Home ದಾವಣಗೆರೆ ಡಿಸೆಂಬರ್ 9ರಿಂದ ನಿಲ್ಲಲಿವೆ ಲಾರಿಗಳು: ಮಾಲೀಕರು ಅನಿರ್ದಿಷ್ಟ ಮುಷ್ಕರ ಕೈಗೊಂಡಿರುವುದೇಕೆ?
ದಾವಣಗೆರೆನವದೆಹಲಿಬೆಂಗಳೂರು

ಡಿಸೆಂಬರ್ 9ರಿಂದ ನಿಲ್ಲಲಿವೆ ಲಾರಿಗಳು: ಮಾಲೀಕರು ಅನಿರ್ದಿಷ್ಟ ಮುಷ್ಕರ ಕೈಗೊಂಡಿರುವುದೇಕೆ?

Share
ಲಾರಿ
Share

SUDDIKSHANA KANNADA NEWS/DAVANAGERE/DATE:03_12_2025

ದಾವಣಗೆರೆ: ಕೇಂದ್ರ ಸರ್ಕಾರದಿಂದ ಲಾರಿಗಳ ಎಫ್‌.ಸಿ ಮತ್ತು ಆರ್.ಆರ್.ಸಿ ಗಳ ಶುಲ್ಕ ರೂ. 1400 ಇದ್ದ ಶುಲ್ಕವನ್ನು 28,000 ರವರೆಗೆ ವರೆಗೆ ಹೆಚ್ಚಿಸಿರುವುದನ್ನು ಖಂಡಿಸಿ, ದಾವಣಗೆರೆ ಲೋಕಲ್ ಮತ್ತು ಗೂಡ್ಸ್ ಶೆಡ್ ಲಾರಿ ಮಾಲೀಕರ ಸಂಘದಿಂದ ಡಿ.9 ರಿಂದ ಲಾರಿಗಳ ಸರಕು ಸಾಗಣೆಯನ್ನು ನಿಲ್ಲಿಸಿ, ಪ್ರತಿಭಟನೆ ಮತ್ತು ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ.

READ ALSO THIS STORY: ಪೋಷಕರೇ ಮರೆಯದೇ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ.. ಡಿ.21 ರಿಂದ 24ರವರೆಗೆ ಅವಕಾಶ…1.40 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ

ಕೇಂದ್ರ ಸರ್ಕಾರ ಲಾರಿಗಳ ಎಫ್.ಸಿ ಮತ್ತು ಆರ್.ಆರ್.ಸಿ ಗಳ ಶುಲ್ಕವನ್ನು ಒಮ್ಮೆಲೆ ಹೆಚ್ಚಿಸಿದ್ದು, ಇದರಿಂದ ತೊಂದರೆ ಉಂಟಾಗಿದೆ. ನಮ್ಮಿಂದ ಅಷ್ಟು ಮೊತ್ತ ಭರಿಸಲು ಸಾಧ್ಯವಾಗುವುದಿಲ್ಲ ಎಂದು ಲಾರಿ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.

ರಾಷ್ಟ್ರಮಟ್ಟದ ಸರಕು ಸಾಗಣೆಗಳಿಗೆ ಸಂಬಂದಪಟ್ಟಂತೆ ಇಡೀ ದೇಶಾದ್ಯಂತ ಇರುವ ಲಾರಿ ಮಾಲೀಕರು ಹಗಲು ರಾತ್ರಿ ಎನ್ನದೇ ಹೆಚ್ಚಿನ ಶ್ರಮ ವಹಿಸಿ ದುಡಿಯುತ್ತಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರದಿಂದ ಲಾರಿಗಳ ಎಫ್.ಸಿ ಮತ್ತು ಆರ್.ಆರ್.ಸಿ ಗಳ ಶುಲ್ಕ ಹೆಚ್ಚಿಸಿರುವುದನ್ನು ರದ್ದುಗೊಳಿಸಿ ಈ ಹಿಂದೆ ಇದ್ದ ಶುಲ್ಕವನ್ನು ಮುಂದುವರೆಸಬೇಕೆಂದು ಸಂಘದ ಅಧ್ಯಕ್ಷ ಎಂ. ದಾದಾಪೀರ್ ಮನವಿ ಮಾಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *