ ಧರಿಸಿ ವಿಡಿಯೋ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋದಲ್ಲಿ ಅವರು ಸರ್ಕಾರಿ ಕೆಲಸ ಮತ್ತು ಸಮವಸ್ತ್ರದ ಬಗ್ಗೆ ವಿವಾದಾತ್ಮಕ ಸಂಭಾಷಣೆ ಬಳಸಿದ್ದು, ಇದು ಇಲಾಖೆಯ ಘನತೆಗೆ ಧಕ್ಕೆ ತಂದಿದೆ ಎಂದು ಹಿರಿಯ ಅಧಿಕಾರಿಗಳು ಕಿಡಿಕಾರಿದ್ದಾರೆ.
ಏನಿದು ಘಟನೆ?
“ನಾನು ನೋಡಲು ಚೆನ್ನಾಗಿಲ್ಲದಿದ್ದರೆ ಏನಂತೆ? ನನಗೆ ಸರ್ಕಾರಿ ಕೆಲಸವಿದೆ. ಹಣವಿಲ್ಲದಿದ್ದರೆ ಏನಂತೆ? ತಿಂಗಳ ಸಂಬಳ ಬರುತ್ತದೆ. ಬಟ್ಟೆ ಇಲ್ಲದಿದ್ದರೆ ಏನಂತೆ? ಮೈಮೇಲೆ ಸಮವಸ್ತ್ರವಿದೆ” ಎಂಬ ಅರ್ಥದ
ಸಂಭಾಷಣೆಗೆ ಈ ಆರು ಮಂದಿ ವಿಡಿಯೋ ಮಾಡಿದ್ದರು.
ಇದನ್ನು ಫೆಬ್ರವರಿ 25 ರಂದು ‘ಮತಿಯಾಮೆಟ್ ಗ್ರೂಪ್’ (Matiyamet Group) ಎಂಬ ಹೆಸರಿನಲ್ಲಿ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿತ್ತು.
ಶಿಸ್ತು ಕ್ರಮ:
ಪೊಲೀಸ್ ಪ್ರಧಾನ ಕಚೇರಿಯ ಕಟ್ಟುನಿಟ್ಟಿನ ಆದೇಶವಿದ್ದರೂ, ನಿಯಮ ಉಲ್ಲಂಘಿಸಿ ರೀಲ್ಸ್ ಮಾಡಿದ ಅನಿಲ್, ಆನಂದ್, ಪ್ರದೀಪ್ ಯಾದವ್, ರಾಜ್ಕುಮಾರ್, ಗೋನು ಮತ್ತು ಸುರ್ಜೀತ್ ಎಂಬುವವರಿಗೆ ರೇವಾ ಪಿಟಿಎಸ್ ಅಧೀಕ್ಷಕ ಸುರೇಂದ್ರ ಕುಮಾರ್ ಜೈನ್ ಅವರು ಕಾರಣ ಕೇಳಿ ನೋಟಿಸ್ (Show-cause notice) ಜಾರಿ ಮಾಡಿದ್ದಾರೆ. ಸಮರ್ಪಕ ಉತ್ತರ ನೀಡದಿದ್ದರೆ ಕಠಿಣ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ.





Leave a comment