Home ದಾವಣಗೆರೆ ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಕಾರಣ ನರೇಂದ್ರ ಮೋದಿಯೇ ಹೊರತು ರಾಜ್ಯ ಸರ್ಕಾರವಲ್ಲ: ಸಿಎಂ ಸಿದ್ದರಾಮಯ್ಯ ಆರೋಪ
ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯ

ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಕಾರಣ ನರೇಂದ್ರ ಮೋದಿಯೇ ಹೊರತು ರಾಜ್ಯ ಸರ್ಕಾರವಲ್ಲ: ಸಿಎಂ ಸಿದ್ದರಾಮಯ್ಯ ಆರೋಪ

Share
ಸಿದ್ದರಾಮಯ್ಯ
Share

SUDDIKSHANA KANNADA NEWS/DAVANAGERE/DATE:19_12_2025

ಬೆಳಗಾವಿ: ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ಹೇಳಿ ರಾಜ್ಯ ಸರ್ಕಾರ ಕೈ ಕಟ್ಟಿ ಕೂರಲಿಲ್ಲ. ಸ್ವತಃ ನಾನೆ ನಮ್ಮ ಸಚಿವರು, ಅಧಿಕಾರಿಗಳ ಜೊತೆ ಸೇರಿ ಹಲವು ಸಭೆಗಳನ್ನು ಮಾಡಿದೆವು. ಸಕ್ಕರೆ ಕಾರ್ಖಾನೆಗಳ ಮಾಲೀಕರ ಜೊತೆ ಒಂದಿಡೀ ದಿನ ಸಭೆ ನಡೆಸಿದೆವು. ಕೇಂದ್ರ ಸರ್ಕಾರಕ್ಕೆ ಪತ್ರಗಳನ್ನು ಬರೆದು ಸ್ವತಃ ದೆಹಲಿಗೆ ಹೋಗಿ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆವು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಅವರು, ರಾಜ್ಯದ ಕಬ್ಬು ಬೆಳೆಗಾರರ ಸಮಸ್ಯೆ ಮತ್ತು ಸಂಕಷ್ಟಕ್ಕೆ ಪ್ರಧಾನಿ ನರೇಂದ್ರ ಮೋದಿಯೇ ಕಾರಣ ಎಂದು ಆರೋಪಿಸಿದರು.

ಸಿಎಂ ಸಿದ್ದರಾಮಯ್ಯ ಕೇಂದ್ರದ ಮೇಲೆ ಮಾಡಿದ ಆರೋಪಗಳೇನು? 

​ಎಫ್.ಆರ್.ಪಿ ಕಡಿಮೆ ನಿಗದಿಪಡಿಸಿದ ಕೇಂದ್ರ ಸರ್ಕಾರ ತಾನೆ ?

•​ಸಕ್ಕರೆ ಬೆಲೆ ಪರಿಷ್ಕರಣೆ ಮಾಡದ ಕೇಂದ್ರ ಸರ್ಕಾರ ತಾನೆ ?

•​ಸಕ್ಕರೆ ರಫ್ತನ್ನು ನಿರ್ಬಂಧಿಸಿದರುವ ಮೋದಿ ಸರ್ಕಾರ ತಾನೆ ?

•​ಎಥನಾಲ್ ಬೆಲೆ ಕಡಿಮೆ ನಿಗದಿಪಡಿಸಿರುವ ಮೋದಿ ಸರ್ಕಾರ ತಾನೆ ?

