SUDDIKSHANA KANNADA NEWS/DAVANAGERE/DATE:19_12_2025
ಬೆಳಗಾವಿ: ಬಾಗಲಕೋಟೆ ಜಿಲ್ಲೆಯ ಕಬ್ಬಿನ ಟ್ರ್ಯಾಕ್ಟರ್, ಇನ್ನಿತರೆ ವಾಹನಗಳು ಹಾಗೂ ಕಬ್ಬನ್ನು ಸುಟ್ಟಿರುವ ಘಟನೆ ಸಂಬಂಧ ಸಿಎಂ ಸಿದ್ದರಾಮಯ್ಯ ಸ್ಫೋಟಕ ಮಾಹಿತಿ ನೀಡಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ ಅವರು, ತಾವೇ ಬೆಳೆದ ಬೆಳೆಗೆ ಬೆಂಕಿ ಹಚ್ಚುವಷ್ಟು ನೀಚರಲ್ಲ. ಬೆಂಕಿ ಹಚ್ಚಿದವರಲ್ಲಿ ಸುಮಾರು 13 ಜನ ರೈತರಲ್ಲ ಎಂಬುದು ತಿಳಿದು ಬಂದಿದೆ. ಕಿಡಿಗೇಡಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು
ಮಾಹಿತಿ ನೀಡಿದ್ದಾರೆ.
ಇದಿಷ್ಟನ್ನು ವಿರೊಧ ಪಕ್ಷದ ಸದಸ್ಯರುಗಳು ಕೇಳಿ, ನಮ್ಮ ಸರ್ಕಾರ ರೈತರ ಪರವಾಗಿದೆಯೋ ಅಥವಾ ಮೋದಿಯವರ ಕೇಂದ್ರ ಸರ್ಕಾರ ರೈತರ ಪರವಾಗಿದೆಯೋ ಎಂಬುದನ್ನು ತೀರ್ಮಾನಿಸಬೇಕಾಗಿದೆ ಎಂದು ಹೇಳಿದರು.
ವಿಪಕ್ಷ ನಾಯಕ ಆರ್. ಅಶೋಕ್ ಅವರು ಮಾತನಾಡಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನಲ್ಲಿ ರೈತರು ಕಬ್ಬಿನ ಬೆಲೆ ನಿಗದಿಪಡಿಸಲು ಪ್ರತಿಭಟನೆ ನಡೆಸುತ್ತಿದ್ದಾಗ 250 ಟ್ರಾಕ್ಟರ್ ಸುಟ್ಟಿರುವುದಾಗಿ ಹೇಳಿದ್ದಾರೆ. 1 ಟ್ರ್ಯಾಕ್ಟರ್ ಸಂಪೂರ್ಣ ಸುಟ್ಟು ಹೋಗಿದೆ. 12 ಟ್ರ್ಯಾಕ್ಟರ್ ಗಳ ಇಂಜಿನ್‌ಗಳು ಭಾಗಶಃ ಸುಟ್ಟಿವೆ. 17 ಟ್ರೇಲರ್‌ಗಳ ಟಯರ್, 8 ಮೋಟಾರ್ ಸೈಕಲ್, 3 ಹೆಚ್‌ಜಿವಿ ಟ್ಯಾಂಕರ್ ಇತರೆ ಸೇರಿ ಒಟ್ಟು 43 ವಾಹನಗಳಿಗೆ ಹಾನಿಯಾಗಿತ್ತು. ಇದರಲ್ಲಿ ಕೆಲವು ಜಖಂಗೊಂಡಿವೆ. ಕೆಲವು ಭಾಗಶಃ ಸುಟ್ಟಿವೆ. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಿಂದ ಈ ಹಾನಿ ಮೊತ್ತ ಒಟ್ಟು 25,68,000 ರೂಪಾಯಿಗಳನ್ನು ಸಂಬಂಧಪಟ್ಟ ವಾಹನಗಳ ಮಾಲೀಕರಿಗೆ ಪರಿಹಾರ ವಿತರಿಸಲಾಗಿದೆ. ನಮ್ಮ ಸರ್ಕಾರ ರೈತರ ಮೇಲೆ ಬಲ ಪ್ರಯೋಗ ಮಾಡಬಾರದು ಎಂಬ ಉದ್ದೇಶದಿಂದ ತಕ್ಷಣದ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂದು ತಿಳಿಸಿದರು.





Leave a comment