Home ನವದೆಹಲಿ ನನ್ನ ಮತ್ತು ಡಿಸಿಎಂ ಅವರ ಪಕ್ಷ ಮತ್ತು ಸಿದ್ಧಾಂತ ಒಂದೇ, 2028ಕ್ಕೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ತರ್ತೇವೆ: ಸಿದ್ದರಾಮಯ್ಯ ವಿಶ್ವಾಸ
ನವದೆಹಲಿದಾವಣಗೆರೆಬೆಂಗಳೂರು

ನನ್ನ ಮತ್ತು ಡಿಸಿಎಂ ಅವರ ಪಕ್ಷ ಮತ್ತು ಸಿದ್ಧಾಂತ ಒಂದೇ, 2028ಕ್ಕೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ತರ್ತೇವೆ: ಸಿದ್ದರಾಮಯ್ಯ ವಿಶ್ವಾಸ

Share
Share

ಬೆಂಗಳೂರು: ಒಂದೇ ಪಕ್ಷದಲ್ಲಿರುವ ನಾವು ಎಂದಿಗೂ ಬ್ರದರ್ಸ್. ಒಂದೇ ಪಕ್ಷ ಸಿದ್ದಾಂತವನ್ನು ಹೊಂದಿರುವ ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡುವ ಜೊತೆಗೆ 2028ರ ವಿಧಾನಸಭಾ ಚುನಾವಣೆಯನ್ನೂ ಸಹ ಒಟ್ಟಿಗೆ ಎದುರಿಸಿ, ರಾಜ್ಯದಲ್ಲಿ ಪುನ: ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

READ ALSO THIS STORY: ಒಳಗೊಳಗೆ ಗದ್ದುಗೆ ಗುದ್ದಾಟ, ಮೇಲೆ ಎಲ್ಲವೂ ಚೆನ್ನಾಗಿದೆಯೆಂದು ಫೋಸ್ ಕೊಟ್ಟ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್!

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಮತ್ತು ಡಿಸಿಎಂ ಬಗ್ಗೆ ಬ್ರದರ್ಸ್ ಎಂಬ ಮಾತು ಮುನ್ನಲೆಗೆ ಬಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದರು.

ನಮ್ಮ ನಡುವೆ ಯಾವ ಭಿನ್ನಾಭಿಪ್ರಾಯವೂ ಇಲ್ಲ, ರಾಜ್ಯದ ಒಳಿತಿಗಾಗಿ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಸಚಿವಸಂಪುಟ ಪುನರ್ರಚನೆ

ಸಚಿವಸಂಪುಟ ಪುನರ್ರಚನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಸಚಿವ ಸಂಪುಟ ಪುನರ್ರಚನೆ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಿಸಬೇಕಾಗಿದೆ ಎಂದರು.

Share

Leave a comment

Leave a Reply

Your email address will not be published. Required fields are marked *