ಕೇಂದ್ರ ಸರ್ಕಾರವು ಶೇ. 10.25 ರಷ್ಟು ರಿಕವರಿ ಇದ್ದರೆ ರೂ.3550 ಗಳನ್ನು ಎಫ್.ಆರ್.ಪಿ ಎಂದು ನಿಗದಿಪಡಿಸಿದೆ. ಇದರಲ್ಲಿ ಮೊದಲೆ ಹೇಳಿದ ಹಾಗೆ 800-900 ರೂಲಪಾಯಿಗಳನ್ನು ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚಗಳಿಗಾಗಿ ಕಳೆದರೆ ರೈತರಿಗೆ ಉಳಿಯುವುದು ರೂ.2650-2750 ರೂಪಾಯಿಗಳು ಮಾತ್ರ. ಆದರೆ ಸರ್ಕಾರವು ಗಟ್ಟಿ ನಿರ್ಧಾರ ಮಾಡಿ ಮತ್ತು ಸರ್ಕಾರ ತನ್ನ ಬೊಕ್ಕಸದಿಂದ 50 ರೂಪಾಯಿಗಳನ್ನು ಟನ್ನಿಗೆ ಒದಗಿಸಿ ಶೇ. 11.25 ರಷ್ಟು ರಿಕವರಿ ಬರುವ ಕಬ್ಬಿಗೆ 3300 ರೂಪಾಯಿಗಳವರೆಗೆ ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕೆಂದು ಆದೇಶಿಸಲಾಗಿದೆ. ಇದರಿಂದ, ರೈತರಿಗೆ ಕಳೆದ ವರ್ಷ ಸಿಗುತ್ತಿದ್ದ ಬೆಳೆಗಳಿಂತ ಸರಾಸರಿ ಒಂದು ಟನ್ನಿಗೆ 300 ರೂಪಾಯಿಗಳಷ್ಟು ಹೆಚ್ಚಿನ ದರ ಸಿಗುತ್ತಿದೆ
ಎಂದು ತಿಳಿಸಿದರು.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕೇಂದ್ರ ಸರ್ಕಾರ ಪ್ರತಿ ಟನ್ ಕಬ್ಬಿನ ಮೇಲೆ ರೂ.150 ಎಫ್.ಆರ್.ಪಿ ಹೆಚ್ಚಿಸಿದೆ. ಆದರೆ, ನಮ್ಮ ಸರ್ಕಾರ ಮಧ್ಯ ಪ್ರವೇಶ ಮಾಡಿದ ಕಾರಣಕ್ಕೆ ರೈತರಿಗೆ ಸರಾಸರಿ 300 ರೂಪಾಯಿಗಳಿಗಿಂತ ಹೆಚ್ಚು ದರ ಪ್ರತಿ ಟನ್ನಿಗೆ ದೊರೆಯುತ್ತಿದೆ ಎಂದು ಹೇಳಿದರು.

ನಮ್ಮ ಸರ್ಕಾರ ಕೇಂದ್ರ ಸರ್ಕಾರವನ್ನು ತೀವ್ರವಾಗಿ ಒತ್ತಾಯಿಸಿದ ಕಾರಣಕ್ಕೆ ಎಥನಾಲ್ ಖರೀದಿ ಪ್ರಮಾಣವನ್ನು ಕೂಡ ತುಸು ಹೆಚ್ಚಿಸಲಾಗಿದೆ ಎಂದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ​ತೂಕದಲ್ಲಿ ನಡೆಯುತ್ತಿದ್ದ ಮೋಸವನ್ನು ತಡೆಗಟ್ಟಲು ಎಲ್ಲಾ ಸಕ್ಕರೆ ಕಾರ್ಖಾನೆಗಳಲ್ಲಿ ಹಾಲಿ ಇದ್ದ ಹಳೆ ಮಾದರಿಯ (ಅನಲಾಗ್) ತೂಕದ ಯಂತ್ರಗಳ ಬದಲಾಗಿ ಡಿಜಿಟಲ್ ತೂಕ ಯಂತ್ರಗಳನ್ನು ಅಳವಡಿಸಲಾಗಿದೆ. ಸರ್ಕಾರದ ವತಿಯಿಂದಲೇ ಎಪಿಎಂಸಿ ಇರುವ ಕಡೆ ಉಚಿತವಾಗಿ ತೂಕವನ್ನು ಧೃಢೀಕರಿಸಿಕೊಂಡು ಹೆೋಗಲು ಡಿಜಿಟಲ್ ಕಬ್ಬು ತೂಕ ಮಾಡುವ ಸೇತುವೆಗಳನ್ನು (ವೇಯಿಂಗ್ ಬ್ರಿಡ್ಜ್) ಗಳನ್ನು 11 ಜಾಗಗಳಲ್ಲಿ ಅಳವಡಿಸಲು ಕ್ರಮವಹಿಸಲಾಗುತ್ತಿದೆ ಎಂದು ಹೇಳಿದರು.

