ದಾವಣಗೆರೆ: ದಾನಚಿಂತಾಮಣಿ, ಸಮಾಜದ ಮುಕುಟ ಮಣಿ, ಹೃದಯ ಶ್ರೀಮಂತಿಕೆಯ ಆಲದ ಮರದಂತಹ ಹಿರಿಯರಾದ ಶರಣ ಶಾಮನೂರು ಶಿವಶಂಕರಪ್ಪರವರು ಇಹಲೋಕ ತ್ಯಜಿಸಿರುವುದು ನಾಡಿಗೆ ದುಃಖ ತರಿಸಿದೆ. ಈ ಹಿನ್ನೆಲೆಯಲ್ಲಿ ಮಠಾಧಿಪತಿಗಳು, ರಾಜಕಾರಣಿಗಳು ಸೇರಿದಂತೆ ಸಮಾಜದ ಮುಖಂಡರು ದಾನಚಿಂತಾಮಣಿಯ ಮಹಾಸ್ಮರಣೆ ಮಾಡಲಾಯಿತು.
ಸಿರಿಗೆರೆಯ ತರಳಬಾಳು ಬೃಹನ್ಮಠದ ಮಠಾಧಿಪತಿ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಈ ಮಹಾಸ್ಮರಣೆ ಜರುಗಿತು. ಈ ವೇಳೆ ಮಾತನಾಡಿದ ಬಹುತೇಕ ಗಣ್ಯರು ಶಾಮನೂರು ಶಿವಶಂಕರಪ್ಪರ ದಾನ, ಧರ್ಮ, ಅಭಿವೃದ್ಧಿ ಕಾರ್ಯಗಳು, ನಾಡಿಗೆ ಕೊಟ್ಟ ಕೊಡುಗೆಗಳು ಸೇರಿದಂತೆ ಹಲವು ವಿಚಾರಗಳ ಕುರಿತಂತೆ ಮಾತನಾಡಿದರು. ದೇಶದ ಅತಿ ಹಿರಿಯ ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪರ ಬದುಕಿನ ಕುರಿತಂತೆ
ಬೆಳಕು ಚೆಲ್ಲಲಾಯಿತು.
ಹಿರಿಯ ಚೇತನ ಶಾಮನೂರು ಶಿವಶಂಕರಪ್ಪರವರ ಪಾರ್ಥಿವ ಶರೀರಕ್ಕೆ ಭಾವ ಪೂರ್ಣ ನಮನ ಸಲ್ಲಿಸಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಶಾಮನೂರು ಶಿವಶಂಕರಪ್ಪರ ಸಹಕಾರ ನೆನೆದರು.
ಕರ್ನಾಟಕ ಸರ್ಕಾರದ ಸಚಿವರಾದ ಎಂ ಬಿ.ಪಾಟೀಲ್ ,ಡಾ. ಜಿ.ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ ಎಸ್. ಎ. ರವೀಂದ್ರನಾಥ್, ಪಿ.ಟಿ.ಪರಮೇಶ್ವರ್ ನಾಯ್ಕ್,ಸಾಧು ಸದ್ಧರ್ಮ ಸಮಾಜದ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪನವರು ಸೇರಿದಂತೆ ಹಲವು ಗಣ್ಯರು ಶಾಮನೂರು ಶಿವಶಂಕರಪ್ಪನವರ ಪುತ್ರ ಹಾಗೂ ಸಚಿವ ಎಸ್ ಎಸ್.ಮಲ್ಲಿಕಾರ್ಜುನ್ ಅವರಿಗೆ ಸಾಂತ್ವನ ಮತ್ತು ಧೈರ್ಯ ತುಂಬುವ ಮೂಲಕ ಶಾಮನೂರು ಶಿವಶಂಕರಪ್ಪ ರವರು ಸಮಾಜ ಮುಖಿ ಕಾರ್ಯಗಳನ್ನು ಸ್ಮರಿಸಿದರು.
- Shamanuru Shivashankarappa
- Shamanuru Shivashankarappa Death
- Shamanuru Shivashankarappa Death news
- Shamanuru Shivashankarappa Mla
- Shamanuru Shivashankarappa News
- Shamanuru Shivashankarappa News Updates
- ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ
- ಶಾಮನೂರು ಶಿವಶಂಕರಪ್ಪ
- ಶಾಮನೂರು ಶಿವಶಂಕರಪ್ಪ ಅಖಿಲ ಭಾರತ ರಾಷ್ಟ್ರೀಯ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ
- ಶಾಮನೂರು ಶಿವಶಂಕರಪ್ಪ ಅಜರಾಮರ
- ಶಾಮನೂರು ಶಿವಶಂಕರಪ್ಪ ಇನ್ನಿಲ್ಲ
- ಶಾಮನೂರು ಶಿವಶಂಕರಪ್ಪ ನೆನಪು ಮಾತ್ರ
- ಶಾಮನೂರು ಶಿವಶಂಕರಪ್ಪ ನ್ಯೂಸ್
- ಶಾಮನೂರು ಶಿವಶಂಕರಪ್ಪ ವಿಧಿವಶ





Leave a comment