SUDDIKSHANA KANNADA NEWS/ DAVANAGERE/ DATE:11-08-2024
ದಾವಣಗೆರೆ: ಚಿತ್ರದುರ್ಗದ ಸಿರಿಗೆರೆಯ ತರಳಬಾಳು ಬೃಹನ್ಮಠದ ಶ್ರೀ ತರಳಬಾಳು ಜಗದ್ಗುರು ಡಾ, ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರಿಗೆ ಬೆಂಬಲ ವ್ಯಾಪಕವಾಗಿ ವ್ಯಕ್ತವಾಗುತ್ತಿದೆ. ದಿನ ಕಳೆದಂತೆ ಗ್ರಾಮ ಗ್ರಾಮಗಳಲ್ಲಿಯೂ ಸ್ವತಃ ಮುಖಂಡರೇ ಸ್ವಯಂಪ್ರೇರಿತರಾಗಿ ಸಭೆ ನಡೆಸಿ ನಿರ್ಣಯ ಅಂಗೀಕರಿಸುತ್ತಿದ್ದಾರೆ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರೇ ಪೀಠಾಧಿಪತಿಯಾಗಿ ಮುಂದುವರಿಯಬೇಕೆಂಬ ತೀರ್ಮಾನ ಮಾಡಿ ಶ್ರೀಗಳಿಗೆ ನಿರ್ಣಯ ಪತ್ರ ಕಳುಹಿಸಿಕೊಡುತ್ತಿದ್ದಾರೆ,
ಗ್ರಾಮದಲ್ಲಿ ಸಭೆ ನಡೆಸಿ ಸಿರಿಗೆರೆ ಶ್ರೀಗಳ ವಿರುದ್ಧ ರೆಸಾರ್ಟ್ ನಲ್ಲಿ ಸಭೆ ನಡೆಸಿದವರ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಇಷ್ಟು ದಿನ ಇಲ್ಲದ ಕಾರಣ ಈಗ ಯಾಕೆ ನೀಡುತ್ತಿದ್ದಾರೆ. ಗುರುಗಳು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಇದನ್ನು ಸಹಿಸದ ಸಮಾಜದ ಕೆಲವರು ಈ ರೀತಿ ಅಪಪ್ರಚಾರ ನಡೆಸುತ್ತಿರುವುದು ಸರಿಯಲ್ಲ ಎಂಬ ಖಂಡನಾ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ.
ದಾವಣಗೆರೆ ಭಕ್ತರ ನಿರ್ಣಯದಲ್ಲಿ ಏನಿದೆ…?
ಡಾ ಶ್ರೀ ಶಿವಮೂರ್ತಿ ಮಹಾಸ್ವಾಮಿಗಳವರ ಪಾದಾರವಿಂದಗಳಿಗೆ ಭಕ್ತಿ ಪೂರ್ವಕವಾಗಿ ನಮಸ್ಕರಿಸುತ್ತೇವೆ.
ದಾವಣಗೆರೆ ಜಿಲ್ಲೆಯ ದಾವಣಗೆರೆ ತಾಲೂಕಿನ ಬೆಳಿಯೂರು ಗ್ರಾಮದ ಶ್ರೀ ಮಠದ ಸದ್ಭಕ್ತರಾದ ನಾವುಗಳು ಭಾನುವಾರ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಸಮಾಜದ ಬಂಧುಗಳು ಸಭೆ ನಡೆಸಿ ಪ್ರಸ್ತುತ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸಿ, ಈ ನಿರ್ಣಯಗಳನ್ನು ತೆಗೆದುಕೊಂಡಿರುತ್ತೇವೆ. ಪ್ರಶ್ನಾತೀತವಾಗಿ ಆದಂತೆ ಸಭೆಯಲ್ಲಿ ನಡೆದ ತೀರ್ಮಾನಗಳು, ನಿರ್ಣಯಗಳ ನಡಾವಳಿಯನ್ನು ಈ ಮೂಲಕ ತಮ್ಮ ಪಾದಗಳಿಗೆ ಅರ್ಪಿಸುತ್ತಿದ್ದೇವೆ.
ರೆಸಾರ್ಟ್ ಸಭೆಗೆ ಆಕ್ರೋಶ:
ಸಂಸ್ಥಾನದ ಅಧಿಪತಿಗಳ ಮೇಲೆ ಕೆಲ ಪಟ್ಟಭದ್ರಾ ಅಧಿಕಾರಶಾಹಿ, ಬಂಡವಾಳಾಹಿ ಜನರ ಮಿಥ್ಯಾರೋಪ ಮಾಡುತ್ತಿರುವುದನ್ನು ಜನರು ಒಕ್ಕೊರಲಿನಿಂದ ಖಂಡಿಸಿರುತ್ತೇವೆ. ಆಪಾದನೆ ಮಾಡುತ್ತಿರುವ ಗುಂಪಿನ ವಿರುದ್ಧ ಬಲವಾದ ಪ್ರತಿರೋಧವನ್ನು ಹೊಂದಿರುತ್ತೇವೆ.
ಸಿರಿಗೆರೆ ಶ್ರೀಗಳ ನಿರ್ಣಯಗಳಿಗೆ ಬದ್ಧ:
ಭವಿಷ್ಯದಲ್ಲಿ ಮಠದ ವಿರುದ್ಧವಾಗಿ ಹಾಗೂ ಶ್ರೀಗಳ ವಿರುದ್ಧ ಸುಳ್ಳು ಆಪಾದನೆಗಳಾಗಲೀ, ಆರೋಪಗಳಾಗಲೀ ಬಂದಲ್ಲಿ ಸಮಸ್ತರಾದ ನಾವುಗಳು ನಮ್ಮ ತನು, ಮನ, ಧನವನ್ನು ಅರ್ಪಿಸಿ, ಶ್ರೀಮಠದ ಹಾಗೂ ಶ್ರೀಗಳ ಪರವಾಗಿ, ಪರಮಪೂಜ್ಯ ಶ್ರೀಗಳವರು ತೆಗೆದುಕೊಳ್ಳುವ ನಿರ್ಣಯಗಳಿಗೆ ಸದಾ ಬೆಂಬಲಿಸಲು ಒಮ್ಮತದಿಂದ ತೀರ್ಮಾನಿಸಿರುತ್ತೇವೆ.
ಕಳೆದ ಆಗಸ್ಚ್ 5 ರಂದು ಸಿರಿಗೆರೆಯಲ್ಲಿ ನಡೆದ ಸಭೆಯಲ್ಲಿ ಶ್ರೀಗಳವರು ತೆಗೆದುಕೊಂಡ ಎಲ್ಲಾ ನಿರ್ಣಯಗಳನ್ನು ಭಾಗವಹಿಸಿ, ಖುದ್ದಾಗಿ ಕೇಳಿ, ಸಾಮಾಜಿಕ ಜಾಲತಾಣಗಳು ಹಾಗೂ ಟಿವಿ ಮಾಧ್ಯಮಗಳ ಮೂಲಕ ತಿಳಿದುಕೊಂಡಿರುತ್ತೇವೆ. ಇದನ್ನು ನಾವೆಲ್ಲರೂ ಒಪ್ಪಿಕೊಂಡಿದ್ದೇವೆ.
ಶ್ರೀಗಳೇ ಸುಪ್ರೀಂ:
ಭವಿಷ್ಯದಲ್ಲಿ ಶ್ರೀಮಠದ ಉತ್ತರಾಧಿಕಾರಿ ಆಯ್ಕೆಯ ವಿಚಾರವಾಗಲೀ ಅಥವಾ ಇನ್ನು ಯಾವುದೇ ವಿಚಾರಗಳಲ್ಲಿ ಪರಮಪೂಜ್ಯ ಶ್ರೀಗಳವರು ತೆಗೆದುಕೊಳ್ಳುವ ಯಾವುದೇ ನಿರ್ಣಯಗಳಿಗೆ ನಮ್ಮ ಸಮ್ಮತಿಯಿದ್ದು, ಬೆಂಬಲಿಸುತ್ತೇವೆ.
ಈ ಸಭಾ ನಡಾವಳಿಯನ್ನು ಹಾಜರಿದ್ದ ಸಭಿಕರೆಲ್ಲರ ಸಮಕ್ಷಮದಲ್ಲಿ ಚರ್ಚಿಸಿ ಸರ್ವ ಸಭಿಕರ ಅನುಮೋದನೆಯೊಂದಿಗೆ ಈ ಸಭಾ ನಡಾವಳಿಯ ಠರಾವುಗಳು ಸರ್ವ ಸಮ್ಮತದಿಂದ ಅನುಮೋದಿಸಿರುತ್ತೇವೆ.
ವೀರಶೈವ ಸಂಘದ ಅಧ್ಯಕ್ಷರಿಗೆ ಪತ್ರ ರವಾನೆ:
ಈ ಪತ್ರವನ್ನು ಸಿರಿಗೆರೆಯ ಶ್ರೀಮತ್ ಸಾಧು ಸದ್ಭರ್ಮ ವೀರಶೈವ ಸಂಘದ ಅಧ್ಯಕ್ಷರಿಗೆ ಕಳುಹಿಸಿಕೊಟ್ಟಿದ್ದಾರೆ. ಈ ಮೂಲಕ ಸಿರಿಗೆರೆ ಶ್ರೀಗಳ ಪರವಾಗಿ ಭಕ್ತರು ಗ್ರಾಮ ಗ್ರಾಮಗಳಲ್ಲಿಯೂ ಸಭೆ ನಡೆಸಿ ಬೆಂಬಲ ಸೂಚಿಸುತ್ತಿದ್ದರೆ, ಮತ್ತೊಂದೆಡೆ ರೆಸಾರ್ಟ್ ನಲ್ಲಿ ಸಭೆ ನಡೆಸಿದವರ ವಿರುದ್ಧ ಆಕ್ರೋಶ
ವ್ಯಕ್ತಪಡಿಸುತ್ತಿದ್ದಾರೆ.
ಸಭೆಯಲ್ಲಿ 75 ವರ್ಷದ ಬಿ. ವೈ. ಉಜ್ಜಪ್ಪ, ಪರಮೇಶ್ವರಪ್ಪ, ಧರ್ಮಪ್ಪ, ರುದ್ರೇಶ್, ಕೆ. ಆರ್. ಸುಜನ್, ರಾಮಚಂದ್ರಪ್ಪ, ಬಿ. ಕೆ. ಚೇತನ, ಎಸ್. ಎಂ. ಮಿಥುನ್, ಉಮಾಮಹೇಶ್ವರ, ಮಂಜುನಾಥ, ಹೆಚ್. ಎನ್. ರವಿಕುಮಾರ, ಕೆ. ಬಿ. ಹಾಲೇಶ, ಜಯಪ್ಪ, ಬಸವರಾಜಪ್ಪ, ಕೆ. ಎಂ. ಪ್ರಭು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.