​ಅಲ್ಲದೆ, ಎಲ್ಲಾ ಸಕ್ಕರೆ ಕಾರ್ಖಾನೆಗಳಲ್ಲಿ ಸಕ್ಕರೆ ಇಳುವರಿ ಅಳತೆ ಮಾಡುವ ಉಪಕರಣಗಳನ್ನು National Accreditation Board for Testing and Calibration Laboratories (NABL)ಇವರಿಂದ ಕಡ್ಡಾಯವಾಗಿ ಮಾನ್ಯತೆ ಪಡೆದುಕೊಳ್ಳಲು ಷರತ್ತು ವಿಧಿಸಲಾಗಿದೆ. ಹಾಗೂ ಪ್ರತಿ ಸಕ್ಕರೆ ಕಾರ್ಖಾನೆಗಳಲ್ಲಿ ಸಕ್ಕರೆ ಇಳುವರಿ ಪ್ರಮಾಣವನ್ನು ಪರಿಶೀಲಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಾಗೃತ ದಳ ರಚಿಸಲಾಗಿದೆ. ಸದರಿ ತಂಡವರಿಗೆ ಸರ್ಕಾರಿ ಸ್ವಾಮ್ಯದ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಸಕ್ಕರೆ ತಜ್ಞರಿಂದ ಸಕ್ಕರೆ ಇಳುವರಿ ಪರಿಶೀಲನೆ ಮಾಡುವ ಕುರಿತು ತರಬೇತಿ ನೀಡಲಾಗಿದೆ. ಶೇ.10 ಇಳುವರಿ ಕಡಿಮೆ ಇರುವ ಸಕ್ಕರೆ ಕಾರ್ಖಾನೆಗಳಿಗೆ ಸಕ್ಕರೆ ತಜ್ಞರ ನೇತೃತ್ವದಲ್ಲಿ (ವಿಜಿಲೆನ್ಸ್ ಟೀಮ್) ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.

​ಇದರ ಜೊತೆಗೆ ತೂಕ, ಇಳುವರಿ, ಕಟಾವು ಮತ್ತು ಬಿಲ್ ಪಾವತಿಗಳಿಗೆ ಸಂಬಂಧಪಟ್ಟಂತೆ ಪರಿಶೀಲನೆಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿಗಳನ್ನು ರಚಿಸಲಾಗಿದೆ ಎಂದರು.

​ಯಾವುದೇ ಸಕ್ಕರೆ ಕಾರ್ಖಾನೆಯಲ್ಲಿ ತೂಕದಲ್ಲಿ ಮೋಸ ಆಗುತ್ತಿರುವ ಬಗ್ಗೆ ಯಾವುದೇ ರೈತರು ಲಿಖಿತ ದೂರು ನೀಡಿದಲ್ಲಿ, 5 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದೆಂದು ಘೋಷಿಸಲಾಗಿದೆ. ಅಂತಹ ರೈತರ ಕಬ್ಬನ್ನು ಸಹ ಸರ್ಕಾರದ ವತಿಯಿಂದ ಉಚಿತವಾಗಿ ನುರಿಸಲಾಗುತ್ತದೆ ಎಂದು ತಿಳಿಸಿದರು.

2024-25 ನೇ ಸಾಲಿನಲ್ಲಿ ರೈತರಿಗೆ ಈ ಅವಧಿಯಲ್ಲಿ 18,221.88 ಕೋಟಿ ರೂ. ಗಳನ್ನು ಎಫ್.ಆರ್.ಪಿ. ದರದಂತೆ ಪಾವತಿಸಬೇಕಾಗಿತ್ತು. ಆದರೂ ಸಹ ಕೆಲವು ಕಡೆ ರಿಕವರಿ (ಸಕ್ಕರೆ ಇಳುವರಿ) ಹೆಚ್ಚು ಬಂದ ಕಾರಣ 19,569.15 ಕೊಟಿ ರೂ. ಗಳನ್ನು ರೈತರಿಗೆ ಪಾವತಿಸುವಂತೆ ನೋಡಿಕೊಳ್ಳುವಲ್ಲಿ ರಾಜ್ಯ ಸರ್ಕಾರವು ಕ್ರಮ ಕೈಗೊಂಡಿದೆ ಎಂದು ನುಡಿದರು.

Share

Leave a comment

Leave a Reply

Your email address will not be published. Required fields are marked *